Thursday, September 28, 2017

SAVE WILD LIFE TRUST ಆಶ್ರಯದಲ್ಲಿ ಶ್ರೀ ರಾಮ ಪ್ರಕಾಶ್ , ಶ್ರೀ ಡಿಪಿನ್, ಶ್ರೀ ತೇಜಸ್ ಇವರು ಹಾವುಗಳ ಮತ್ತು ಮೃಗಗಳ ಸಂರಕ್ಷಣೆಯ ಕುರಿತು ಮಕ್ಕಳಿಗೆ ಅರಿವು ಮೂಡಿಸಿದರು.








ಶಾಲಾ ಮಟ್ಟದ ವಿಜ್ಞಾನ ರಸ ಪ್ರಶ್ನೆಯು 28-09-2017ರಂದು ಜರಗಿತು.
ಫಲಿತಾಂಶ 
I ) ಸಾತ್ವಿಕ್ ಕೃಷ್ಣ ಯನ್ 9D 
II ) ಆದಿತ್ಯ ಇ ಯಚ್ 10 D 
III ) ಪ್ರಣವ ಕುಮಾರ್ ಯನ್ X C 


 SCHOOL LEVEL SASTHROLSAVAM

ಶಾಲಾ ಮಟ್ಟದ ವಿವಿಧ ಮೇಳವು 28-09-2017ರಂದು ಜರಗಿತು. 










ವಿದ್ಯಾರ್ಥಿಗಳ ಪಠ್ಯೇತರ ಚಟುವಟಿಕೆಗಳಿಗೆ ಪ್ರೋತ್ಸಾಹದ ಅತ್ಯಗತ್ಯ: ಎಚ್.ಸಿ ರುದ್ರಪ್ಪ




ವಿದ್ಯಾಕೇಂದ್ರಗಳಲ್ಲಿ ಮಕ್ಕಳ ಸಾಂಸ್ಕೃತಿಕ, ಸಂಸ್ಕೃತಿ, ಕಲೆಯ ಬೆಳವಣಿಗೆಗೆ ಪೂರಕವಾದ ಪರಿಶ್ರಮ ನಡೆಯಬೇಕು. ಬೆಳೆಯುವ ಮಕ್ಕಳಿಗೆ ಪ್ರಥಮ ಗುರು ತಾಯಿಯಾದರೆ ನಂತರ ಸ್ಥಾನವನ್ನು ತುಂಬುವುದು ಶಾಲೆ ಮತ್ತು ಶಿಕ್ಷಕರು. ಆದ್ದರಿಂದ ಮಕ್ಕಳ ಭವಿಷ್ಯವನ್ನು ಕಟ್ಟಿಕೊಡುವಲ್ಲಿ ವಿದ್ಯಾಲಯಗಳ ಪಾತ್ರ ಮಹತ್ತರವಾದುದು. ಕಾಸರಗೋಡಿನ ಕನ್ನಡದ ಮಕ್ಕಳು ಕೇರಳ ಹಾಗೂ ಕರ್ನಾಟಕ ರಾಜ್ಯದ ಕೀರ್ತಿ ಪತಾಕೆಯನ್ನು ಹಾರಿಸುವಂತಾಗಲಿ ಎಂದು ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಎಚ್.ಸಿ ರುದ್ರಪ್ಪ ಹೇಳಿದರು.
ಸಿರಿಗನ್ನಡ ಪುಸ್ತಕ ಮಳಿಗೆ ಮತ್ತು ಗಡಿನಾಡ ಸಾಹಿತ್ಯ- ಸಾಂಸ್ಕೃತಿಕ ಅಕಾಡೆಮಿ ಸಂಯುಕ್ತಾಶ್ರಯದಲ್ಲಿ ಕಾಸರಗೋಡು ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಪಯಣ-3 ಹಾಗೂ ದಸರಾ ನಾಡಹಬ್ಬ ಕಾರ್ಯಕ್ರಮವನ್ನು ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.
ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತೊಡಗಿಸಿಕೊಳ್ಳಬೇಕು. ಎಳೆಯ ಪ್ರಾಯದಲ್ಲಿ ಬದುಕು ಕಳೆದುಕೊಳ್ಳುವಂತೆ ಮಾಡುವ ಮಾದಕ ವಸ್ತುಗಳ ಬಗ್ಗೆ ವಿದ್ಯಾರ್ಥಿಗಳು ಜಾಗೃತೆ ವಹಿಸಬೇಕು. ಕಾನೂನು ಬಾಹಿರ ಚಟುವಟಿಕೆಗಳಿಂದ ದೂರವಿದ್ದು ಬದುಕನ್ನು ಹಸನಾಗಿಸಲು ಕಠಿಣ ಪರಿಶ್ರಮ ಪಡಬೇಕು ಎಂದು ಕಿವಿಮಾತು ಹೇಳಿದರು.
ಗಡಿನಾಡ ಸಾಹಿತ್ಯ- ಸಾಂಸ್ಕØತಿಕ ಅಕಾಡೆಮಿ ಕಾಸರಗೋಡು ಅಧ್ಯಕ್ಷ ಕೇಳು ಮಾಸ್ತರ್ ಅಗಲ್ಪಾಡಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಸಮಾಜ ಸೇವಕ ಕಕ್ವೆ ಶಂಕರ ಭಟ್, ನಾಟಿ ವೈದ್ಯ ಮಹಮ್ಮದ್ ಅವರನ್ನು ಗೌರವಿಸಲಾಯಿತು. ಮುಖ್ಯ ಅತಿಥಿಯಾಗಿ ಪುತ್ತಿಗೆ ಗ್ರಾ.ಪಂ ಸದಸ್ಯ ಚನಿಯ ಪಾಡಿ, ಕಾಸರಗೋಡು ಕೇಂದ್ರೀಯ ವಿ.ವಿ ಪೆರಿಯಾದ ಸಮಾಜಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಲಕ್ಷ್ಮೀ, ಶ್ರೀ ದುರ್ಗಾಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆಯ ಪ್ರಬಂಧಕ ಎನ್. ಶಂಕರನಾರಾಯಣ ಭಟ್, ರಕ್ಷಕ-ಶಿಕ್ಷಕ ಸಮಿತಿ ಅಧ್ಯಕ್ಷ ಚೇವಾರು ಶಂಕರ ಕಾಮತ್, ಕೇರಳ ಗಡಿನಾಡ ಜಾನಪದ ಪರಿಷತ್ತು ಇದರ ಅಧ್ಯಕ್ಷ ಎ.ಆರ್ ಸುಬ್ಬಯ್ಯಕಟ್ಟೆ, ಜಯಲಕ್ಷ್ಮೀ, ಸಂಧ್ಯಾಗೀತಾ ಗುಂಪೆ, ಮನು ಪಣಿಕ್ಕರ್ ಉಪಸ್ಥಿತರಿದ್ದು ಶುಭಹಾರೈಸಿದರು.
ಶಾಲಾ ವಿದ್ಯಾರ್ಥಿಗಳು ಪ್ರಾರ್ಥನಾ ಗೀತೆ ಹಾಡಿದರು.ಗಡಿನಾಡು ಸಾಹಿತ್ಯ- ಸಾಂಸ್ಕೃತಿಕ ಅಕಾಡೆಮಿ ಇದರ ಕಾರ್ಯದರ್ಶಿ ಅಖಿಲೇಶ್ ನಗುಮುಗಂ ಸ್ವಾಗತಿಸಿ, ನಿವೃತ್ತ ಪ್ರಾಂಶುಪಾಲ ಪ್ರೊ.. ಶ್ರೀನಾಥ್ ಕಾರ್ಯಕ್ರಮ ನಿರೂಪಿಸಿದರು.ಶಾಲಾ ಪ್ರಾಂಶುಪಾಲ ರಾಮಚಂದ್ರ ಭಟ್ ವಂದಿಸಿದರು.
ಬಳಿಕ ನಡೆದ ವ್ಯಂಗ್ಯಚಿತ್ರ ರಚನಾ ಕಮ್ಮಟದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ವ್ಯಂಗ್ಯಚಿತ್ರಕಾರ ವಿರಾಜ್ ಅಡೂರ್ ಭಾಗವಹಿಸಿ ವಿದ್ಯಾರ್ಥಿಗಳಿಗೆ ವ್ಯಂಗ್ಯಚಿತ್ರ ರಚನೆಯ ಬಗ್ಗೆ ಮಾಹಿತಿ ನೀಡಿದರು.









