Thursday, June 27, 2019

ಶ್ರೀ ದುರ್ಗಾ ಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆ ಧರ್ಮತ್ತಡ್ಕಯಲ್ಲಿ ಲಿಟಲ್ ಕೈಟ್ಸ್ ನ ಉದ್ಘಾಟನೆ : ಸ್ಪರ್ಧಾತ್ಮಕ ತಾಂತ್ರಿಕ ಯುಗದಲ್ಲಿ  ಸ್ಪರ್ಧಾತ್ಮಕ ಮನೋಭಾವ ಮಕ್ಕಳಲ್ಲಿ ಬೆಳೆಸಲು ಮಾಹಿತಿ ತಂತ್ರಜ್ಞಾನವು ಬಹಳ ಪ್ರಯೋಜನಕಾರಿ ಎಂದು ಧರ್ಮತ್ತಡ್ಕ  ಶಾಲಾ ವಿದ್ಯಾಲಯದ ಮುಖ್ಯೋಪಾಧ್ಯಾಯರಾದ  ಎನ್. ರಾಮಚಂದ್ರ ಭಟ್ ತಿಳಿಸಿದರು.ಇವರು ಶಾಲಾ ಲಿಟಲ್ ಕೈಟ್ಸ್ ಕ್ಲಬ್ ನ್ನು ಉದ್ಘಾಟಿಸಿ ಕ್ಲಬ್ ನ ಸದಸ್ಯರಿಗೆ ಶುಭ ಹಾರೈಸಿದರು. 25 ಸದಸ್ಯರಿರುವ ಕ್ಲಬ್ ಗೆ ಶಾಲಾ ಶಿಕ್ಷಕರಾದ ಶ್ರೀ ಈ ಯಚ್ ಗೋವಿಂಧ ಭಟ್ ಶುಭ ಹಾರೈಸಿದರು. ಕ್ಲಬ್ ನ ಸಂಚಾಲಕರಾದ ಶ್ರೀ ಶಶಿಕುಮಾರ್ ಸ್ವಾಗತಿಸಿ, ಉಪಸಂಚಾಲಕರಾದ ಶ್ರೀ ಪ್ರದೀಪ್ ಕರುವಜೆ  ವಂದಿಸಿದರು. ಶ್ರೀಮತಿ ಸೌಮ್ಯ ಕಾರ್ಯಕ್ರಮ ನಿರೂಪಿಸಿದರು. ಸದಸ್ಯರಿಗೆ ಒಂದು ದಿನದ ವಿಶೇಷ ತರಬೇತಿಯನ್ನು ನೀಡಲಾಯಿತು. 









Wednesday, June 26, 2019

ಕಾಸರಗೋಡು ಸರಕಾರಿ ಆಸ್ಪತ್ರೆಯ tribal wing ನ ನೇತೃತ್ವದಲ್ಲಿ ಇಂದು ಧರ್ಮತ್ತಡ್ಕ ಗ್ರಂಥಾಲಯದ ಪರಿಸರದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗಾಗಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ನಡೆಯಿತು.ಇದರಲ್ಲಿ ನಮ್ಮ ಶಾಲೆಯ ಸುಮಾರು 60 SC/ ST ಮಕ್ಕಳು ಭಾಗವಹಿಸಿದರು.


Sunday, June 23, 2019