Saturday, July 26, 2014

                        ತುಳುನಾಡಿನಲ್ಲಿ  ಆಟಿ , ಸೋಣ ತಿಂಗಳುಗಳು ಬಂದರೆ ಆಟಿಕಳಂಜ , ಸೋಣದ ಜೋಗಿಯರು  ಕಾಣಲು ಸಿಗುತ್ತಾರೆ.

                        ನಮ್ಮ ಶಾಲೆಯ 9 E ತರಗತಿಯ  ಪ್ರಕಾಶ್ . ಕೆ . “ಆಟಿಕಳಂಜ" ನಾಗಿ ಊರ ಜನರ ಮುಂದೆ ಬಂದಾಗ ...

                        ತುಳುನಾಡಿನಲ್ಲಿ  ಆಟಿ , ಸೋಣ ತಿಂಗಳುಗಳು ಬಂದರೆ ಆಟಿಕಳಂಜ , ಸೋಣದ ಜೋಗಿಯರು  ಕಾಣಲು ಸಿಗುತ್ತಾರೆ.

                        ನಮ್ಮ ಶಾಲೆಯ 9 E ತರಗತಿಯ  ಪ್ರಕಾಶ್ . ಕೆ . “ಆಟಿಕಳಂಜ" ನಾಗಿ ಊರ ಜನರ ಮುಂದೆ ಬಂದಾಗ ...

Friday, July 25, 2014

ವಿಶ್ವ ಪರಿಸರ ದಿನ - ಪ್ರಥಮ  ಬಹುಮಾನ  ಪಡೆದ – ಕವನ

ಒಗಟಾಗಿರೋ   ಕ್ಷಣಗಳು

ಅದಾವ   ಶಿಲ್ಪಿ   ಕಡೆದನೋ   ನಿನ್ನ 

ಅದೆಂಥಾ   ಕಾಂತಿಯೋ   ನಿನ್ನೀ    ಬಣ್ಣ

ಭಾರತಕ್ಕೊಲಿದೆ    ತಾಯಿಯಾಗಿ

ಪರಿಪಾಲಿಸಿ   ಎಲ್ಲರನು   ಜಗದ   ಮಾಯೆಯಾಗಿ .

                              ಸ್ವರ್ಗಕ್ಕಿಂತಲೂ   ಮಿಗಿಲು 

                              ಪ್ರಕೃತಿಯೇ   ನಿನ್ನ   ವಿಶಾಲ   ಮಡಿಲು  

                              ಅದ್ಯಾವ   ದುಷ್ಟ ಕರಗಳಿಗೆ   ಬಲಿಯಾಗಿದೆ

                              ಯಾವ   ಭಕ್ತನಿಗೂ   ಒಲಿಯದಾದೆ .

ತರುಲತೆಗಳೆ , ವನಸಿರಿಗಳೆ

ನಿನ್ನೀ   ಬಂಗಾರ , ಶೃಂಗಾರ

ತುಂಬಿಹುದು   ನಿನ್ನ   ಮೇಲೆ

ಸುಟ್ಟು   ಹೋಗುತಿದೆ   ನಿನ್ನೀ   ಒಡಲಾಳ .

                   ಗಿರಿಗಳೆಡೆಯಲಿ   ವನಸಿರಿಗಳಿಂದ
                  
                   ಅಂದವನು   ತುಂಬಿರುವೆ

                   ಯಾಕೆ   ಹೀಗಾದೆ   ( ಪ್ರಕೃತಿ )

                   ಜೇನ   ಹೀರಿ   ಬಿಟ್ಟ   ಹೂವಂತೆ  .

ಸ್ವರ್ಗವೇ   ಮನಸೋಲುವಂತೆ

ಮೆರೆದಿದ್ದೆ   ಒಂದು   ಕಾಲದಲ್ಲಿ

ಉಪಯೋಗಿಸಿ   ಎಸೆದಂತೆ   ಆಡಿದರು ,

ನೋಯಿಸಿದರು   ಕಣಕಣದಲ್ಲಿ  .

                   ಕುಕ್ಕಿಕುಕ್ಕಿ   ಸಾಯುತಿದೆ   ಹೃದಯ

                   ಅದಾವ   ಜನ್ಮದ   ಬಂಧುವೋ   ನೀನು

                   ಕ್ಷಮೆಯಿರಲಿ   ಸುತರಲ್ಲಿ

                   ಗತಿನೀನೆ   ಆದಿಯಲಿ .                            

