Saturday, July 28, 2018


ರಾಮಾಯಣ  ಮಾಸಾಚರಣೆ 
ರಾಮಾಯಣ ಮಾಸಾಚರಣೆ ಹಾಗೂ ಗುರುವಂದನೆ ಕುಂಬಳೆ: ಭಾರತೀಯ ಸನಾತನ ಪರಂಪರೆ ಗುರುಕುಲ ವಿದ್ಯಾಭ್ಯಾಸಕ್ಕೆ ಹೊಂದಿಕೊಂಡಿದೆ. ಆದರೆ ಇವತ್ತಿನ ಪ್ರಸ್ತುತತೆಯಲ್ಲಿ ಕೂಡಾ ಅದೇ ರೀತಿ ಸ್ಥಾನ ಮಾನ ಗುರುವಿಗೆ ನೀಡಬೇಕು ಎಂದು ಶಾಲಾ ಸಂಚಾಲಕಿ ಶಾರದಮ್ಮ ಹೇಳಿದರು. ಧರ್ಮತ್ತಡ್ಕ ಶ್ರೀ ದುಗರ್ಾ ಪರಮೇಶ್ವರೀ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಸಂಸ್ಕೃತ ಸಂಘದ ಆಶ್ರಯಲ್ಲಿ ಎಲ್ಲ ಸಂಘಗಳ ಸಹಕಾರದೊಂದಿಗೆ ಇತ್ತೀಚೆಗೆ ನಡೆದ ರಾಮಾಯಣ ಮಾಸಾಚರಣೆ ಮತ್ತು ಗುರುವಂದನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಗುರು ಎಂದರೆ ಅಂಧಕಾರ ಹೋಗಲಾಡಿಸುವವ. ಬದುಕಿನಲ್ಲಿ ಗುರುನಿಷ್ಠೆ ಅಗತ್ಯ. ಗುರುವಿನ ಅನುಗ್ರಹವಿಲ್ಲದೆ ಮುಕ್ತಿ ದೊರೆಯಲಾರದೆಂಬ ಪರಿಕಲ್ಪನೆಯ ಹಿಂದೆ ಉದಾತ್ತ ಚಿಂತನೆ ಅಡಗಿದೆ. ಒಂದಕ್ಷರ ಕಲಿಸಿದಾತನೂ ಗುರು ಎನ್ನಲಾಗುತ್ತದೆ. ಗುರುಗಳಿಗೆ ವಂದನೆ ಸಲ್ಲಿಸುವುದು ಪ್ರಾಚೀನ ಸಂಸ್ಕೃತಿಯಲ್ಲೇ ರೂಢಿಯಲ್ಲಿತ್ತು. ಇಂದಿಗೂ ಗುರುವಿನ ಮಹತ್ವವನ್ನರಿತು ಗುರುವಂದನೆ ನಡೆಯುತ್ತಿದೆ. ಇಂತಹ ಕಾರ್ಯಕ್ರಮ ಅಗತ್ಯವಾಗಿ ನಮ್ಮ ದೇಶದ ಗುರುಸ್ಥಾನಕ್ಕೆ ಇರುವ ಮಹತ್ವ ಸಾಬೀತುಪಡಿಸುತ್ತದೆ. ಈ ನಿಟ್ಟಿನಲ್ಲಿ ಶಾಲೆಯಲ್ಲಿ ರಾಮಾಯಣ ಮಾಸಾಚರಣೆ ಹಾಗೂ ಗುರುವಂದನೆ ಸಕಾಲಿಕ ಎಂದು ಅವರು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಶಾಲಾ ಪ್ರಬಂಧಕ ಶಂಕರನಾರಾಯಣ ಭಟ್ ಮಾತನಾಡಿ, ಶಾಲಾ ಜೀವನ ಬದುಕಿನ ಮಹತ್ತರ ಬೆಳವಣಿಗೆಗೆ ಮಾರ್ಗದಶರ್ಿಯಾಗಿದ್ದು, ಶಿಲ್ಪಿ ಕಲ್ಲು ಕೆತ್ತುವಂತೆ ಗುರು ಒಬ್ಬ ಉತ್ತಮ ಶಿಷ್ಯನ ಜೀವನ ಕೆತ್ತುತ್ತಾನೆ ಎಂದರು. ಸತ್ಯವತಿ, ಹಿರಿಯ ಪ್ರಾಥಮಿಕ ಸಂಸ್ಕೃತ ಅಧ್ಯಾಪಕ ಕೃಷ್ಣ ಪ್ರಸಾದ್ ಕಡೆಗೆದ್ದೆ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು. ಪ್ರಭಾರ ಪ್ರಾಂಶುಪಾಲ ನರಸಿಂಹರಾಜ ಭಟ್, ಶಿವನಾರಾಯಣ ಭಟ್ ಮಾತನಾಡಿದರು. ಸಂಸ್ಕೃತ ಸಂಘದ ಕಾರ್ಯದಶರ್ಿ ಆದಿತ್ಯರಾಮ ಸ್ವಾಗತಿಸಿ, ಜೊತೆ ಕಾರ್ಯದಶರ್ಿ ಮೇಘ ವಂದಿಸಿದರು. ಸಾತ್ವಿಕ ಕೃಷ್ಣ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾಥರ್ಿನಿಯರು ಪ್ರಾರ್ಥನೆ ಹಾಡಿದರು. ಎಲ್ಲ ಅಧ್ಯಾಪಕರು ಪುಷ್ಪಾರ್ಚನೆ ಮೂಲಕ ಗುರುವಂದನೆ ನಡೆಸಿದರು.





ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ಪ್ರೌಢ ಶಾಲೆಯಲ್ಲಿ ಕಾರ್ಗಿಲ್ ವಿಜಯೋತ್ಸವ ಆಚರಣೆ



ಧರ್ಮತ್ತಡ್ಕ : ಶ್ರೀ ದುರ್ಗಾಪರಮೇಶ್ವರಿ ಪ್ರೌಢ ಶಾಲೆಯಲ್ಲಿ ಸಮಾಜ ವಿಜ್ಞಾನ ಸಂಘದ ನೇತೃತ್ವದಲ್ಲಿ ಕಾರ್ಗಿಲ್ ವಿಜಯೋತ್ಸವ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ದೀಪ ಪ್ರಜ್ವಲನೆಯ ಮೂಲಕ ಅಮರ ಯೋಧರ ಸ್ಮರಣೆ ಮಾಡುತ್ತಾ ಮೌನ ಪ್ರಾರ್ಥನೆಯೊಂದಿಗೆ ಶಾಲಾ ಮ್ಯಾನೇಜರ್ ಶಂಕರನಾರಾಯಣ ಭಟ್ ಕಾರ್ಯಕ್ರಮ ಉದ್ಘಾಟಿಸಿದರು. ”ನಾವಿಂದು ಸುಖವಾಗಿ ನಮ್ಮ ಮನೆಗಳಲ್ಲಿ ನಿಶ್ಚಿಂತೆಯಿಂದ ನಿದ್ರಿಸುತಿದ್ರೆ ಅದು ನಮ್ಮ ಯೋಧರು ನಿದ್ದೆ ಗೆಟ್ಟು ತಮ್ಮ ಕರ್ತವ್ಯದಲ್ಲಿ ಮಗ್ನರಾದುದರಿಂದ, ಪ್ರತಿಯೊಬ್ಬ ಯೋಧನು ಕೂಡ ನಮ್ಮ ಹೆಮ್ಮೆ “ ಎಂದು ಶಾಲಾ ಪ್ರಾಂಶುಪಾಲರಾದ ರಾಮಚಂದ್ರ ಭಟ್ ಅಭಿಪ್ರಾಯಪಟ್ಟರು.


ಹೈಯರ್ ಸೆಕೆಂಡರಿ ಅಧ್ಯಾಪಕರಾದ ಸತೀಶ್ ಕುಮಾರ್ ಶೆಟ್ಟಿಯವರು ಕಾರ್ಗಿಲ್ ಹೋರಾಟದ ಅನಿವಾರ್ಯತೆ, ಹೋರಾಟದಲ್ಲಿ ಮಡಿದ ವೀರ ಸೈನಿಕರ ಬಲಿದಾನ, ಕೆಚ್ಚೆದೆಯ ಶೌರ್ಯದ ಬಗ್ಗೆ ತಿಳಿಸಿ ವಿದ್ಯಾರ್ಥಿಗಳಲ್ಲಿ ದೇಶ ಪ್ರೇಮದ ಭಾವನೆ ಮೂಡಿಸಿದರು.

ರಾಜ್ ಕುಮಾರ್, ಸಂತೋಷ್ ಕುಮಾರ್, ಗಂಗಮ್ಮ ,ಉಷಾ ಕೆ ಆರ್ , ಕೇಶವಪ್ರಸಾದ ಎಡಕ್ಕಾನ ,ನಾಗರಾಜ, ಪ್ರಶಾಂತ ಹೊಳ್ಳ ಕಾರ್ಯಕ್ರಮದ ನೇತೃತ್ವ ವಹಿಸಿದರು. ಶಿವನಾರಾಯಣ ಭಟ್ ಸ್ವಾಗತಿಸಿ, ಶಿವಪ್ರಸಾದ್.ಸಿ ವಂದಿಸಿದರು.











ಮಂಜೇಶ್ವರ ಉಪಜಿಲ್ಲಾ ವಿಜ್ಞಾನ ಸೆಮಿನಾರ್  ಧರ್ಮತ್ತಡ್ಕ ವಿದ್ಯಾಲಯಕ್ಕೆ ಪ್ರಥಮ : ಮಂಜೇಶ್ವರ ಉಪಜಿಲ್ಲಾ ವಿಜ್ಞಾನ ಸೆಮಿನಾರ್ ಸ್ಪರ್ಧೆಯಲ್ಲಿ  ಧರ್ಮತ್ತಡ್ಕ  ಹೈಯರ್ ಸೆಕೆಂಡರಿ ಶಾಲೆಯ ಕುಮಾರಿ ಸ್ವರ್ಣ ಕೆ ಇವಳು ಪ್ರಥಮ ಸ್ಥಾನವನ್ನೂ ಪಡೆದು ಪಡೆದು ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುವಳು.