Saturday, July 29, 2017

ಶಾಲೆಯಲ್ಲಿ ನಡೆಯುತ್ತಿರುವ ಕುಟ್ಟಿಕೂಟಂ ಟ್ರೈನಿಂಗ್ ನ ಕೆಲವು ಚಿತ್ರಣಗಳು. ಗಣಿತ ಅಧ್ಯಾಪಕರಾದ ಶ್ರೀ ಶಶಿಕುಮಾರ್ ತರಗತಿ ನಡೆಸಿಕೊಟ್ಟರು. ಮಕ್ಕಳು ತರಬೇತಿಯಲ್ಲಿ ಬಹಳ ಉತ್ಸಾಹದಿಂದ ಭಾಗವಹಿಸಿದರು.







ಶ್ರೀರಾಮಾಯಣ ಮಾಸಾಚರಣೆಯ ಪ್ರಯುಕ್ತ ಶಾಲಾಮಟ್ಟದಲ್ಲಿ ಜರಗಿದ ರಾಮಾಯಣ ಪ್ರಶ್ನೋತರಿ ಸ್ಪರ್ಧೆಯಲ್ಲಿ ಸಾತ್ವಿಕ್ ಕೃಷ್ಣ 9D ಪ್ರಥಮ, ಪ್ರಣವ ಕುಮಾರ್ 10C ದ್ವಿತೀಯ, ಸಿಂಜಿತಾ 8D ತೃತೀಯ  ಸ್ಥಾನವನ್ನು ಪಡೆದರು. ಸಂಸ್ಕೃತ ಅಧ್ಯಾಪಕರಾದ ಶ್ರೀ ಶಿವನಾರಾಯಣ ಭಟ್ ಸ್ಫರ್ಧೆ ನಡೆಸಿಕೊಟ್ಟರು.

Tuesday, July 25, 2017

Kumar PRANAVA KUMAR N(10C) celebrated his birthday, presenting 1 valuable books to the school libray. the school principal, Manager, &  school staffs  wish him and his parents a bright and glorious future.





ವಿಜ್ಞಾನ ಸಂಘದಲ್ಲಿ ನಡೆದ ಶಾಲಾ ಮಟ್ಟದ ಪ್ರಭಂದ ಸ್ಪರ್ಧೆಯು 21-07-2017ರಂದು ಜರಗಿತು. 
ವಿಷಯ : USES AND ABUSES OF SOCIAL MEDIAS
            : ಸಾಮಾಜಿಕ ಜಾಲ ತಾಣಗಳ ಉಪಯೋಗ ಮತ್ತು ದುರುಪಯೋಗ


RESULT in  English Medium 
First       : SWARNA  9D 
Second   : VANDITHA 8D 
Third      : RAMYASHREE 9D 

Result in Kannada Medium 

First        : PRANAVA KUMAR  N  10C
Second    : KRISHNA SHARMA 10C
Third       : Sinjitha  K  8D


Sunday, July 23, 2017

ರಕ್ಷಕ ಶಿಕ್ಷಕ ಸಂಘದ ಮಹಾ ಸಭೆ 

ಧರ್ಮತ್ತಡ್ಕ : ಧರ್ಮತ್ತಡ್ಕ ಹೈಯರ್ ಸೆಕೆಂಡರಿ ಶಾಲೆಯ  ರಕ್ಷಕ ಶಿಕ್ಷಕ ಸಂಘದ ಮಹಾಸಭೆಯು 22-07-2017ರಂದು ಜರಗಿತು. ಸಂಘದ ಅಧ್ಯಕ್ಷ ಶ್ರೀ ಸುಂದರ ಶೆಟ್ಟಿ  ಅಧ್ಯಕ್ಷತೆ ವಹಿಸಿದರು. ಶ್ರೀ ಯನ್ ರಾಮಚಂದ್ರ ಭಟ್ ಪ್ರಾಂಶುಪಾಲರು ಪ್ರಾಸ್ತಾವಿಕ ಭಾಷಣ ಹಾಗು ಲೆಕ್ಕ ಪತ್ರ ಮಂಡಿಸಿದರು. ಶಾಲಾ ಮ್ಯಾನೇಜರ್ ಶ್ರೀ ಶಂಕರನಾರಾಯಣ ಭಟ್ ಶಾಲಾ ಅಭಿವೃದ್ಧಿ ಯೋಜನೆಯ ಕುರಿತು ಮಾತನಾಡಿದರು.ಶ್ವೇತಾ ಟೀಚರ್ ಗತ ವರ್ಷದ ವಾರ್ಷಿಕ ವರದಿಯನ್ನು ಮಂಡಿಸಿದರು. ಈ ಸಾಲಿನ PTA ಅಧ್ಯಕ್ಷರಾಗಿ ಶಂಕರ ಕಾಮತ್, MPTA ಅಧ್ಯಕ್ಷೆಯಾಗಿ ಶ್ರೀಮತಿ ರೇವತಿ,PTA ಉಪಾಧ್ಯಕ್ಷರಾಗಿ  ಶ್ರೀ ಸುಂದರ ಶೆಟ್ಟಿ ,MPTA ಉಪಾಧ್ಯಕ್ಷೆಯಾಗಿ ಶೈಲಜಾ ಇವರು ಅವಿರೋಧವಾಗಿ ಆಯ್ಕೆಗೊಂಡರು. ಅಲ್ಲದೆ 17   ಮಂದಿ ಸದಸ್ಯರನ್ನೊಳಗೊಂಡ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.ಶಾಲಾ ಅಧ್ಯಾಪಕ ಸತೀಶ್ ಕುಮಾರ್ ಶೆಟ್ಟಿ  ಅವರು ಶಿಸ್ತು ಮತ್ತು ಶಾಲಾ ನಿಯಮಾವಳಿಗಳ ಬಗ್ಗೆ ರಕ್ಷಕರಿಗೆ ಮಾಹಿತಿ ನೀಡಿದರು. ಅಧ್ಯಾಪಕ ಶ್ರೀ ಗೋವಿಂದ  ಭಟ್ ಅವರು ವ್ಯಕ್ತಿ ಶುಚಿತ್ವ ಮತ್ತು ಆರೋಗ್ಯದ ಕುರಿತು ತರಗತಿ ನಡೆಸಿದರು.ಶಾಲೆಯಲ್ಲಿ ನಡೆಯುವ ಎಲ್ಲಾ ಚಟುವಟಿಕೆಗಳಿಗೂ ತಮ್ಮ ಸಂಪೂರ್ಣ ಸಹಾಯ ಸಹಕಾರಗಳನ್ನು ನೀಡುತ್ತೇವೆಂದು ರಕ್ಷಕರು ಹೇಳಿದರು.  ಹಿರಿಯ ಅಧ್ಯಾಪಕಿ ಸುನೀತಾ ಕೆ ಪ್ರಾರ್ಥನೆ ಹಾಡಿ  ಸ್ವಾಗತಿಸಿದರು. ಅಧ್ಯಾಪಕಿ ಈಶ್ವರಿ ಡಿ ವಂದಿಸಿದರು. ಶ್ರೀಮತಿ ಉಮಾ ದೇವಿ ಕಾರ್ಯಕ್ರಮ ನಿರೂಪಿಸಿದರು.ಎಲ್ಲರಿಗೂ  ಲಘು ಉಪಹಾರವನ್ನು ನೀಡಲಾಯಿತು