Friday, May 22, 2020

https://docs.google.com/forms/d/e/1FAIpQLSckfS6Q3NEEknJpVVUXH_4STJNWr8gRcMTWKiOYvUJsDIte8w/viewform


Admission Started

ಶಾಲಾ ಪ್ರವೇಶಾತಿ ಆರಂಭ

 ಧರ್ಮತ್ತಡ್ಕ ಪ್ರೌಢ  ಶಾಲೆಗೆ ಆನ್ಲೖೆನ್ ಮೂಲಕ ಶಾಲಾ ಪ್ರವೇಶ(school Admission) ಪಡೆಯಬಹುದು. ಇದರೊಂದಿಗೆ ಇರುವ ಲಿಂಕ್ ಬಳಸಿ ಇಂದೇ ಪ್ರವೇಶದಾಖಲಾತಿ ಮಾಡಿಕೊಳ್ಳಬಹುದು.🏃‍♂️🏃🏻‍♀️

ಸೂಚನೆ👉 ಆನ್ಲೈನ್ ಅರ್ಜಿಯನ್ನು ಪೂರ್ತಿಗೊಳಿಸಿದ ಬಳಿಕ, ಹೆತ್ತವರು ಮಗುವಿನ TC/ಜನನ ಪ್ರಮಾಣಪತ್ರ ದಾಖಲೆಗಳೊಂದಿಗೆ ಶಾಲೆಗೆ ಬಂದು, ದಾಖಾಲಾತಿಯ ಪ್ರಕ್ರಿಯೆಯನ್ನು ಪೂರ್ತಿಗೊಳಿಸಬೇಕು






OR SCAN THE QR CODE







"ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವ ಹಾಗೂ ಬದುಕಿನ ಗುರಿ ಸಾಧನೆ" ಎಂಬ ವಿಷಯದ ಕುರಿತು ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಶ್ರೀಯುತ ನವೀನ್ ಎಲ್ಲಂಗಳ Naveen Ellangala ತರಗತಿಯನ್ನು ನಡೆಸಿಕೊಟ್ಟರು










Fire & Safety class




SSLC SEND OFF FUNCTION







"BREAK THE CHAIN" Campaign against Corona Virus........


ಭಾರತದ ಸಂವಿಧಾನದಿನದ ಅಂಗವಾಗಿ ಶಾಲೆಯ ವಿದ್ಯಾರ್ಥಿಗಳಿಗೆ ಪ್ರತಿಜ್ಞೆ ಬೋಧಿಸಲಾಯಿತು.

ಜಿಲ್ಲಾ ಶಿಕ್ಷಣಾಧಿಕಾರಿ ಶ್ರಿ ನಂದಿಕೇಶನ್ ಹಾಗೂ ಸಮಗ್ರ ಕೇರಳ ಶಿಕ್ಷಣ ಅಭಿಯಾನದ ಪ್ರೋಗ್ರಾಮಿಂಗ್ ಆಫೀಸರ್ ಶ್ರಿ ನಾರಾಯಣ ದೇಲಂಪಾಡಿ ನಮ್ಮ ಶಾಲೆಗೆ ಆಗಮಿಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಯ ಪೂರ್ವತಯಾರಿ ಹಾಗೂ ಫಲಿತಾಂಶ ಉತ್ತಮ ಪಡಿಸಲು ಅಧ್ಯಾಪಕರಿಗೆ ಮಾಹಿತಿ, ಸಲಹೆ ನೀಡಿದರು.
ಈ ಸಂಧರ್ಭದಲ್ಲಿ ಶಾಲಾ ವ್ಯವಸ್ಥಾಪಕ ಶ್ರಿ ಎನ್ ಶಂಕರನಾರಾಯಣ ಭಟ್,
ಶಾಲಾ ಮುಖ್ಯಶಿಕ್ಷಕ ಇ ಎಚ್ ಗೋವಿಂದ ಭಟ್ ಜೊತೆಗಿದ್ದರು






