Tuesday, August 15, 2017

71ನೇ ಸ್ವಾತಂತ್ರೋತ್ಸವ

ಧರ್ಮತ್ತಡ್ಕ: ಶ್ರೀ ದುರ್ಗಾಪರಮೇಶ್ವರೀ ಹೈಯರ್ ಸೆಕೆಂಡರಿ ಶಾಲೆ ಧರ್ಮತ್ತಡ್ಕದಲ್ಲಿ 71ನೇ ಸ್ವಾತಂತ್ರೋತ್ಸವವು ಶಾಲಾ ಪ್ರಾಂಶುಪಾಲರಾದ ಶ್ರೀಯುತ ಎನ್ ರಾಮಚಂದ್ರ ಭಟ್ ರವರು ಧ್ವಜಾರೋಹಣ ಗೈಯುವುದರೊಂದಿಗೆ ಆರಂಭವಾಯಿತು. ಶ್ರೀ ಎನ್ ಶಂಕರನಾರಾಯಣ ಭಟ್ ವ್ಯವಸ್ಥಾಪಕರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಶಂಕರ ಕಾಮತ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭಹಾರೈಸಿದರು. ಶಾಲಾ ಪ್ರಾಂಶುಪಾಲರ ಶುಭಹಾರೈಕೆಯೊಂದಿಗೆ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ನಡೆಯಿತು. ವಿದ್ಯಾರ್ಥಿಗಳಿoದ ಸ್ವಾತಂತ್ರಕೆ ಸಂಭದಿಸಿದ ವಿವಿಧ ಕಾರ್ಯಕ್ರಮವು ನಡೆಯಿತು. ವಿದ್ಯಾರ್ಥಿಗಳಾದ ಧೀಶ ಗಣ್ಯರನ್ನು ಸ್ವಾಗತಿಸಿ,ಬಿಂದು ವಂದಿಸಿದಳು. ಜೈನಭತ್ ಅಜ್ಮೀನ ಕಾರ್ಯಕ್ರಮ ನಿರೂಪಿಸಿದಳು. ಲಘು ಫಲಹಾರದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು. 










ಪ್ರತಿಭಾ ಪುರಸ್ಕಾರ 

2016-2017 ನೇ ಶೈಕ್ಷಣಿಕ ವರ್ಷದಲ್ಲಿ 10 ನೇ ತರಗತಿಯಲ್ಲಿ ಉತ್ತಮ ಅಂಕಗಳಿಸಿದ, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಮೆಪೋಡು ಸುಬ್ರಾಯ ಮಯ್ಯರ ಸ್ಮರಣಾರ್ಥ ಅವರ ಮನೆಯವರು ನೀಡುವ ಪ್ರತಿಭಾ ಪುರಸ್ಕಾರ ಧನ ಸಹಾಯವನ್ನು ನೀಡಲಾಯಿತು. ವಿದ್ಯಾರ್ಥಿನಿಯರಾದ ಶ್ರೀ ದೇವಿ ಇ, ಅನನ್ಯ ಎಂ ಮತ್ತು ಸುಶಿತ ಪಿ ಇವರು ಈ ಪುರಸ್ಕಾರವನ್ನು ಶಾಲಾ ಗಣ್ಯರಿಂದ 71ನೇ ಸ್ವಾತಂತ್ರ ದಿನದಂದು ಸ್ವೀಕರಿಸಿದರು. 



 
ಶಾಲಾ ಮಟ್ಟದ ಸಬ್ ಜೂನಿಯರ್ ಮಟ್ಟದ ಚೆಸ್ ಸ್ಪರ್ಧೆಯ ವಿಜೇತ - ವಿಕಾಸ್ K  H (8 D)




ಸ್ವಾತಂತ್ರ್ಯ ದಿನದ ಅಂಗವಾಗಿ IX D ಮಕ್ಕಳು  ತಯಾರಿಸಿದ ಹಿಂದಿ ಮ್ಯಾಗಝಿನ್ ನನ್ನು ಸಭಾ ಕಾರ್ಯಕ್ರಮದಲ್ಲಿ ಶಾಲಾ PTA  PRESIDENT  ಶ್ರೀ ಶಂಕರ್ ಕಾಮತ್ ಸರ್ ಅವರು ಬಿಡುಗೋಡೆಗಳಿಸಿದರು. 


Monday, August 14, 2017

SATHWIK KRISHNA 9D & PRANAVA KUMAR 10C ( TEAM) OF SDPHSS DHARMATHADKA BAGGED 2ND PLACE IN DISTRICT LEVEL RAMAYANA QUIZ( SANSKRIT) HELD 14-08-2017 ((UNDER KASARAGOD EDN DISTRICT SANSKRIT COUNCIL @ GUPS KASARAGOD.))