Thursday, November 17, 2016

ಉಪಜಿಲ್ಲಾ ಕಲೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ


ಧರ್ಮತಡ್ಕ: ಈ ತಿಂಗಳ 26ರಿಂದ ಧರ್ಮತಡ್ಕ ಶಾಲೆಯಲ್ಲಿ ನಡೆಯಲಿರುವ ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವದ ಆಮಂತ್ರಣ ಪತ್ರಿಕೆಯನ್ನು ಮಂಜೇಶ್ವರ ಉಪಜಿಲ್ಲಾ ಸಹಾಯಕ ವಿದ್ಯಾಧಿಕಾರಿ ಶ್ರೀ ನಂದಿಕೇಶನ್ ಪ್ರಧಾನ ಸಂಚಾಲಕರಾದ ಧರ್ಮತಡ್ಕ ಹಯರ್ ಸೆಕೆಂಡರಿ ಶಾಲಾ ಪ್ರಾಂಶುಪಾಲರಾದ ಶ್ರೀ ಎನ್ ರಾಮಚಂದ್ರ ಭಟ್ ಅವರಿಗೆ ನೀಡಿ ಬಿಡುಗಡೆಗೊಳಿಸಿದರು. ಮಂಗಲ್ಪಾಡಿ ಸರಕಾರಿ ಹಯರ್ ಸೆಕೆಂಡರಿ ಶಾಲೆಯ ಅಸಾಪ್ ಲ್ಯಾಬಿನಲ್ಲಿ ನಡೆದ ಸಮಾರಂಭದಲ್ಲಿ ಸಹ ಸಂಚಾಲಕರಾದ ಶ್ರೀ ಎನ್ ಮಹಾಲಿಂಗ ಭಟ್, ಮಂಗಲ್ಪಾಡಿ ಸರಕಾರಿ ಹಯರ್ ಸೆಕೆಂಡರಿ ಶಾಲಾ ಪ್ರಭಾರ ಪ್ರಾಂಶುಪಾಲರಾದ ಶ್ರೀಮತಿ ದಿವ್ಯ ಉಪಸ್ಥಿತರಿದ್ದರು.


Wednesday, November 16, 2016

ಮಂಜೇಶ್ವರ ಉಪಜಿಲ್ಲಾ ಶಾಲಾಕಲೋತ್ಸವದ ಲಾಂಛನಬಿಡುಗಡೆ



ಧರ್ಮತಡ್ಕ: ಧರ್ಮತಡ್ಕ ಶಾಲೆಯಲ್ಲಿ ತಿಂಗಳ26ರಿಂದ 30ತನಕ ನಡೆಯಲಿರುವಮಂಜೇಶ್ವರ ಉಪಜಿಲ್ಲಾಶಾಲಾ ಕಲೋತ್ಸವದಲಾಂಛನವನ್ನು ಮಂಗಲ್ಪಾಡಿ ಸರಕಾರಿ ಹಯರ್ ಸೆಕೆಂಡರಿಶಾಲೆಯ ಅಸಾಪ್ಲ್ಯಾಬಿನಲ್ಲಿ ಮಂಜೇಶ್ವರ ಉಪಜಿಲ್ಲಾ ಸಹಾಯಕ ವಿದ್ಯಾಧಿಕಾರಿಶ್ರೀ ನಂದಿಕೇಶನ್ಬಿಡುಗಡೆಗೊಳಿಸಿದರು. ಕಲೋತ್ಸವ ಸ್ವಾಗತಸಮಿತಿ ಪ್ರಧಾನಸಂಚಾಲಕರಾದ ಶ್ರೀಎನ್ ರಾಮಚಂದ್ರಭಟ್, ಸಹಸಂಚಾಲಕರಾದಶ್ರೀ ಎನ್ಮಹಾಲಿಂಗ ಭಟ್, ಮಂಗಲ್ಪಾಡಿ ಸರಕಾರಿಹಯರ್ ಸೆಕೆಂಡರಿಶಾಲೆಯ ಪ್ರಭಾರಪ್ರಾಂಶುಪಾಲರಾದ ಶ್ರೀಮತಿ ದಿವ್ಯ ಹಾಗೂ ಇತರಗಣ್ಯರು ಸಮಾರಂಭದಲ್ಲಿಉಪಸ್ಥಿತರಿದ್ದರು.



Monday, November 14, 2016

ಉಪಜಿಲ್ಲಾ ಕಲೋತ್ಸವದ ಪ್ರಚಾರ ಸಮಿತಿ ಸಮಾಲೋಚನಾ ಸಭೆ(14-11-2016)


ಧರ್ಮತಡ್ಕ: ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಲಾ ಕಲೋತ್ಸವವು ಈ ತಿಂಗಳ 26,28,29 ಮತ್ತು 30ರಂದು ಧರ್ಮತಡ್ಕ ಎಯುಪಿ ಶಾಲೆ ಹಾಗೂ ಧರ್ಮತಡ್ಕದ ಶ್ರೀದುರ್ಗಾಪರಮೇಶ್ವರೀ ಹಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯಲಿದೆ. ಇದರ ಪೂರ್ವಭಾವಿಯಾಗಿ ಕಲೋತ್ಸವ ಪ್ರಚಾರಸಮಿತಿಯ ಸಮಾಲೋಚನಾ ಸಬೆಯು ಶಾಲಾ ಸಭಾಂಗಣದಲ್ಲಿ ನಡೆಯಿತು. ಪ್ರಚಾರ ಸಮಿತಿಯ ಸಂಚಾಲಕರು, ಸಹ ಸಂಚಾಲಕರು, ಸದಸ್ಯರು ಉಪಸ್ಥಿತರಿದ್ದರು. ಕಲೋತ್ಸವದ ಯಶಸ್ವಿಗಾಗಿ ಕಾರ್ಯನಿರ್ವಹಿಸುವ ಬಗ್ಗೆ ಚರ್ಚಿಸಲಾಯಿತು.
ಕಾಸರಗೋಡು ಜಿಲ್ಲಾಮಟ್ಟದ ಹೈಸ್ಕೂಲ್ ವಿಭಾಗದ ಐ. ಟಿ. ಮೇಳದ ಕನ್ನಡ ಟೈಪಿಂಗ್ ಸ್ಪರ್ಧೆಯಲ್ಲಿ A ಗ್ರೇಡಿನೊಂದಿಗೆ ಪ್ರಥಮ ಸ್ಥಾನವನ್ನು ಪಡೆದ  ಶ್ರೀ ದುರ್ಗಾಪರಮೇಶ್ವರಿ ಪ್ರೌಢಶಾಲೆ ಧರ್ಮತ್ತಡ್ಕದ ವಿಧ್ಯಾರ್ಥಿ ಸಾತ್ವಿಕ್ ಕೃಷ್ಣ .ಯನ್.