Tuesday, July 16, 2019


ಧರ್ಮತ್ತಡ್ಕ ಶ್ರೀ ದುರ್ಗಾ ಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆಯ ಪ್ರೌಢಶಾಲಾ ವಿಭಾಗದ ಸಂಸ್ಕøತ ಸಂಘದ ಆಶ್ರಯದಲ್ಲಿ ಸಂಸ್ಕøತ ವಿದ್ಯಾರ್ಥಿಗಳ ನೇತೃತ್ವದಲ್ಲಿ ಗುರುಪೌರ್ಣಿಮೆ ಉತ್ಸವವನ್ನು ಮಂಗಳವಾರ ಆಚರಿಸಲಾಯಿತು.
      ಕಾರ್ಯಕ್ರಮವನ್ನು ಹೈಯರ್ ಸೆಕೆಂಡರಿ ಅಧ್ಯಾಪಕ ಸತೀಶ ಶೆಟ್ಟಿ ಒಡ್ಡಂಬೆಟ್ಟು ಉದ್ಘಾಟಿಸಿ ಮಾತನಾಡಿ, ಗು ಎಂದರೆ ಕತ್ತಲು, ರು ಎಂದರೆ ಬೆಳಕು ಎಂದರ್ಥ. ತಲತಲಾಂತರಗಳಿಂದ ಬಂದ ಸಂಪ್ರದಾಯವಾದ ಗುರುಗಳನ್ನು ಗೌರವಿಸುವ ರೀತಿ ನಮ್ಮ ಇಂದಿನ ಶಿಕ್ಷಣ ರೀತಿಯಲ್ಲಿ ಬರಬೇಕು ಎಂದರು.
        ಶಾಲಾ ಮುಖ್ಯಶಿಕ್ಷಕ ಎನ್. ರಾಮಚಂದ್ರ ಭಟ್ ಶುಭಾಶಂಸನೆಗೈದು ಮಾತನಾಡಿ, ಇಂದಿನ ಶಿಕ್ಷಣ ಪದ್ಧತಿ ಬದಲಾಗಿ ಶಾಲೆಯಲ್ಲಿಯೂ ಕೂಡಾ ಗುರುಗಳನ್ನು ಶಿಷ್ಯರು ಪೂಜನೀಯ ಮನೋಭಾವದಿಂದ ಗೌರವಿಸುವಂತೆ ಆಗಬೇಕು. ಈ ತಿಂಗಳ ಪೂರ್ತಿ ಹಲವೆಡೆಗಳಲ್ಲಿ ದೇವರನ್ನು ಪೂಜಿಸುತ್ತಾರೆ. ಕೇರಳದಲ್ಲಿ ರಾಮಾಯಣ ಪಾರಾಯಣ ಮಾಡುತ್ತಾರೆ. ಹಾಗಾಗಿ ರಾಮಾಯಣ ಮಾಸಾಚರಣೆ ಅಂತ ಈ ತಿಂಗಳು ಪೂರ್ತಿ ತಿಳಿಯಲ್ಪಡುತ್ತದೆ ಎಮದು ತಿಳಿಸಿದರು.
      ಹಿರಿಯ ಅಧ್ಯಾಪಕ ಗೋವಿಂದ ಭಟ್ ಶುಭಾಶಂಸನೆಗೈದು ಮಾತನಾಡಿದರು. ಸಂಸ್ಕøತ ಅಧ್ಯಾಪಕ ಶಿವನಾರಾಯಣ ಭಟ್ ಅವರ ಮಾರ್ಗದರ್ಶನದಲ್ಲಿ ಶಾಲೆಯಲ್ಲಿ ತಿಂಗಳಪೂರ್ತಿ ನಡೆಸಲಿರುವ ಶ್ರೀ ರಾಮರಕ್ಷಾ ಸ್ತೋತ್ರ ಪಠಣಕ್ಕಿರುವ ರಾಮರಕ್ಷಾ ಸ್ತೋತ್ರ ಪುಸ್ತಕವನ್ನು ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
     ಶಾರದ ಸುರಭಿ ಸ್ವಾಗತಿಸಿ, ಸಂಸ್ಕøತ ಸಂಘದ ಜೊತೆ ಕಾರ್ಯದರ್ಶಿ ಅಕ್ಷಯ ಗಣಪತಿ ವಂದಿಸಿದರು. ಸಂಸ್ಕøತ ಸಂಘದ ಕಾರ್ಯದರ್ಶಿ ವಿಶ್ವಜಿತ್ ಕಾರ್ಯಕ್ರಮ ನಿರೂಪಿಸಿದರು. ಶಾಲೆಯ ಶಿಕ್ಷಕ ವೃಂದ ಕಾರ್ಯಕ್ರಮಕ್ಕೆ ಸಹಕರಿಸಿತ್ತು.