ವಿಶ್ವ ಪರಿಸರ ದಿನ - ಪ್ರಥಮ ಬಹುಮಾನ ಪಡೆದ – ಕವನ
ಒಗಟಾಗಿರೋ ಕ್ಷಣಗಳು
ಅದಾವ ಶಿಲ್ಪಿ ಕಡೆದನೋ ನಿನ್ನ
ಅದೆಂಥಾ ಕಾಂತಿಯೋ ನಿನ್ನೀ ಬಣ್ಣ
ಭಾರತಕ್ಕೊಲಿದೆ ತಾಯಿಯಾಗಿ
ಪರಿಪಾಲಿಸಿ ಎಲ್ಲರನು ಜಗದ ಮಾಯೆಯಾಗಿ .
ಸ್ವರ್ಗಕ್ಕಿಂತಲೂ ಮಿಗಿಲು
ಪ್ರಕೃತಿಯೇ ನಿನ್ನ ವಿಶಾಲ ಮಡಿಲು
ಅದ್ಯಾವ ದುಷ್ಟ ಕರಗಳಿಗೆ ಬಲಿಯಾಗಿದೆ
ಯಾವ ಭಕ್ತನಿಗೂ ಒಲಿಯದಾದೆ .
ತರುಲತೆಗಳೆ , ವನಸಿರಿಗಳೆ
ನಿನ್ನೀ ಬಂಗಾರ , ಶೃಂಗಾರ
ತುಂಬಿಹುದು ನಿನ್ನ ಮೇಲೆ
ಸುಟ್ಟು ಹೋಗುತಿದೆ ನಿನ್ನೀ ಒಡಲಾಳ .
ಗಿರಿಗಳೆಡೆಯಲಿ ವನಸಿರಿಗಳಿಂದ
ಅಂದವನು ತುಂಬಿರುವೆ
ಯಾಕೆ ಹೀಗಾದೆ ( ಪ್ರಕೃತಿ )
ಜೇನ ಹೀರಿ ಬಿಟ್ಟ ಹೂವಂತೆ .
ಸ್ವರ್ಗವೇ ಮನಸೋಲುವಂತೆ
ಮೆರೆದಿದ್ದೆ ಒಂದು ಕಾಲದಲ್ಲಿ
ಉಪಯೋಗಿಸಿ ಎಸೆದಂತೆ ಆಡಿದರು ,
ನೋಯಿಸಿದರು ಕಣಕಣದಲ್ಲಿ .
ಕುಕ್ಕಿಕುಕ್ಕಿ ಸಾಯುತಿದೆ ಹೃದಯ
ಅದಾವ ಜನ್ಮದ ಬಂಧುವೋ ನೀನು
ಕ್ಷಮೆಯಿರಲಿ ಸುತರಲ್ಲಿ
ಗತಿನೀನೆ ಆದಿಯಲಿ .
ರಶ್ಮಿ . X D
No comments:
Post a Comment