ವಿಶ್ವ ಪರಿಸರ ದಿನ –
ದ್ವಿತೀಯ ಬಹುಮಾನ ಪಡೆದ - ಕವನ
ಹಸಿರು ಬನ
ನಮ್ಮಯ ಸುಂದರ ನಾಡೊಳು
ಇರುತಿಹ ವರವೇ ಹಸಿರು
ಬನ
ಹಸಿರು ಬನದಿಂದ ಲಭಿಸುವ
ಶುದ್ಧ
ಅನಿಲದಿಂದಲೇ ಜೀವನ .
ಗುಲಾಬಿ - ಮಲ್ಲಿಗೆ - ಗೋರಟೆ - ಸಂಪಿಗೆ
ನಿಂತಿವೆ ತಲೆಯನು
ಎತ್ತಿ
ನನಗಿದೊ ಸಂತಸವಾಗಿದೆ
ನಮ್ಮಯ ಹಸಿರು
ಬನವನು ಸುತ್ತಿ .
ಬಾಳೆ - ತೆಂಗು - ತಾಳೆ - ಕಂಗು
ಗಗನ ಚುಂಬಿಸುತ ನಿಂತಿಹರು
ನಮ್ಮೆಲ್ಲರ ಈ ನೆಚ್ಚಿನ
ಬನದಲಿ
ಅಳಿಲು -
ಮಂಗಗಳು ನಗುತಿಹರು .
ಹುಲ್ಲಿನ ಹಾಸಿಗೆಯೊಂದಿಗೆ ನಮಗೆ
ಸಿಗುವುದು ಮನ : ಶಾಂತಿ
ಅದರೊಂದಿಗೆ ಒಳಗೊಂಡಿದೆ
ನಮ್ಮ
ಸೂರ್ಯ ಚಂದ್ರರ
ಶುಭ ಕಾಂತಿ .
ನಮ್ಮಯ ಊರಲಿ ಎದ್ದು
ನಿಂತಿರುವ
ಹಸಿರು ಬನದಿಂದ ಜೀವನ
ಮರಗಳ ಸಾಕಿ ಸಲಹುದರೊಂದಿಗೆ
ಆಗುವುದು ಜೀವನ – ಪಾವನ .
ಎಲ್ಲರು ಬನ್ನಿ
ಅಳಿವಿನ ಅಂಚಿನ
ಹಸಿರು ಬನವನ್ನು
ಉಳಿಸೋಣ
ಹಸಿರು ಬನವನ್ನು
ಉಳಿಸಿ ನಾವು
ನೆಮ್ಮದಿಯಿಂದ ಬದುಕೋಣ
.
ಶ್ರದ್ಧಾ . X D
No comments:
Post a Comment