Friday, August 16, 2019

ಶ್ರೀ ದುರ್ಗಾಪರಮೇಶ್ವರಿ ಹೈಸ್ಕೂಲ್ ಧರ್ಮತ್ತಡ್ಕ ದ ಸಂಸ್ಕೃತ ಸಂಘದ ವತಿಯಿಂದ ಕರ್ಕಾಟಕ ಮಾಸದಲ್ಲಿ #ಶ್ರೀರಾಮರಕ್ಷಾಸ್ತೋತ್ರವನ್ನು ಮಕ್ಕಳು ತ್ರಿಕರಣ ಪೂರ್ವಕವಾಗಿ ಪಾರಾಯಣ ಮಾಡಿ #ಹನುಮಲಕ್ಷ್ಮಣಸಮೇತ_ಸೀತಾರಾಮಚಂದ್ರಮನ  ಅನುಗ್ರಹಭಾಜನರಾದರು
#ರಾಮಾಯಣಮಾಸಾಚರಣೆ ಹೀಗೆ ಸಂಪನ್ನಗೊಂಡಿತು


ಶ್ರೀ ದುರ್ಗಾ ಪರಮೇಶ್ವರಿ ಹೈಯರ್ ಸೆಕಂಡರಿ ಶಾಲೆ ಧರ್ಮತ್ತಡ್ಕ ಶಾಲೆಯ ಮುಖಾಂತರ ನೇರೆಸಂತ್ರಸ್ತರಿಗೆ ಅಗತ್ಯ ವಾಗುವ ವಸ್ತು ಗಳನ್ನು ಸಂಗ್ರಹಿಸಿ NSS ಘಟಕಕ್ಕೆ ಹಸ್ತಾಂತರಿಸಲಾಯಿತು.

  ಈ ನಿಟ್ಟಿನಲ್ಲಿ ಧರ್ಮತ್ತಡ್ಕ  ಶ್ರೀ ದುರ್ಗಾಪರಮೇಶ್ವರಿ ಹೈಯರ್ ಸೆಕಂಡರಿ ಶಾಲೆಯ  ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳು ಕೇರಳದ ನಾಡಿನಲ್ಲಿ  ಉಂಟಾದ ಭೀಕರವಾದ ದುರಂತದ ಸಂತ್ರಸ್ತರಿಗಾಗಿ
 ಸಹಾಯ ಮಾಡುವ ಸಲುವಾಗಿ ಅಗತ್ಯ ವಸ್ತುಗಳನ್ನು  ಶಾಲೆಯ ವಿದ್ಯಾರ್ಥಿ ಅಧ್ಯಾಪಕರಿಂದ ಸಂಗ್ರಹಿಸಲಾಯಿತು. . ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ರಾಮಚಂದ್ರ ಭಟ್ ನೇರೋಳು ಚಾಲನೆ ನೀಡಿದರು. ಈ ಸಂದರ್ಭದಲ್ಲಿ  ಶಾಲಾ ಅಧ್ಯಾಪಕರಾದ ಶ್ರೀ ಸತೀಶ್ ಕುಮಾರ್ ಶೆಟ್ಟಿ ಓಡ್ಡಂಬೆಟ್ಟು,  ಶ್ರೀ ಗೋವಿಂದ ಭಟ್, ಶ್ರೀ ಅಶೋಕ ,ಶ್ರೀ ಶಿವಪ್ರಸಾದ್ ಚೆರುಗೋಳಿ, ಶ್ರೀ ರಾಜ್ ಕುಮಾರ್, ಶ್ರೀ ಪ್ರಶಾಂತ್ ಹೊಳ್ಳ ,ಶ್ರೀ ಸಂತೋಷ್ ಕುಮಾರ್,ಶ್ರೀ ಪ್ರದೀಪ್, ಉಣ್ಣಿ ಕೃಷ್ಣನ್ ಹಾಗೂ ವಿದ್ಯಾರ್ಥಿಗಳು   ಸಹಕರಿಸಿದರು.



Thursday, August 15, 2019

ಶ್ರೀ ದುರ್ಗಾ ಪರಮೇಶ್ವರಿ ಹೈಯರ್ ಸೆಕಂಡರಿ ಶಾಲೆಯಲ್ಲಿ 73ನೇ ಸ್ವಾತಂತ್ರ್ಯ ದಿನಾಚರಣೆ ಯನ್ನು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ರಾಮಚಂದ್ರ ಭಟ್ ನೇರೋಳು ದ್ವಜಾರೋಹಣ ಗೈದರು.ಬಳಿಕ ಜರುಗಿದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪ್ಪಳ ದ ಅಗ್ನಿ ಶಾಮಕದಳದ ಸಹ ಅಧಿಕಾರಿಯಾದ ಶ್ರೀ ಎ.ಟಿ ಜೋರ್ಜ್ ಅವರು ಸ್ವಾತಂತ್ರ್ಯ ದ ಮಹತ್ವ ಹಾಗೂ ಅಗ್ನಿ ಶಾಮಕದಳದ ರಕ್ಷಣಾ ಕಾರ್ಯ ದ ಬಗ್ಗೆ ತಿಳಿಸಿದರು.
ಕಾರ್ಯ ಕ್ರಮ ದಲ್ಲಿ ಉಪಸ್ತಿತರಿದ್ದ ಶಾಲಾ ನಿವೃತ್ತ ಮುಖ್ಯೋಪಾಧ್ಯಾಯರಾದ ಉಳುವಾನ ಶ್ರೀ ರಾಮಚಂದ್ರ ಭಟ್ ಮಾತನಾಡಿ ಸ್ವಾತಂತ್ರ್ಯ ಬಲಿದಾನಿಗಳಾದ ದೇಶಪ್ರೇಮಿಗಳನ್ನು ನೆನೆದರು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ರಾಮಚಂದ್ರ ಭಟ್ ನೇರೋಳು ಪ್ರಸ್ತಾವಿಕವಾಗಿ ಮಾತನಾಡಿದರು. ಪಿ.ಟಿ.ಎ ಅಧ್ಯಕ್ಷರಾದ ಶ್ರೀ ಇಬ್ರಾಹಿಂ ಸ್ವಾತಂತ್ರ್ಯ ದಿನವನ್ನು ಉದ್ದೇಶಿಸಿ ಮಾತನಾಡಿದರು.ಶಾಲಾ ವ್ಯವಸ್ಥಾಪಕ ರಾದ ಶ್ರೀ ಶಂಕರನಾರಾಯಣ ಭಟ್ ,ಹೈಯರ್ ಸೆಕಂಡರಿ ಶಾಲೆಯ ಅದ್ಯಾಪಕ ರಾದ ಶ್ರೀ ಸತೀಶ್ ಕುಮಾರ್ ಶೆಟ್ಟಿ ಓಡ್ಡಂಬೆಟ್ಟು ಶುಭಾಶಂಸನೆ ಗೈದರು .
ಅದ್ಯಾಪಕರಾದ ಶ್ರೀ ಗೋವಿಂದ ಭಟ್ ನಿರೂಪಿಸಿ ಶ್ರೀ ಶಿವಪ್ರಸಾದ್ ಚೆರುಗೋಳಿ ವಂದಿಸಿದರು.