Saturday, June 09, 2018

ಸರಕಾರದಿಂದ ವಿದ್ಯಾರ್ಥಿಗಳಿಗೆ ನೀಡಿದ ತರಕ್ಕಾರಿ ಬೀಜದ ವಿತರಣೆಯು ಶಾಲೆಯಲ್ಲಿ ಜರಗಿತು. ತಮ್ಮ ಮನೆಯಂಗಳದಲ್ಲಿ ತರಕಾರಿ ತೋಟ ಬೆಳೆಸಿ ತರಕಾರಿ ಉತ್ಪಾದನೆಯನ್ನು ಹೆಚ್ಚಿಸುವಂತೆ ವಿದ್ಯಾರ್ಥಿಗಳನ್ನು ಉತ್ತೇಜಿಸಿಲಾಯಿತು.




ಶ್ರೀ ದುರ್ಗಾ ಪರಮೇಶ್ವರೀ  ಹೈಯರ್ ಸೆಕೆಂಡರಿ ಶಾಲೆ ಧರ್ಮತ್ತಡ್ಕದಲ್ಲಿ ವಿದ್ಯಾರ್ಥಿಗಳಿಗೆ ಆರೋಗ್ಯ ಮತ್ತು ಶುಚಿತ್ವದ ಕಾರ್ಯಾಗಾರ:


ಶ್ರೀ ದುರ್ಗಾ ಪರಮೇಶ್ವರೀ  ಹೈಯರ್ ಸೆಕೆಂಡರಿ ಶಾಲೆ ಧರ್ಮತ್ತಡ್ಕದಲ್ಲಿ ವಿದ್ಯಾರ್ಥಿಗಳಿಗೆ ವೈಯಕ್ತಿಕ ಆರೋಗ್ಯ ಮತ್ತು ಶುಚಿತ್ವದ ಬಗ್ಗೆ ಮಾಹಿತಿ ಕಾರ್ಯಾಗಾರ ಕಾರ್ಯಕ್ರಮವು ಶಾಲೆಯಲ್ಲಿ ಜರಗಿತು. ನಿವೃತ್ತ ಅಧ್ಯಾಪಕಿ ಶ್ರೀಮತಿ ಸತ್ಯವತಿ ಗೂತ್ತಿನಬೈಲು ಕಾರ್ಯಾಗಾರವನ್ನು ನಡೆಸಿಕೊಟ್ಟರು. ವಿದ್ಯಾರ್ಥಿಗಳಿಗೆ ಈ ಕುರಿತು ಹೆಚ್ಚಿನ ಮಾಹಿತಿಯನ್ನು ಅಧ್ಯಾಪಕರಾದ ಶ್ರೀಯುತ ರಾಮಕೃಷ್ಣ ಭಟ್, ಗೋವಿಂಧ ಭಟ್, ಪ್ರದೀಪ್ ಮತ್ತು ಶಿವನಾರಾಯಣ ಭಟ್ ನೀಡಿದರು. ಶ್ರೀಮತಿ ಉಷಾ ಕೆ ಆರ್, ಸುನೀತಾ ಕೆ ಮತ್ತು ವಿಚೇತ ಉಪಸ್ಥಿತರಿದ್ದರು. 






Tuesday, June 05, 2018

ಶ್ರೀ ದುರ್ಗಾ ಪರಮೇಶ್ವರೀ  ಹೈಯರ್ ಸೆಕೆಂಡರಿ ಶಾಲೆ ಧರ್ಮತ್ತಡ್ಕದಲ್ಲಿ ವಿಶ್ವ ಪರಿಸರ ದಿನಾಚರಣೆ : ಶ್ರೀ ದುರ್ಗಾ ಪರಮೇಶ್ವರೀ  ಹೈಯರ್ ಸೆಕೆಂಡರಿ ಶಾಲೆ ಧರ್ಮತ್ತಡ್ಕದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಶಾಲಾ ವಿದ್ಯಾರ್ಥಿಗಳಿಗೆ ಗಿಡಗಳ ವಿತರಣೆಯೊಂದಿಗೆ ಆಚರಿಸಲಾಯಿತು. ಶಾಲಾ ಪರಿಸರದಲ್ಲಿ ಜೈವ ವೈವಿಧ್ಯ ಉದ್ಯಾನವನವನ್ನು ಇನ್ನಷ್ಟು ಬೆಳೆಸಲು ಔಷಾಧೀಯ ಗುಣವುಳ್ಳ ಗಿಡಗಳನ್ನು ಶಾಲಾ ವ್ಯವಸ್ಥಾಪಕರಾದ ಶ್ರೀ ಯನ್ ಶಂಕರನಾರಾಯಣ ಭಟ್ ರವರು ನೆಡುವುದರೊಂದಿಗೆ, ಪರಿಸರ ಸಂರಕ್ಷಣೆ ಮಹತ್ವವನ್ನು ಶಾಲಾ ಪ್ರಾಂಶುಪಾಲರಾದ ಶ್ರೀ ಯನ್ ರಾಮಚಂದ್ರ ಭಟ್ ಇವರು ವಿಧ್ಯಾರ್ಥಿಗಳಿಗೆ ತಿಳಿಸಿದರು. ಶಾಲಾ ಶಿಕ್ಷಕರು ಮತ್ತು ಶಿಕ್ಷಕೇತರ ವರ್ಗದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಶಾಲಾ ಹಿಂದಿ ಮತ್ತು ಕನ್ನಡ ಸಂಘ ವತಿಯಿಂದ ಪರಿಸರ ಮಹತ್ವವನ್ನು ಸಾರುವ ಘೋಷಣಾ ವಾಕ್ಯಗಳನ್ನು ಪ್ರದರ್ಶಿಸಲಾಯಿತು.