Saturday, November 26, 2016

ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವ ಸ್ವಯಂ ಸೇವಕರಿಗೆ ಸಮವಸ್ತ್ರ ವಿತರಣೆ

ಧರ್ಮತಡ್ಕ : ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವಕ್ಕೆ ನವೆಂಬರ್ 26 ಶನಿವಾರದಂದು ಚಾಲನೆ ದೊರೆತಿದ್ದು ಕಲಾಮೇಳದಲ್ಲಿ ದುಡಿಯುತ್ತಿರುವ ಸ್ವಯಂ ಸೇವಕರಿಗೆ ಸಮವಸ್ತ್ರಗಳನ್ನು ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿಗಳಾದ ನಂದಿಕೇಶನ್ ಬಿಡುಗಡೆಗೊಳಿಸಿದರು. ಶರಣಂ ಕನ್ಸ್ಟ್ರಕ್ಷನ್ ಪುತ್ತೂರು, ಸ್ಪೋರ್ಟ್ಸ್ ಲೈನ್ ಪುತ್ತೂರು ಹಾಗೂ ಶ್ರೀವತ್ಸ ಮತ್ತು ಗೆಳೆಯರು ಬೆಂಗಳೂರು ಇವರ ಪ್ರಾಯೋಜಕತ್ವದಲ್ಲಿ ಶಿಸ್ತು ಪಾಲನಾ ಸಮಿತಿ ಆಶ್ರಯದಲ್ಲಿ ಕಾರ್ಯಕ್ರಮವು ಜರಗಿತು. ಸಂಘಟಕ ಸಮಿತಿ ಸಂಚಾಲಕರಾದ ಎನ್ ರಾಮಚಂದ್ರ ಭಟ್, ಟಿಡಿ ಸದಾಶಿವ ರಾವ್, ರಾಮಮೋಹನ ಸಿಎಚ್, ರಾಜ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.


No comments: