ಉಪಜಿಲ್ಲಾ ಕಲೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ
ಧರ್ಮತಡ್ಕ: ಈ ತಿಂಗಳ 26ರಿಂದ ಧರ್ಮತಡ್ಕ ಶಾಲೆಯಲ್ಲಿ ನಡೆಯಲಿರುವ ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವದ ಆಮಂತ್ರಣ ಪತ್ರಿಕೆಯನ್ನು ಮಂಜೇಶ್ವರ ಉಪಜಿಲ್ಲಾ ಸಹಾಯಕ ವಿದ್ಯಾಧಿಕಾರಿ ಶ್ರೀ ನಂದಿಕೇಶನ್ ಪ್ರಧಾನ ಸಂಚಾಲಕರಾದ ಧರ್ಮತಡ್ಕ ಹಯರ್ ಸೆಕೆಂಡರಿ ಶಾಲಾ ಪ್ರಾಂಶುಪಾಲರಾದ ಶ್ರೀ ಎನ್ ರಾಮಚಂದ್ರ ಭಟ್ ಅವರಿಗೆ ನೀಡಿ ಬಿಡುಗಡೆಗೊಳಿಸಿದರು. ಮಂಗಲ್ಪಾಡಿ ಸರಕಾರಿ ಹಯರ್ ಸೆಕೆಂಡರಿ ಶಾಲೆಯ ಅಸಾಪ್ ಲ್ಯಾಬಿನಲ್ಲಿ ನಡೆದ ಸಮಾರಂಭದಲ್ಲಿ ಸಹ ಸಂಚಾಲಕರಾದ ಶ್ರೀ ಎನ್ ಮಹಾಲಿಂಗ ಭಟ್, ಮಂಗಲ್ಪಾಡಿ ಸರಕಾರಿ ಹಯರ್ ಸೆಕೆಂಡರಿ ಶಾಲಾ ಪ್ರಭಾರ ಪ್ರಾಂಶುಪಾಲರಾದ ಶ್ರೀಮತಿ ದಿವ್ಯ ಉಪಸ್ಥಿತರಿದ್ದರು.
No comments:
Post a Comment