ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ಪ್ರೌಢ ಶಾಲೆಯಲ್ಲಿ ಕಾರ್ಗಿಲ್ ವಿಜಯೋತ್ಸವ ಆಚರಣೆ
ಧರ್ಮತ್ತಡ್ಕ : ಶ್ರೀ ದುರ್ಗಾಪರಮೇಶ್ವರಿ ಪ್ರೌಢ ಶಾಲೆಯಲ್ಲಿ ಸಮಾಜ ವಿಜ್ಞಾನ ಸಂಘದ ನೇತೃತ್ವದಲ್ಲಿ ಕಾರ್ಗಿಲ್ ವಿಜಯೋತ್ಸವ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ದೀಪ ಪ್ರಜ್ವಲನೆಯ ಮೂಲಕ ಅಮರ ಯೋಧರ ಸ್ಮರಣೆ ಮಾಡುತ್ತಾ ಮೌನ ಪ್ರಾರ್ಥನೆಯೊಂದಿಗೆ ಶಾಲಾ ಮ್ಯಾನೇಜರ್ ಶಂಕರನಾರಾಯಣ ಭಟ್ ಕಾರ್ಯಕ್ರಮ ಉದ್ಘಾಟಿಸಿದರು. ”ನಾವಿಂದು ಸುಖವಾಗಿ ನಮ್ಮ ಮನೆಗಳಲ್ಲಿ ನಿಶ್ಚಿಂತೆಯಿಂದ ನಿದ್ರಿಸುತಿದ್ರೆ ಅದು ನಮ್ಮ ಯೋಧರು ನಿದ್ದೆ ಗೆಟ್ಟು ತಮ್ಮ ಕರ್ತವ್ಯದಲ್ಲಿ ಮಗ್ನರಾದುದರಿಂದ, ಪ್ರತಿಯೊಬ್ಬ ಯೋಧನು ಕೂಡ ನಮ್ಮ ಹೆಮ್ಮೆ “ ಎಂದು ಶಾಲಾ ಪ್ರಾಂಶುಪಾಲರಾದ ರಾಮಚಂದ್ರ ಭಟ್ ಅಭಿಪ್ರಾಯಪಟ್ಟರು.
ಹೈಯರ್ ಸೆಕೆಂಡರಿ ಅಧ್ಯಾಪಕರಾದ ಸತೀಶ್ ಕುಮಾರ್ ಶೆಟ್ಟಿಯವರು ಕಾರ್ಗಿಲ್ ಹೋರಾಟದ ಅನಿವಾರ್ಯತೆ, ಹೋರಾಟದಲ್ಲಿ ಮಡಿದ ವೀರ ಸೈನಿಕರ ಬಲಿದಾನ, ಕೆಚ್ಚೆದೆಯ ಶೌರ್ಯದ ಬಗ್ಗೆ ತಿಳಿಸಿ ವಿದ್ಯಾರ್ಥಿಗಳಲ್ಲಿ ದೇಶ ಪ್ರೇಮದ ಭಾವನೆ ಮೂಡಿಸಿದರು.
ರಾಜ್ ಕುಮಾರ್, ಸಂತೋಷ್ ಕುಮಾರ್, ಗಂಗಮ್ಮ ,ಉಷಾ ಕೆ ಆರ್ , ಕೇಶವಪ್ರಸಾದ ಎಡಕ್ಕಾನ ,ನಾಗರಾಜ, ಪ್ರಶಾಂತ ಹೊಳ್ಳ ಕಾರ್ಯಕ್ರಮದ ನೇತೃತ್ವ ವಹಿಸಿದರು. ಶಿವನಾರಾಯಣ ಭಟ್ ಸ್ವಾಗತಿಸಿ, ಶಿವಪ್ರಸಾದ್.ಸಿ ವಂದಿಸಿದರು.
No comments:
Post a Comment