                                                                                                ರಶ್ಮಿ . X D

ವಿಶ್ವ ಪರಿಸರ ದಿನ – ದ್ವಿತೀಯ  ಬಹುಮಾನ ಪಡೆದ  - ಕವನ

ಹಸಿರು   ಬನ

ನಮ್ಮಯ   ಸುಂದರ   ನಾಡೊಳು

ಇರುತಿಹ   ವರವೇ   ಹಸಿರು   ಬನ

ಹಸಿರು   ಬನದಿಂದ   ಲಭಿಸುವ   ಶುದ್ಧ

ಅನಿಲದಿಂದಲೇ   ಜೀವನ .

                            ಗುಲಾಬಿ - ಮಲ್ಲಿಗೆ - ಗೋರಟೆ - ಸಂಪಿಗೆ

                             ನಿಂತಿವೆ   ತಲೆಯನು   ಎತ್ತಿ

                             ನನಗಿದೊ   ಸಂತಸವಾಗಿದೆ

                             ನಮ್ಮಯ   ಹಸಿರು   ಬನವನು   ಸುತ್ತಿ .

ಬಾಳೆ - ತೆಂಗು - ತಾಳೆ - ಕಂಗು

ಗಗನ   ಚುಂಬಿಸುತ   ನಿಂತಿಹರು

ನಮ್ಮೆಲ್ಲರ   ಈ   ನೆಚ್ಚಿನ   ಬನದಲಿ

ಅಳಿಲು - ಮಂಗಗಳು   ನಗುತಿಹರು .

                             ಹುಲ್ಲಿನ   ಹಾಸಿಗೆಯೊಂದಿಗೆ   ನಮಗೆ

                             ಸಿಗುವುದು   ಮನ ಶಾಂತಿ

                             ಅದರೊಂದಿಗೆ   ಒಳಗೊಂಡಿದೆ   ನಮ್ಮ

                             ಸೂರ್ಯ   ಚಂದ್ರರ   ಶುಭ   ಕಾಂತಿ .

ನಮ್ಮಯ   ಊರಲಿ   ಎದ್ದು   ನಿಂತಿರುವ

ಹಸಿರು   ಬನದಿಂದ   ಜೀವನ

ಮರಗಳ   ಸಾಕಿ   ಸಲಹುದರೊಂದಿಗೆ

ಆಗುವುದು   ಜೀವನ – ಪಾವನ .

                            ಎಲ್ಲರು   ಬನ್ನಿ   ಅಳಿವಿನ   ಅಂಚಿನ

                             ಹಸಿರು   ಬನವನ್ನು   ಉಳಿಸೋಣ

                             ಹಸಿರು   ಬನವನ್ನು   ಉಳಿಸಿ   ನಾವು

                             ನೆಮ್ಮದಿಯಿಂದ   ಬದುಕೋಣ  .

                                                                                                            ಶ್ರದ್ಧಾ  .  X D

School parliament election 2014-15

The Kerala School Parliament elections for the 2014-2015 academic year will be held on August 7.

Last date for filing Nominations is on 29.07.2014(3PM).

Scrutiny of Nominations is 30.07.2014 (3PM).

Last date for withdrawal of Candidature 31.07.2014 (3PM).

Publishing Final List of Candidates 31.07.2014.

Date of Poll 07.08.2014 (10AM to 11AM).

Counting of Votes: 07.08.2014 (12 Noon).

