Friday, July 13, 2018

ಅರಿವು~ಆಕಾಶ ಮನೋವಿಕಾಸ ಕಾರ್ಯಾಗಾರ

ಧರ್ಮತ್ತಡ್ಕ:-  "ಆಕಾಶ
 ಎಂದರೆ ಅದು ಅಚ್ಚರಿಗಳ ಲೋಕ.ಬಾಹ್ಯಾಕಾಶವು ವಿಸ್ಮಯಗಳ ಆಗರ.ಅದರ ಅಧ್ಯಯನ ಅದು ಮುಗಿಯದ ಯಾನ" ಎಂದು ಇಸ್ರೋ ಸಂಸ್ಥೆಯ ನಿವೃತ್ತರಾದ ವಿಜ್ಞಾನಿ ಡಾ.ಪಿ.ಜೆ.ಭಟ್ ಅವರು ಹೇಳಿದರು. ಅವರು ಶ್ರೀ ದುರ್ಗಾಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆ ಧರ್ಮತ್ತಡ್ಕದಲ್ಲಿ ವಿದ್ಯಾರ್ಥಿಗಳಿಗೆ ಸಂಯೋಜಿಸಲ್ಪಟ್ಟ ಅರಿವು~ ಆಕಾಶ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳಿಗೆ ಬಾಹ್ಯಾಕಾಶ ತಂತ್ರಜ್ಞಾನದ ಬಗ್ಗೆ ಮನ ಮುಟ್ಟುವಂತೆ ವಿವರಿಸಿದರು.

     ಹಿರಿಯ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ವಿಶ್ವೇಶ್ವರ ಭಟ್ ಉಂಡೆಮನೆ ಅವರು, ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸಕ್ಕಾಗಿ  ಪರೀಕ್ಷೆ~ನಿರೀಕ್ಷೆ ಕಾರ್ಯಾಗಾರವನ್ನು ನಡೆಸಿಕೊಟ್ಟರು ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಕಾರ್ಯಕ್ರಮವನ್ನು ಶಾಲಾ ಸಂಚಾಲಕಿ ಶ್ರೀಮತಿ ಶಾರದಾ ಅಮ್ಮ ಉದ್ಘಾಟಿಸಿದರು. ಶ್ರೀ ಕೇಶವಪ್ರಸಾದ ಎಡೆಕ್ಕಾನ ಇವರು ಅತಿಥಿಗಳನ್ನು ಪರಿಚಯಿಸಿದರು. ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದ ಆಡಳಿತಾಧಿಕಾರಿ ಶ್ರೀ ಶ್ಯಾಮ ಭಟ್ ಹಾಗೂ ಶಾಲಾ ವ್ಯಸ್ಥಾಪಕ  ಶ್ರೀ ಶಂಕರನಾರಾಯಣ ಭಟ್ ಶುಭ‌ಹಾರೈಸಿದರು. ಇದೇ ಸಂದರ್ಭದಲ್ಲಿ ಶಾಲಾ ಸಂಸ್ಕೃತ ಅಧ್ಯಾಪಕರಾದ ಶ್ರೀ ಶಿವನಾರಾಯಣ ಭಟ್ ಅವರು ದೀಪವೊಂದನ್ನು ಶಾಲೆಗೆ ಕೊಡುಗೆಯಾಗಿ ನೀಡಿದರು. ಶಾಲಾ ಪ್ರಾಂಶುಪಾಲರಾದ ಶ್ರೀ ರಾಮಚಂದ್ರ ಭಟ್ ಸ್ವಾಗತಿಸಿದರು. ಶ್ರೀ ಸತೀಶ ಕುಮಾರ್ ಶೆಟ್ಟಿ ವಂದಿಸಿದರು.  ಶ್ರೀ ಗೋವಿಂದ ಭಟ್ ಎಡಕ್ಕಾನ ಕಾರ್ಯಕ್ರಮ ನಿರೂಪಿಸಿದರು. 180 ಕ್ಕೂ ಅಧಿಕ ವಿದ್ಯಾರ್ಥಿಗಳು ಶಿಬಿರದ ಪ್ರಯೋಜನ ಪಡೆದುಕೊಂಡರು. ಶಾಲೆಯ ಅಧ್ಯಾಪಕರು, ಸಿಬ್ಬಂದಿ ವರ್ಗದವರು ಸಹಕರಿಸಿದರು.






