Saturday, September 09, 2017

ಬೇಕೂರ್ ಶಾಲೆಯಲ್ಲಿ ನಡೆಯುವ ಕುಟ್ಟಿಕೂಟಂ ಟ್ರೈನಿಂಗ್ನಲ್ಲಿ ಭಾಗವಹಿಸಿದ ನಮ್ಮ ಶಾಲೆಯ ಮಕ್ಕಳು. 

 
ನಮ್ಮ ರಾಜ್ಯದ ಹಬ್ಬ ಓಣಂನ್ನು ಅಗಸ್ಟ್  31ರಂದು ಬಹಳ ಸಂಭ್ರಮದಿಂದ ಆಚರಿಸಲಾಯಿತು. ಹೂವಿನ ರಂಗೋಲಿ ಪೂಕಳಂ ಹಾಕಲಾಯಿತು. ಮಕ್ಕಳಿಗೆ ಮತ್ತು ಅಧ್ಯಾಪಕರಿಗೆ ವಿವಿಧ ರೀತಿಯ ಸ್ಪರ್ಧೆಗಳ್ಳನ್ನು ನಡೆಸಿ ಬಹುಮಾನ ವಿತರಿಸಲಾಯಿತು. ಮಧ್ಯಾಹ್ನ ಅನ್ನ , ಸಾಂಬಾರು, ಕಚಾಂಬಾರ್ ,ಮಜ್ಜಿಗೆ, ಉಪ್ಪಿನಕಾಯಿ , ಪಾಯಸ , ಹೋಳಿಗೆ ಯನ್ನೊಳಗೊಂಡ ಓಣಂ ಸದ್ಯವನ್ನು ಮಕ್ಕಳಿಗೆ ಉಣಬಡಿಸಲಾಯಿತು .ಈ ಸಂದರ್ಭದಲ್ಲಿ ಸರಕಾರದಿಂದ ಉಚಿತವಾಗಿ ಒದಗಿಸಿದ  5ಕಿಲೋ ಅಕ್ಕಿಯನ್ನು 8ನೇ ತರಗತಿಯ ಮಕ್ಕಳಿಗೆ ವಿತರಿಸಲಾಯಿತು.