10th PTA Meeting
09.01.2020







ಓಡಿಸ್ಸಾದಲ್ಲಿ ಜರಗುವ ರಾಷ್ಟ್ರ ಮಟ್ಟದ ಸಾಫ್ಟ್ ಬಾಲ್ ಪಂದ್ಯಾಟದಲ್ಲಿ ಕೇರಳ ತಂಡವನ್ನು ಪ್ರತಿನಿಧಿಸುವ ತಂಡಕ್ಕೆ ಧರ್ಮತ್ತಡ್ಕ ದುರ್ಗಾ ಪರಮೇಶ್ವರಿ ಶಾಲೆಯ ಒಂಭತ್ತನೇ ತರಗತಿಯ ಶ್ರಾವ್ಯ ಸಿ ಎಚ್ ಆಯ್ಕೆಯಾಗಿದ್ದಾಳೆ.
ಅಕ್ಟೋಬರ್ನಲ್ಲಿ ಎರ್ನಾಕುಲಂ ನಲ್ಲಿ ನಡೆದ 24 ನೆ ರಾಜ್ಯಮಟ್ಟದ ಸಬ್ ಜ್ಯುನಿ ಯರ್ ಹೆಣ್ಮಕ್ಕಳ ಸಾಫ್ಟ್ ಬಾಲ್ ನಲ್ಲಿ ಉತ್ತಮ ಪ್ರದರ್ಶನ ನೀಡಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಕೇರಳವನ್ನು ಪ್ರಾತಿನಿಧಿಕರಿಸುವ ತಂಡದಲ್ಲಿ ಕಾಸರಗೋಡು ಜಿಲ್ಲೆಯಿಂದ ಆಯ್ಕೆಯಾದ. ಏಕ ವಿದ್ಯಾರ್ಥಿನಿ ಈಕೆ. ಉಳಿದಂತೆ ಮಲಪ್ಪುರಂ, ಕೊಟ್ಟಾಯಂ,ತಿರುವನಂತಪುರಂ,ಕೊಲ್ಲಂ, ಆಲಪ್ಪುಲ, ಪತ್ತನತಿಟ್ಟ ಪಾಲಕ್ಕಾಡ್ ತ್ರಿಶೂರ್, ಎರ್ನಾಕುಲಂ ಹಾಗೂ ಕಣ್ಣೂರಿನ ವಿದ್ಯಾರ್ಥಿಗಳಿದ್ದಾರೆ. ಪಟ್ಟನಂಟ್ಟ ದಲ್ಲಿ ಅರ್ಹತಾ ತರಬೇತಿಪಡೆದು ಇದೀಗ ಸ್ಪರ್ಧೆಗಾಗಿ ಒಡಿಶಾ ತೆರಳಿರುತ್ತಾಳೆ.
ಕನಿಯಾಲ ಚಿಮಿಣಿತ್ತಡ್ಕದ ಸುಂದರ ಸಿ. ಯಚ್ ಹಾಗೂ ಕಮಲ ದಂಪತಿಗಳ ಪುತ್ರಿ.


ಮಂಜೇಶ್ವರ ಉಪಜಿಲ್ಲಾ ಮಟ್ಟದ ಕ್ರೀಡಾ ಕೂಟದಲ್ಲಿ ಶ್ರಿ ದುರ್ಗಾ ಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆ ದ್ವಿತೀಯ ಸ್ಥಾನ ಗಳಿಸಿತು.
ಕ್ರೀಡೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿ ಗಳೊಂದಿಗೆ ಶಾಲಾ ವ್ಯವಸ್ಥಾಪಕ ಶ್ರಿ ಎನ್ ಶಂಕರನಾರಾಯಣ ಭಟ್,ಹೈಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲ ಶ್ರಿ ಎನ್ ರಾಮಚಂದ್ರ ಭಟ್,ಶಾಲಾ ಮುಖ್ಯ ಶಿಕ್ಷಕ ಇ ಎಚ್ ಗೋವಿಂದ ಭಟ್,ಶಾಲಾ ದೈಹಿಕ ಶಿಕ್ಷಕ ಸಂತೋಷ್ ಕುಮಾರ್ ಎಂ ,ಹಾಗೂ ಹಿರಿಯ ಶಿಕ್ಷಕಿ ಉಷಾ ಕೆ ಆರ್ ಅಭಿನಂದಿಸಿದರು.


