Thursday, October 01, 2020

ಬೀಳ್ಕೊಡುಗೆ ಸಮಾರಂಭ

 ಧರ್ಮತಡ್ಕ: ಮಾರ್ಚ್ 31ರಂದು ನಿವೃತ್ತರಾಗಿರುವ ಧರ್ಮತಡ್ಕ ಶ್ರೀ ದುರ್ಗಾಪರಮೇಶ್ವರಿ ಪ್ರೌಢಶಾಲೆಯ ಅಧ್ಯಾಪಕರಾದ  ನರಸಿಂಹ ರಾಜ ಕೆ ಹಾಗೂ ಅಶೋಕ ಕುಮಾರ್ ಟಿ ಇವರಿಗೆ ಬೀಳ್ಕೊಡುಗೆ ಸಮಾರಂಭ ಸೆಪ್ಟೆಂಬರ್ 24ರಂದು ಪ್ರೌಢಶಾಲಾ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷಸ್ಥಾನವನ್ನು ಶಾಲೆಯ ವ್ಯವಸ್ಥಾಪಕ ಎನ್ ಶಂಕರನಾರಾಯಣ ಭಟ್ ವಹಿಸಿದ್ದರು. ಹೈಯರ್ ಸೆಕೆಂಡರಿ ಪ್ರಿನ್ಸಿಪಾಲ್  ರಾಮಚಂದ್ರ ಭಟ್ ಯನ್ ಹಾಗೂ ಮುಖ್ಯೋಪಾಧ್ಯಾಯ ಇ ಎಚ್ ಗೋವಿಂದ ಭಟ್ ಪ್ರಾಸ್ತಾವಿಕ ಮಾತನಾಡಿದರು.

ಸುದೀರ್ಘ 35 ವರ್ಷಗಳಿಂದ ಹೈಸ್ಕೂಲು ಅಧ್ಯಾಪಕರಾಗಿ ಸೇವೆ ಸಲ್ಲಿಸಿದ ನರಸಿಂಹ ರಾಜ ಕೆ ಹಾಗೂ 27 ವರ್ಷಗಳಿಂದ ಸೇವೆ ಸಲ್ಲಿಸಿದ ಅಶೋಕ ಕುಮಾರ್ ಟಿ ಇವರಿಗೆ ಶಾಲೆಯ ವತಿಯಿಂದ ಶಾಲು ಹೊದಿಸಿ ಫಲ ಪುಷ್ಪ ಸ್ಮರಣಿಕೆಗಳನ್ನಿತ್ತು ಸನ್ಮಾನಿಸಿ ಗೌರವಿಸಲಾಯಿತು.

ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಇಬ್ರಾಹಿಂ ಕೆ, ಮಾತೃ ಸಂಘದ ಅಧ್ಯಕ್ಷೆ ಶ್ರೀಮತಿ ಜಲಜಾಕ್ಷಿ, ಶ್ರೀ ದುರ್ಗಾಪರಮೇಶ್ವರಿ ಎ ಯು ಪಿ ಶಾಲೆಯ ವ್ಯವಸ್ಥಾಪಕಿ ಶ್ರೀಮತಿ ವಿಜಯಶ್ರೀ, ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಯು. ರಾಮಚಂದ್ರ ಭಟ್ ನಿವೃತ್ತರಿಗೆ ಶುಭಹಾರೈಸಿದರು.

ಈ ಸುಸಂದರ್ಭದಲ್ಲಿ 2019-20ನೇ ಸಾಲಿನ ಹತ್ತನೇ ತರಗತಿಯ ಪರೀಕ್ಷೆಯಲ್ಲಿ ಎಲ್ಲ ವಿಷಯಗಳಲ್ಲಿಯೂ A+ ಅಂಕ ಪಡೆದು ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಹಾಗೂ ಹೈಯರ್ ಸೆಕೆಂಡರಿ ವಿಭಾಗದಲ್ಲಿ ಉನ್ನತ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ನಾರಾಯಣಿ ಅಮ್ಮನವರ ಸ್ಮರಣಾರ್ಥ ಅವರ ಮಗ ನಿವೃತ್ತ ದೈಹಿಕ ಶಿಕ್ಷಕ ಅಶೋಕನ್ ಎನ್ ಮತ್ತು ಶಾಲೆಯ ವತಿಯಿಂದ ಗೌರವ ಕಾಣಿಕೆಯನ್ನು ನೀಡಲಾಯಿತು. ಇದರ ಜತೆಗೆ ಆರ್ಥಿಕವಾಗಿ ಹಿಂದುಳಿದ ಉತ್ತಮ ಸಾಧನೆ ಗೈದ ವಿದ್ಯಾರ್ಥಿಗಳಿಗೆ ಮೇಪೋಡು ಸುಬ್ರಾಯ ಮಯ್ಯ ಸ್ಮಾರಕ ದತ್ತಿ ನಿಧಿಯನ್ನು ವಿತರಿಸಲಾಯಿತು.


ಹಳೆ ವಿದ್ಯಾರ್ಥಿನಿ ಶಾರದಾ,ಸುರಭಿ ಮತ್ತು ಸಿಂಜಿತ ಪ್ರಾರ್ಥನೆ ಹಾಡಿದರು. ಶ್ರೀಮತಿ ಶ್ವೇತ ಕುಮಾರಿ ಯಂ ಸ್ವಾಗತಿಸಿ,ಶ್ರೀಮತಿ ಈಶ್ವರಿ ಡಿ ವಂದಿಸಿದರು. ಶಿವನರಾಯಣ ಭಟ್ ಕಾರ್ಯಕ್ರಮವನ್ನು ನಿರೂಪಿಸಿದರು.