Monday, November 14, 2016

ಉಪಜಿಲ್ಲಾ ಕಲೋತ್ಸವದ ಪ್ರಚಾರ ಸಮಿತಿ ಸಮಾಲೋಚನಾ ಸಭೆ(14-11-2016)


ಧರ್ಮತಡ್ಕ: ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಲಾ ಕಲೋತ್ಸವವು ಈ ತಿಂಗಳ 26,28,29 ಮತ್ತು 30ರಂದು ಧರ್ಮತಡ್ಕ ಎಯುಪಿ ಶಾಲೆ ಹಾಗೂ ಧರ್ಮತಡ್ಕದ ಶ್ರೀದುರ್ಗಾಪರಮೇಶ್ವರೀ ಹಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯಲಿದೆ. ಇದರ ಪೂರ್ವಭಾವಿಯಾಗಿ ಕಲೋತ್ಸವ ಪ್ರಚಾರಸಮಿತಿಯ ಸಮಾಲೋಚನಾ ಸಬೆಯು ಶಾಲಾ ಸಭಾಂಗಣದಲ್ಲಿ ನಡೆಯಿತು. ಪ್ರಚಾರ ಸಮಿತಿಯ ಸಂಚಾಲಕರು, ಸಹ ಸಂಚಾಲಕರು, ಸದಸ್ಯರು ಉಪಸ್ಥಿತರಿದ್ದರು. ಕಲೋತ್ಸವದ ಯಶಸ್ವಿಗಾಗಿ ಕಾರ್ಯನಿರ್ವಹಿಸುವ ಬಗ್ಗೆ ಚರ್ಚಿಸಲಾಯಿತು.

No comments: