Saturday, June 24, 2017
Wednesday, June 21, 2017
ವಿಶ್ವ ಯೋಗ ದಿನ
ಧರ್ಮತ್ತಡ್ಕದಲ್ಲಿ ಜೂನ್ ೨೧ ೨೦೧೭ ರಂದು ಧರ್ಮತಡ್ಕ ಶ್ರೀ ದುರ್ಗಾಪರಮೇಶ್ವರಿ ಹೈಯರ್ ಸೆಕಂಡರಿ ಶಾಲೆಯಲ್ಲಿ ಕಾಸರಗೋಡು ಜಿಲ್ಲಾ ಮಟ್ಟದ ವಿಶ್ವ ಯೋಗ ಕಾರ್ಯಕ್ರಮಗಳ ಉದ್ಘಾಟನೆ ನಡೆಯಿತು . ಕಾಸರಗೋಡು ಜಿಲ್ಲಾ ವಿದ್ಯಾಭ್ಯಾಸ ಉಪನಿರ್ದೇಶಕರಾದ ಶ್ರೀ ಇ . ಕೆ ಸುರೇಶ್ ಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶಾಲಾ ಮೆನೇಜರ್ ಶ್ರೀ ಯನ್ . ಶಂಕರನಾರಾಯಣ ಭಟ್ ಅಧ್ಯಕ್ಷತೆ ವಹಿಸಿದರು. ಶ್ರೀ ದಿನೇಶ್ ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ, ಡಾ। ಸೀತಾರತ್ನ , ಶ್ರೀ ಜಾನ್ ಡಿ ಸೋಜ , ದೈಹಿಕ ಶಿಕ್ಷಕರಾದ ಅಶೋಕನ್ ಶುಭಾಶಂಸನೆ ಗೈದರು.
ಯೋಗ ಗುರು ಕಾಸರಗೋಡು ಮೊಗ್ರಾಲ್ ಪುತ್ತೂರು ಶಾಲೆಯ ದೈಹಿಕ ಶಿಕ್ಷಕರಾದ ಶ್ರೀ ಗೋಪಾಲ ಕೃಷ್ಣ ಭಟ್ ನೂರಕ್ಕಿಂತ ಅಧಿಕ ವಿದ್ಯಾರ್ಥಿಗಳಿಗೆ ಯೋಗ ತರಬೇತಿ ನೀಡಿದರು
ಶ್ರೀ ಯನ್ ರಾಮಚಂದ್ರ ಭಟ್ ಪ್ರಾಂಶುಪಾಲರು ಸ್ವಾಗತಿಸಿ, ಧರ್ಮತಡ್ಕ ಯು.ಪಿ ಶಾಲಾ ಮುಖ್ಯೋಪಾಯರಾದ ಶ್ರೀ ಯನ್ ಮಹಾಲಿಂಗ ಭಟ್ ಧನ್ಯವಾದ ಸಮರ್ಪಿಸಿದರು, ಅಧ್ಯಾಪಕರಾದ ಸತೀಶ್ ಕುಮಾರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು
Monday, June 19, 2017
ಶ್ರೀ ದುರ್ಗಾಪರಮೇಶ್ವರಿ ಹೈಸ್ಕೂಲ್ ಧರ್ಮತ್ತಡ್ಕದಲ್ಲಿ ಜೂನ್ 15 ರಂದು ಹದಿಹರೆಯದ ಸಮಸ್ಯೆ, ಆರೋಗ್ಯ ಸಂರಕ್ಷಣೆ ಮತ್ತು ಶುಚಿತ್ವದ ತರಬೇತಿ ಕಾರ್ಯಾಗಾರ ನಡೆಯಿತು. ಈ ಕಾರ್ಯಾಗಾರವನ್ನು ಆಯುರ್ವೇದ ಆಸ್ಪತ್ರೆ ಧರ್ಮತ್ತಡ್ಕದ ಆರೋಗ್ಯಾಧಿಕಾರಿಯಾದ ಡಾ | ಸೀತಾರತ್ನ ಉದ್ಘಾಟಿಸಿದರು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ರಾಮಚಂದ್ರ ಭಟ್ ಶುಭಾಶಂಸನೆಗೈದರು. ಅಧ್ಯಾಪಕರಾದ ಶ್ರೀ ರಾಮಕೃಷ್ನ ಭಟ್ ಸ್ವಾಗತಿಸಿದರು.
Subscribe to:
Posts (Atom)