ಶಾಲೆಯ ವಿದ್ಯಾರ್ಥಿ ಅಧ್ಯಾಪಕರಿಂದ ಸೂರ್ಯ ಗ್ರಹಣ ....ವೀಕ್ಷಣೆ




ರಾಜ್ಯ ಮಟ್ಟದ ಸಂಸ್ಕೃತ ಕವಿತಾ ರಚನೆ ಹಾಗೂ ಪ್ರಶ್ನೋತ್ತರಿಯಲ್ಲಿ A grade ಪಡೆದ ನಮ್ಮ ಶಾಲೆಯ ವಿದ್ಯಾರ್ಥಿಗಳಾದ ಸಿಂಜಿತ.ಕೆ ಹಾಗೂ ವರ್ಷಾ ಆಳ್ವ ಅವರಿಗೆ ಅಭಿನಂದನೆಗಳು 


ಪೈವಳಿಕೆ ನಗರ ಶಾಲೆಯಲ್ಲಿ ಜರಗಿದ ಮಂಜೇಶ್ವರ ಉಪಜಿಲ್ಲಾ ಕಲೋತ್ಸವದಲ್ಲಿ ನಮ್ಮ ಶಾಲೆಯು ಸಂಸ್ಕೃತ ಕಲೋತ್ಸವ, ಕನ್ನಡ ಕಲೋತ್ಸವದಲ್ಲಿ ಪ್ರಥಮ ಸ್ಥಾನ ಹಾಗೂ ಜನರಲ್ ವಿಭಾಗದಲ್ಲಿ ದ್ವಿತೀಯ ಸ್ಥಾನ ಗಳಿಸಿದೆ.
ಫಲಕ ಹಾಗೂ ಪ್ರಮಾಣ ಪತ್ರವನ್ನು ಮುಖ್ಯ ಶಿಕ್ಷಕ ಇ ಎಚ್ ಗೋವಿಂದ ಭಟ್ ವಿದ್ಯಾರ್ಥಿಗಳಿಗೆ ವಿತರಿಸಿದರು

ಯಕ್ಷಗಾನ ಜಿಲ್ಲಾ ಕಲೋತ್ಸವ Sdphs Dharmathadka





ಶ್ರೀ ಶಂಕರಾಚಾರ್ಯ ಸಂಸ್ಕೃತ ವಿಶ್ವವಿದ್ಯಾಲಯವು ಸಂಸ್ಕೃತ ಕಲಿಕೆಯ ಪ್ರೋತ್ಸಾಹಕ್ಕೊಸ್ಕರ ಕೊಡುವಂತಹ ವಿದ್ಯಾರ್ಥಿ ವೇತನಕ್ಕೆ ಅರ್ಹರಾದ ನಮ್ಮ ಶಾಲೆಯ ಒಂಭತ್ತನೆಯ ತರಗತಿಯ ವಿದ್ಯಾರ್ಥಿಗಳಾದ ವರ್ಷ ಆಳ್ವ, ಪ್ರಭೋದ ಹಾಗೂ ಎಂಟನೇ ತರಗತಿಯ ವಿದ್ಯಾರ್ಥಿನಿ ನಿಧಿ ಆರ್ ಶೆಟ್ಟಿ .
ಮುಖ್ಯಶಿಕ್ಷಕ ಇ ಎಚ್ ಗೋವಿಂದ ಭಟ್ ಮೊತ್ತವನ್ನು ವಿದ್ಯಾರ್ಥಿನಿಯರಿಗೆ ಹಸ್ತಾಂತರಿಸಿದರು.
ಅಭಿನಂದನೆಗಳು.




Thulasi A of SDPAHSS Dharmathadka bagged SECOND A Grade in Sanskrit Kavitharachana for HSS in Kasaragod revenue district school kalothsavam held at GVHSS Iriyanni.



Thursday, May 21, 2020