 

Thursday, July 12, 2018

ರಕ್ಷಕ ಶಿಕ್ಷಕ ಸಂಘದ ಮಹಾ ಸಭೆ  2018-2019

ಧರ್ಮತ್ತಡ್ಕ : ಧರ್ಮತ್ತಡ್ಕ ಹೈಯರ್ ಸೆಕೆಂಡರಿ ಶಾಲೆಯ  ರಕ್ಷಕ ಶಿಕ್ಷಕ ಸಂಘದ ಮಹಾಸಭೆಯು 12-07-2018ರಂದು ಜರಗಿತು. ಸಂಘದ ಅಧ್ಯಕ್ಷ ಶ್ರೀ ಸುಂದರ ಶೆಟ್ಟಿ  ಅಧ್ಯಕ್ಷತೆ ವಹಿಸಿದರು. ಶ್ರೀ ಯನ್ ರಾಮಚಂದ್ರ ಭಟ್ ಪ್ರಾಂಶುಪಾಲರು ಪ್ರಾಸ್ತಾವಿಕ ಭಾಷಣ ಹಾಗೂ ಶಾಲಾ ಸೌಕರ್ಯಗಳ ಬಗ್ಗೆ ಮಾಹಿತಿ ನೀಡಿದರು.ಶಾಲಾ ಮ್ಯಾನೇಜರ್ ಶ್ರೀ ಯನ್ ಶಂಕರನಾರಾಯಣ ಭಟ್ ಶಾಲಾ ಅಭಿವೃದ್ಧಿ ಯೋಜನೆಯ ಕುರಿತು ಮಾತನಾಡಿದರು.ಶ್ರೀಮತಿ ಈಶ್ವರೀ ಡಿ ಗತ ವರ್ಷದ ವಾರ್ಷಿಕ ವರದಿಯನ್ನು ಮಂಡಿಸಿದರು. ಈ ಸಾಲಿನ PTA ಅಧ್ಯಕ್ಷರಾಗಿ ಶ್ರೀ ಗಿರೀಶ್ ಕುಮಾರ್ ,MPTA ಅಧ್ಯಕ್ಷೆಯಾಗಿ ಶ್ರೀಮತಿ ವಿಲ್ಮಾ ,PTA ಉಪಾಧ್ಯಕ್ಷರಾಗಿ  ಶ್ರೀ ಸುಂದರ ಶೆಟ್ಟಿ ,MPTA ಉಪಾಧ್ಯಕ್ಷೆಯಾಗಿ ಶ್ರೀಮತಿ ಪುಷ್ಪ  ಇವರು ಅವಿರೋಧವಾಗಿ ಆಯ್ಕೆಗೊಂಡರು.ಅಲ್ಲದೆ 18 ಮಂದಿ ಸದಸ್ಯರನ್ನೊಳಗೊಂಡ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.ಶಾಲಾ ಅಧ್ಯಾಪಕ ಶ್ರೀ ಸತೀಶ್ ಕುಮಾರ್ ಶೆಟ್ಟಿ  ಅವರು ಶಿಸ್ತು ಮತ್ತು ಶಾಲಾ ನಿಯಮಾವಳಿಗಳ ಬಗ್ಗೆ ರಕ್ಷಕರಿಗೆ ಮಾಹಿತಿ ನೀಡಿದರು.ಶಾಲೆಯಲ್ಲಿ ನಡೆಯುವ ಎಲ್ಲಾ ಚಟುವಟಿಕೆಗಳಿಗೂ ತಮ್ಮ ಸಂಪೂರ್ಣ ಸಹಾಯ ಸಹಕಾರಗಳನ್ನು ನೀಡುತ್ತೇವೆಂದು ರಕ್ಷಕರು ಹೇಳಿದರು.ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.ಶಾಲಾ ಅಧ್ಯಾಪಕ ಶ್ರೀ ಗೋವಿಂಧ ಭಟ್ ಇವರು ಸ್ವಾಗತಿಸಿ, ಶ್ರೀ ನರಸಿಂಹ ರಾಜ್ ವಂದಿಸಿದರು. ಶ್ರೀಮತಿ ಉಮಾ ದೇವಿ ಕಾರ್ಯಕ್ರಮ ನಿರೂಪಿಸಿದರು.ಎಲ್ಲರಿಗೂ  ಲಘು ಉಪಹಾರವನ್ನು ನೀಡಲಾಯಿತು