Friday, March 03, 2017
Wednesday, March 01, 2017
Sunday, February 26, 2017
Preperation for EXAM
ಯಶಸ್ವಿ
ವಿದ್ಯಾರ್ಥಿಯಾಗುವುದು ಹೇಗೆ?
- ಅಧ್ಯಾಪಕರ ಮಾತುಗಳನ್ನು ಗಮನವಿಟ್ಟು ಆಲಿಸುವುದು : ವಿಷಯಗಳನ್ನು ತಿಳಿದುಗೊಳ್ಳಲು ಹಾಗೂ ನೀವು ಯಾವುದನ್ನು ಮುಖ್ಯವಾಗಿ ಕಲಿಯಬೇಕೆಂಬುದು ಅಧ್ಯಾಪಕರ ಅಭಿಪ್ರಾಯವಾಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು, ನೀವು ಅವರ ಮಾತುಗಳಿಗೆ ಗಮನ ಕೊಡುವುದು ಮುಖ್ಯ.ಕ್ಲಾಸಿಗೆ ಬರುವ ಮುನ್ನ ಪಠ್ಯ ಪುಸ್ತಕವನ್ನು ಓದಿದರೆ ತರಗತಿಯಲ್ಲಿ ನೀಡುವ ವಿವರಣೆ ಹೆಚ್ಚು ಮನದಟ್ಟಾಗುವುದು.
- ತರಗತಿಯಲ್ಲಿ ನೋಟ್ಸ್ ಬರೆದುಕೊಳ್ಳುವುದು: ಅಧ್ಯಾಪಕರು ವಿವರಿಸುವ ವಿಷಯಗಳ ಮುಖ್ಯ ಅಂಶಗಳನ್ನು ಟಿಪ್ಪಣಿ ಮಾಡಿಕೊಳ್ಳುವುದು.
- ಪಠ್ಯಪುಸ್ತಕಗಳನ್ನು ಓದುವುದು: ತರಗತಿಯಲ್ಲಿ ಆಲಿಸಿದ ವಿಷಯಗಳು ಮನಸ್ಸಿನಲ್ಲಿ ಬೇರೂರಿ ಪರೀಕ್ಷಾ ಸಿದ್ಧತೆಗೆ ಅನುಕೂಲವಾಗುವುದು.
- ಪಠ್ಯಪುಸ್ತಕದ ಅಭ್ಯಾಸಗಳನ್ನು ಪೂರ್ತಿ ಮಾಡುವುದು.ತರಗತಿ ಕಲಿಕೆಯಲ್ಲಿ ಪ್ರೌಢಿಮೆ ಹೊಂದಲು ಇದು ಪೂರಕ.
- ಕಲಿಕಾ ಗುಂಪಿನ ರಚನೆ : 3 ರಿಂದ 6 ಮಕ್ಕಳ ತಂಡ ರಚಿಸಿ ಒಟ್ಟಿಗೆ ಸೇರಿಕೊಂಡು ಪಾಠದ ವಿಷಯಗಳನ್ನು ವಿಮರ್ಶಿಸಿಕೊಂಡು ಪರೀಕ್ಷೆಗೆ ಸಿದ್ಧಪಡಿಸಿಕೊಳ್ಳುವುದು ಒಳ್ಳೆಯದು.ವಿದ್ಯಾರ್ಥಿಗಳು ಸೋಲುವುದಕ್ಕೆ ಕೆಲವು ಕಾರಣಗಳು
- ಸಮಯಕ್ಕೆ ಸರಿಯಾಗಿ ಶಾಲೆಗೆ / ಕ್ಲಾಸಿಗೆ ತಲುಪದಿರುವುದು.
- ಟೈಮ್ ಟೇಬಲ್ ಗನುಸಾರವಾಗಿ ಪುಸ್ತಕಗಳನ್ನು ತರದಿರುವುದು.
- ಟೈಮ್ ಟೇಬಲ್ ಗನುಸಾರವಾಗಿ ನೋಟ್ ಬುಕ್ ತರದಿರುವುದು.
- ನೋಟ್ ಪುಸ್ತಕ ಸರಿಯಾಗಿ ಇಟ್ಟುಕೊಳ್ಳದಿರುವುದು.
- ಕ್ಲಾಸಿನಲ್ಲಿ ಅಧ್ಯಾಪಕರ ಮಾತುಗಳನ್ನು ಗಮನವಿಟ್ಟು ಆಲಿಸದಿರುವುದು.
- ಪಾಠದ ಸಂದರ್ಭದಲ್ಲಿ ಬೇರೆ ಕೆಲಸ ಮಾಡುತ್ತಿರುವುದು.
- ಅಗತ್ಯದ ವೇಗದಲ್ಲಿ ನೋಟ್ಸ್ ಬರೆಯದಿರುವುದು.
- ಹೋಂವರ್ಕ್ ಮಾಡದಿರುವುದು.
- ಶಾಲೆಗೆ ಆಗಾಗ ಬರದಿರುವುದು.
