ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವ ಸ್ವಾಗತ ಸಮಿತಿ ಸಭೆ
ಧರ್ಮತಡ್ಕ: ಈ ತಿಂಗಳ 26ರಿಂದ 30ರ ತನಕ ಧರ್ಮತಡ್ಕ ದುರ್ಗಾ ಪರಮೇಶ್ವರೀ ಹಯರ್ ಸೆಕೆಂಡರಿ ಶಾಲೆ ಮತ್ತು ಎಯುಪಿ ಶಾಲೆಯಲ್ಲಿ ನಡೆಯಲಿರುವ ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಲಾ ಕಲೋತ್ಸವದ ಕಾರ್ಯಕ್ರಮ ಸಮಿತಿ ಸಭೆ ಶಾಲಾ ಸಭಾಂಗಣದಲ್ಲಿ ನಡೆಯಿತು. ಹಯರ್ ಸೆಕೆಂಡರಿ ಶಾಲಾ ಮೇನೇಜರ್ ಶ್ರೀ ನೇರೋಳು ಶಂಕರನಾರಾಯಣ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಸಂಚಾಲಕರು ಹಾಗೂ ಪ್ರಾಂಶುಪಾಲರಾದ ಶ್ರೀ ಎನ್ ರಾಮಚಂದ್ರ ಭಟ್ ಶುಭಹಾರೈಕೆ ಮಾಡಿದರು. ಕಾರ್ಯಕ್ರಮ ಸಮಿತಿ ಸಹಸಂಚಾಲಕರಾದ ಶ್ರೀ ಶ್ರೀನಿವಾಸ್ ಕೆ.ಎಚ್ ಸ್ವಾಗತಿಸಿ, ಎಯುಪಿ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಎನ್ ಮಹಾಲಿಂಗ ಭಟ್ ವಂದಿಸಿದರು. ಕಾರ್ಯಕ್ರಮ ಸಮಿತಿ ಸಂಚಾಲಕರಾದ ಶ್ರೀ ಸತೀಶ್ ಕುಮಾರ್ ಒ ನಿರೂಪಿಸಿದರು. ಸಮಿತಿ ಸದಸ್ಯರು ಉಪಸ್ಥಿತರಿದ್ದರು.
No comments:
Post a Comment