ಸಭಾ ಕಾರ್ಯಕ್ರಮದ ನಂತರ ಮಕ್ಕಳಿಂದ ಕಾರ್ಯಕ್ರಮ ವೈವಿಧ್ಯ ನಡೆಯಿತು. 
ಕಾರ್ಯಕ್ರಮದ ಭಾಗವಾಗಿ ಮಕ್ಕಳಿಗೆ ವ್ಯoಗ್ಯ ವಹಿತ್ರ ಕಾರ್ಯಾಗಾರ ವನ್ನು ಶ್ರೀ ವಿರಾಜ್ ಅಡೂರು ನಡೆಸಿ ಕೊಟ್ಟರು. 






27-09-2017ರಂದು ಶಾಲಾ ರಕ್ಷಕ ಶಿಕ್ಷಕ ಸಂಘದ ಮಹಾಸಭೆಯು ನಡೆಯಿತು. PTA ಅಧ್ಯಕ್ಷರಾದ ಶ್ರೀ ಶಂಕರ ಕಾಮತ್ ಅಧ್ಯಕ್ಷತೆ ವಹಿಸಿದರು. ಶಾಲಾ ಮ್ಯಾನೇಜರ್ ಶ್ರೀ  ಶಂಕರ ನಾರಾಯಣ ಭಟ್ ಶುಭ ಹಾರೈಸಿದರು. ಪ್ರಾಂಶುಪಾಲರಾದ ಶ್ರೀ ಯನ್ ರಾಮಚಂದ್ರ ಭಟ್ ರಕ್ಷಕರ ಜವಾಬ್ದಾರಿಯನ್ನು ನೆನಪಿಸಿದರು. 
ಅರೋಗ್ಯ ಇಲಾಖೆಯ ಅರೋಗ್ಯ ಅಧಿಕಾರಿಗಳು, ಸಹಾಯಕರು ಇಲಾಖೆಯಿಂದ ನೀಡುವ ಚುಚ್ಚುಮದ್ದುಗಳ ಕುರಿತು ಮಾಹಿತಿ ನೀಡಿದರು. 









ದೇಶಾಭಿಮಾನಿ ಅಕ್ಷರಮುಟ್ಟಂ ರಸಪ್ರಶ್ನೆಯು 27-09-2017ರಂದು ನಡೆಯಿತು. 
ಫಲಿತಾಂಶ 
I ) ಸಾತ್ವಿಕ್ ಕೃಷ್ಣ ಯನ್ 9D 
II ) ಅಪೂರ್ವ ಎಡಕ್ಕಾನ 10C


ಶಾಲಾ ಮಟ್ಟದ ಗಣಿತ ರಸಪ್ರಶ್ನೆಯು 27-09-2017ರಂದು ನಡೆಯಿತು. 
ಫಲಿತಾಂಶ 
I ) ಕೃಷ್ಣ ಶರ್ಮ X C 
II ) ವಿಶ್ವಜಿತ್ ಕೆ 8 C 
III ) ಪ್ರಣವ ಕುಮಾರ್ ಯನ್ X C 

 
ಶಾಲಾ ಪಾರ್ಲಿಮೆಂಟ್ ಚುನಾವಣೆ ನಡೆದು ಆಯ್ಕೆಯಾದ SPL,ASPL ಹಾಗೂ ಗೃಹ , ಕೃಷಿ , ಆರೋಗ್ಯ , ಸಾಂಸ್ಕೃತಿಕ  ಸಚಿವರು ಶಾಲಾ ವಿಶೇಷ ಎಸೆಂಬ್ಲಿಯಲ್ಲಿ ಪ್ರತಿಜ್ಞೆ ಸ್ವೀಕರಿಸಿದರು. ಶಾಲಾ ಪ್ರಾಂಶುಪಾಲರಾದ ಶ್ರೀ ಯನ್ ರಾಮಚಂದ್ರ ಭಟ್ ಪ್ರತಿಜ್ಞೆ ಭೋದಿಸಿದರು.



Tuesday, September 26, 2017

ಪ್ರಧಾನಿ ನರೇಂದ್ರ ಮೋದಿಯವರ "ಸ್ವಚ್ಛತೆಯ  ಸೇವೆ"ಗೆ ನಮ್ಮ ಶಾಲೆಯ ಮಕ್ಕಳಿಗೆ  ಏರ್ಪಡಿಸಿದ ಸ್ಪರ್ಧೆಗಳು



ಪ್ರಧಾನಿ ನರೇಂದ್ರ ಮೋದಿಯವರ "ಸ್ವಚ್ಛತೆಯ  ಸೇವೆ"ಗೆ ಧರ್ಮತ್ತಡ್ಕ ದುರ್ಗಾಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಚಾಲನೆ :
 ದಿನಾಂಕ 25-09-2017ನೇ ಸೋಮವಾರದಂದು ಶಾಲೆಯಲ್ಲಿ PTA ಅಧ್ಯಕ್ಷರಾದ ಶ್ರೀ ಶಂಕರ ಕಾಮತ್ ಇವರಿಂದ ಚಾಲನೆ. ಶಾಲಾ ಮ್ಯಾನೇಜರ್ ಶ್ರೀ ಯನ್ ಶಂಕರ ನಾರಾಯಣ ಭಟ್ , ಪ್ರಾಂಶುಪಾಲರಾದ ಶ್ರೀ ಯನ್ ರಾಮಚಂದ್ರ ಭಟ್, ಎಯುಪಿ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಯನ್ ಮಹಾಲಿಂಗ ಭಟ್ ಶುಭ ಹಾರೈಸಿದರು. 

 
ಶಾಲಾ ಕ್ರೀಡಾಮೇಳ 2017 - 2018 

2017- 2018ರ ಶಾಲಾ ಕ್ರೀಡೋತ್ಸವವು ತಾ 25-09-2017ರ ಸೋಮವಾರದಂದು ವಿವಿಧ ಸ್ಪರ್ಧೆಗಳೊಂದಿಗೆ ಯಶಸ್ವಿಯಾಗಿ ನೆರವೇರಿತು. ಶಾಲಾ PTA ಅಧ್ಯಕ್ಷರಾದ ಶ್ರೀಯುತ ಶಂಕರ ಕಾಮತ್  ಇವರು ಕ್ರೀಡಾಮೇಳವನ್ನು ಔಪಚಾರಿಕವಾಗಿ ಉದ್ಘಾಟಿಸಿದರು. ಶಾಲಾ ಮೆನೇಜರ್ ಶ್ರೀ ಯನ್ ಶಂಕರ ನಾರಾಯಣ ಭಟ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಶಾಲಾ ಪ್ರಾಂಶುಪಾಲರಾದ ಶ್ರೀ ಯನ್ ರಾಮಚಂದ್ರ ಭಟ್ ಶುಭ ಹಾರೈಸಿದರು. ಹಿರಿಯ ಅಧ್ಯಾಪಕರಾದ ಶ್ರೀಯುತ ನರಸಿಂಹ ರಾಜ್ ಸರ್ ಧನ್ಯವಾಧ ಸಮರ್ಪಿಸಿದರು. 

ವಿವಿಧ ಸ್ಪರ್ಧೆಗಳು ಬೆಳಗ್ಗೆ  10.30ಯಿಂದ  ಮಧ್ಯಾಹ್ನ 3.30ರವರೇಗೆ ನಡೆದವು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಮೆನೇಜರ್ ಶ್ರೀ ಶಂಕರ ನಾರಾಯಣ ಭಟ್ ಸರ್ ಅವರು ನಿರ್ವಹಿಸಿದರು. ಶ್ರೀ ಯನ್ ಮಹಾಲಿಂಗ ಭಟ್ ಮುಖ್ಯ ಅತಿಥಿಗಳಾಗಿ ಶುಭ ಹಾರೈಸಿದರು. ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ಶ್ರೀ ಗೋವಿಂದ  ಭಟ್ ಧನ್ಯವಾದ ಸಮರ್ಪಿಸುದರೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು. ಶ್ರೀಯುತ ಸತೀಶ್ ಕುಮಾರ್ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು.