ಧರ್ಮತ್ತಡ್ಕ : ಕ್ಲಬ್ ಚಟುವಟಿಕೆಗಳ ಮೂಲಕ ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಬೆಳೆಸಲು ಸಾಧ್ಯ. ಇದರಿಂದ ಅವರಿಗೆ ಆತ್ಮ ಸ್ಥೆರ್ಯ ತುಂಬುವುದು ಎಂದು ಮುಖ್ಯೋಪಾಧ್ಯಾಯರಾದ ಎನ್. ರಾಮಚಂದ್ರ ಭಟ್ ತಿಳಿಸಿದರು. ಇವರು ಶ್ರೀ ದುರ್ಗಾ ಪರಮೇಶ್ವರೀ ಹೈಯರ್ ಸೆಕೆಂಡರಿ ಶಾಲೆ ಧರ್ಮತ್ತಡ್ಕದ ಶಾಲಾ ವಿವಿಧ ಕ್ಲಬ್ ಗಳನ್ನು ಉದ್ಗಾಟಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಶಾಲಾ ಅಧ್ಯಾಪಕರಾದ ಶ್ರೀ ಈ ಯಚ್ ಗೋವಿಂಧ ಭಟ್, ಶ್ರೀ ರಾಮಕೃಷ್ಣ ಭಟ್, ಶ್ರೀಮತಿ ಉಷಾ ಕೆ ಆರ್ ಇವರು ಕ್ಲಬ್ ಗಳ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. 10ಕ್ಕಿಂತಲೂ ಹೆಚ್ಚು ಕ್ಲಬ್ ಗಳು ರೂಪೀಕರಿಸಲ್ಪಟ್ಟು ಸದಸ್ಯರಿಂದ ಪ್ರಭಂದ ಮಂಡನೆ, ಹಾಡು ಮುಂತಾದ ಕಾರ್ಯಕ್ರಮಗಳು ನಡೆದವು. ವಿದ್ಯಾರ್ಥಿಗಳ ಶಾರಧ ಸುರಭಿ ಸ್ವಾಗತಿಸಿ ,ವಿವೇಕ್ ರೈ ವಂದಿಸಿದರು. ವಿಶ್ವಜಿತ್ ಕಾರ್ಯಕ್ರಮ ನಿರೂಪಿಸಿದರು.