SDPHSS DHARMATHADKA
10/11/2021
ಎಂಟು ಮತ್ತು ಒಂಭತ್ತನೇ ತರಗತಿಯ ವಿದ್ಯಾರ್ಥಿಗಳ ರಕ್ಷಕ ಶಿಕ್ಷಕ ಸಭೆ ಇಂದು ಶಾಲಾ ಸಭಾಂಗಣದಲ್ಲಿ ಜರಗಿತು.
ಶಾಲೆಯ ವ್ಯವಸ್ಥಾಪಕರಾದ ಶ್ರೀ ಎನ್ ಶಂಕರನಾರಾಯಣ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.
ಮುಖ್ಯೋಪಾಧ್ಯಾಯ ಶ್ರೀ ಇ ಎಚ್ ಗೋವಿಂದ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಹೈಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲ ಶ್ರೀ ಎನ್ ರಾಮಚಂದ್ರ ಭಟ್ ಕಾರ್ಯಕ್ರಮಕ್ಕೆ ಶುಭಾಶಂಸನೆ ಹೇಳಿದರು.
ಶಿಕ್ಷಕರಾದ ಶ್ರೀ ಕೆ ರಾಮಕೃಷ್ಣ ಭಟ್, ಉಷಾ ಕೆ ಆರ್ ಉಪಸ್ಥಿತರಿದ್ದರು.
ಮಾತೃ ರಕ್ಷಕ ಮಂಡಳಿಯ ಕಾರ್ಯಕಾರಿ ಸಮಿತಿ ಸದಸ್ಯೆ ವಸಂತಿ ಎಂ ಉಪಸ್ಥಿತರಿದ್ದರು.
ಪ್ರಸ್ತುತ ಸಭೆಯಲ್ಲಿ ಹೊಸ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ವಿದ್ಯಾರ್ಥಿಗಳ ಕಲಿಕೆಯ ಕುರಿತಾಗಿ ಹಲವಾರು ವಿಚಾರಗಳ ಕುರಿತು ಚರ್ಚೆ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಶ್ರೀಮತಿ ಈಶ್ವರಿ ಡಿ, ಶ್ರೀಮತಿ ಶ್ವೇತ ಕುಮಾರಿ ಎಂ ಹಾಗೂ ಶ್ರೀಮತಿ ಸೌಮ್ಯ ಎಂ ಪ್ರಾರ್ಥಿಸಿ
ಶ್ರೀಮತಿ ವಿದ್ಯಾಸರಸ್ವತಿ ಸ್ವಾಗತಿಸಿ, ಶ್ರೀ ಶಶಿಧರ ಕೆ ಧನ್ಯವಾದ ಸಮರ್ಪಿಸಿದರು.
No comments:
Post a Comment