ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವಕ್ಕೆ ಚಾಲನೆ
ಧರ್ಮತಡ್ಕ: ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವಕ್ಕೆ ಧರ್ಮತಡ್ಕ ಶ್ರೀ ದುರ್ಗಾಪರಮೇಶ್ವರಿ ಹಯರ್ ಸಕೆಂಡರಿ ಶಾಲೆ ಮತ್ತು ಎ ಯು ಪಿ ಶಾಲೆಯಲ್ಲಿ ಶನಿವಾರ ಆರಂಭಗೊಂಡಿತು. ಎಲ್ ಪಿ, ಯುಪಿ, ಹೈಸ್ಕೂಲ್ ಮತ್ತು ಹಯರ್ ಸೆಕೆಂಡರಿ ವಿಭಾಗಗಳ ವೇದಿಕೆಯೇತರ ಸ್ಪರ್ಧೆಗಳಲ್ಲಿ ಮಂಜೇಶ್ವರ ಉಪಜಿಲ್ಲೆಯ ಎಲ್ಲಾ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ನವೆಂಬರ್ 29ರಂದು ಉದ್ಘಾಟನೆ ನಡೆಯಲಿದ್ದು ವೇದಿಕೆಯ ಕಲಾ ಸ್ಪರ್ಧೆಗಳು ನಡೆಯಲಿದೆ.