- ಶಾಲೆಗೆ ಬಾರದ ದಿನದ ಪಾಠದ ಬಗ್ಗೆ ಅರಿತುಕೊಳ್ಳದಿರುವುದು ಮತ್ತು ನೋಟ್ಸ್ ಬರೆಯದಿರುವುದು
- ಪ್ರತಿದಿನ ಅಭ್ಯಾಸಕ್ಕೆ ಅಗತ್ಯವಾದಷ್ಟು ಸಮಯ ವಿನಿಯೋಗಿಸದಿರುವುದು.
- ಅಭ್ಯಾಸಕ್ಕೆ ಸರಿಯಾದ ಟೈಮ್ ಮ್ಯಾನೇಜ್ ಮೆಂಟ್ ಇಲ್ಲದಿರುವುದು.
- ಓದುವುದನ್ನು ಪ್ರತಿದಿನ ’ನಾಳೆಗೆ ’ ಎಂದು ಮುಂದೂಡುವುದು.
- ಪಾಠ ಓದಬೇಕಾದ ಸಮಯದಲ್ಲಿ ಆಡುವುದು.
- ರೇಡಿಯೋ / MP3 ಹಾಡು ಕೇಳುತ್ತಾ ಅಥವಾ T.V/ computer ನೋಡುತ್ತಾ ಅಭ್ಯಾಸ ಮಾಡುತ್ತಿರುವುದು.
- ಉತ್ತಮ ಗೆಳೆಯರನ್ನು ಹೊಂದದಿರುವುದು.
- ಕೆಟ್ಟವರ ಸಹವಾಸದಿಂದ ಮನಸ್ಸು ಕೆಟ್ಟು ಅಧ್ಯಾಪಕರನ್ನು ಧಿಕ್ಕರಿಸುವುದು.
- ಸಹಪಾಠಿಗಳಲ್ಲಿ ಉತ್ತಮ ಗುಣವನ್ನು ಕಾಣದಿರುವುದು.
- ಹೊಂದಾಣಿಕೆ ಇಲ್ಲದಿರುವುದು.
- ಶಾಲೆಯ ಪಾಠಪ್ರವಚನ ಬಗ್ಗೆ ಹೆತ್ತವರಿಗೆ ಮಾಹಿತಿಯನ್ನು ಕೊಡದಿರುವುದು.
- ಅಧ್ಯಾಪಕರ ಮತ್ತು ಅವರು ಮಾಡುವ ಪಾಠದ ಬಗ್ಗೆ ದೋಷವನ್ನೇ ಕಾಣುವುದು.
- ಹಲವು ಸಲ ಓದಿದರೂ ಅರ್ಥವಾಗದಿರುವುದು. ಅಧ್ಯಾಪಕರಲ್ಲಿ ಕೇಳಿ ಅರ್ಥೈಸಿಕೊಳ್ಳುವುದಕ್ಕೂ ಪ್ರಯತ್ನಿಸದಿರುವುದು.
- ಅಂದವಿಲ್ಲದ(ಕೊಳಕಾದ) ಅಕ್ಷರದಿಂದ, ಬರೆದುದನ್ನು ಓದಲಾಗದೆ ಪರೀಕ್ಷೆಯಲ್ಲಿ ಮಾರ್ಕ್ ಕಳೆದುಕೊಳ್ಳುವುದು.
- ಅಂದವಿಲ್ಲದ ಚಿತ್ರಗಳನ್ನು ಬಿಡಿಸುವುದು.
- ಕಲಿಕಾ ಗುಂಪಿನಲ್ಲಿ ಭಾಗವಹಿಸದಿರುವುದು.
- ಹಿಂದಿನ ಕ್ಲಾಸಿನ ಪಾಠಗಳು ಏನೇನೂ ನೆನಪಿನಲ್ಲಿರದೆ ಇರುವುದು.
- ಬೋರ್ಡಿನಲ್ಲಿ ಬರೆದುದನ್ನು ಗಮನಿಸದಿರುವುದು.(ಲೆಕ್ಕದ ಸ್ಟೆಪ್ಸ್, ರಾಸಾಯನಿಕ ಸೂತ್ರ......)
- ಅರ್ಥೈಸದೆ ನಕಲು ಮಾತ್ರ ಮಾಡುವುದು.
- ಸ್ವಂತ ಆತ್ಮವಿಶ್ವಾಸ ಇಲ್ಲದಿರುವುದು.
- ಸರಿಯಾಗಿ ರಿವಿಜನ್ ಮಾಡದಿರುವುದು.
- ಓದಿದ ಪಾಠಗಳನ್ನು ಮತ್ತೆ ಮತ್ತೆ ಓದದೆ ಇರುವುದು.
- ಪರೀಕ್ಷೆಯಲ್ಲಿ ಪ್ರಶ್ನೆಗಳನ್ನು ಸರಿಯಾಗಿ ಓದದೆ, ಮನದಟ್ಟು ಮಾಡಿಕೊಳ್ಳದೆ ಉತ್ತರ ಬರೆಯುವುದು.
- ವ್ಯಕ್ತಿತ್ವ ವಿಕಸನಕ್ಕೆ ಸಂಬ0ಧಿಸಿದ ಪುಸ್ತಕಗಳನ್ನು ಓದದೆ ಇರುವುದು.
Subscribe to:
Posts (Atom)