Thursday, July 24, 2014

ರಾಮಾಯಣ ಮಾಸಾಚರಣೆ

               ಸಂಸ್ಕೃತ ಸಂಘದ ಆಶ್ರಯದಲ್ಲಿ ಮುಖ್ಯ ಅಧ್ಯಾಪಕರಾದ ಶ್ರೀಯುತ ರಾಮಚಂದ್ರಭಟ್ ಇವರ ಸಾರಥ್ಯದಲ್ಲಿ ಎಲ್ಲ ಅಧ್ಯಾಪಕ ಹಾಗೂ ಅಧ್ಯಾಪಕೇತರ ಹಾಗೂ ವಿದ್ಯಾಲಯದ ಎಲ್ಲ ಮಕ್ಕಳ ಸಹ ಯೋಗ್ಯದಲ್ಲಿ ರಾಮಾಯಣ ಮಾಸಾಚರಣೆಯ ಉದ್ಘಾಟನಾ ಸಮಾರಂಭವು ಅತ್ಯಂತ ವಿಜೃಂಭಣೆಯಿಂದ ಸಂಪನ್ನಗೊಂಡಿತು. ಇದರೊಂದಿಗೆ ವಿಶೇಷವಾಗಿ ಗುರುಸಮೂಹವನ್ನು  ಗೌರವಿಸುವ ಗುರುಪೂಜಾಕಾಯ೯ಕ್ರಮವನ್ನು  ಸಂಸ್ಕೃತ ಸಂಘದ ನಾಯಕಿಯಾದ ಕುಮಾರಿ ಅನನ್ಯಾ  ಮತ್ತು ಸಹಪಾಠಿಗಳು ಪನ್ನೀರು ಚೆಲ್ಲಿ , ಆರತಿ ಬೆಳಗಿ , ಹೂ ನೀಡಿ ಅರಶಿನ ಕುಂಕುಮವನ್ನಿತ್ತು , ಗುರು ದಕ್ಷಿಣೆಯನ್ನು ನೀಡಿ ಪ್ರಾರ್ಥಿಸಿದರು. ಈ ಮೊದಲು ರಾಮಾಯಣ ಮಾಸಾಚರಣೆಯ ಪ್ರಯುಕ್ತ  ಶ್ರೀಮದ್ರಾಮಾಯಣ ಗ್ರಂಥವನ್ನು ಹೊತ್ತ ಘೋಷಯಾತ್ರೆ ಎಲ್ಲರ ಮನಸೂರೆಗೊಂಡಿತು. ಮಕ್ಕಳು ಪುಳಕಿತಗೊಂಡರು. ಎಲ್ಲರ ಮನ ಭಕ್ತಿಭಾವದಲ್ಲಿ ಮುಳುಗಿತು.ಮುಖ್ಯ ಅತಿಥಿಗಳಾಗಿ  S. A. T. ಸಂಸ್ಕೃತ ಅಧ್ಯಾಪಕರಾದ ಶ್ರೀ ನಾರಾಯಣ ಜಿ ಹೆಗಡೆಯವರು ಆಗಮಿಸಿ ರಾಮಾಯಣದ ಪ್ರಾಮುಖ್ಯತೆಯನ್ನು ಆದರ್ಶವನ್ನೂ , ಸಂಸ್ಕಾರವನ್ನೂ ಮನಮುಟ್ಟುವಂತೆ ತಿಳಿಸಿದರು . ಶಾಲಾ ಸಂಚಾಲಕರಾದ ಶ್ರೀಸುಬ್ಬಣ್ಣ ಭಟ್ಟರು ಹಿತವಚನವನಗಳನ್ನಿತ್ತು ಮಕ್ಕಳನ್ನು ಆಶೀರ್ವದಿಸಿದರು . ಮುಖ್ಯಗುರುಗಳು ಕಾರ್ಯಕ್ರಮಕ್ಕೆ ಶುಭಕೋರಿದರು . ಸಂಸ್ಕೃತ ಅಧ್ಯಾಪಕರಾದ ಶ್ರೀ ಶಿವನಾರಾಯಣ ಭಟ್ಟರು ಪ್ರಾಸ್ತಾವಿಕ ಭಾಷಣ ಮಾಡಿದರು . ದೀಪ ಬೆಳಗಿ ಶಂಖಧ್ವನಿ ಹಾಗೂ ಶ್ರದ್ಧಾ ಮತ್ತು ತಂಡದವರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಕು . ಅನನ್ಯಾ ಸ್ವಾಗತಿಸಿ , ರಶ್ಮಿ ಇವರು ವಂದಿಸಿದರು . ಕಾರ್ಯಕ್ರಮದಲ್ಲಿ ಅಷ್ಟಾವಧಾನ ಸೇವೆ ವಿಶೇಷವಾಗಿ ಎಲ್ಲರ ಗಮನಸೆಳೆಯಿತು.ಇದನ್ನು ಶ್ರೀಶ ನಾರಾಯಣ ಹಾಗೂ ತಂಡದವರು ನೆರವೇರಿಸಿದರು . ಕು .ರೇಖಾ ಹಾಗೂ ಮಾ . ಕಾರ್ತಿಕೇಯ ಇವರು ನಿರೂಪಣೆಗೈದರು . ಎಲ್ಲ ಗುರುವೃಂದದವರು ಹಾಗೂ ವಿದ್ಯಾಲಯದ ಮಕ್ಕಳೆಲ್ಲರೂ ಉಪಸ್ಥಿತರಿದ್ದರು .