ಓಡಿಸ್ಸಾದಲ್ಲಿ ಜರಗುವ ರಾಷ್ಟ್ರ ಮಟ್ಟದ ಸಾಫ್ಟ್ ಬಾಲ್ ಪಂದ್ಯಾಟದಲ್ಲಿ ಕೇರಳ ತಂಡವನ್ನು ಪ್ರತಿನಿಧಿಸುವ ತಂಡಕ್ಕೆ ಧರ್ಮತ್ತಡ್ಕ ದುರ್ಗಾ ಪರಮೇಶ್ವರಿ ಶಾಲೆಯ ಒಂಭತ್ತನೇ ತರಗತಿಯ ಶ್ರಾವ್ಯ ಸಿ ಎಚ್ ಆಯ್ಕೆಯಾಗಿದ್ದಾಳೆ.
ಅಕ್ಟೋಬರ್ನಲ್ಲಿ ಎರ್ನಾಕುಲಂ ನಲ್ಲಿ ನಡೆದ 24 ನೆ ರಾಜ್ಯಮಟ್ಟದ ಸಬ್ ಜ್ಯುನಿ ಯರ್ ಹೆಣ್ಮಕ್ಕಳ ಸಾಫ್ಟ್ ಬಾಲ್ ನಲ್ಲಿ ಉತ್ತಮ ಪ್ರದರ್ಶನ ನೀಡಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಕೇರಳವನ್ನು ಪ್ರಾತಿನಿಧಿಕರಿಸುವ ತಂಡದಲ್ಲಿ ಕಾಸರಗೋಡು ಜಿಲ್ಲೆಯಿಂದ ಆಯ್ಕೆಯಾದ. ಏಕ ವಿದ್ಯಾರ್ಥಿನಿ ಈಕೆ. ಉಳಿದಂತೆ ಮಲಪ್ಪುರಂ, ಕೊಟ್ಟಾಯಂ,ತಿರುವನಂತಪುರಂ,ಕೊಲ್ಲಂ, ಆಲಪ್ಪುಲ, ಪತ್ತನತಿಟ್ಟ ಪಾಲಕ್ಕಾಡ್ ತ್ರಿಶೂರ್, ಎರ್ನಾಕುಲಂ ಹಾಗೂ ಕಣ್ಣೂರಿನ ವಿದ್ಯಾರ್ಥಿಗಳಿದ್ದಾರೆ. ಪಟ್ಟನಂಟ್ಟ ದಲ್ಲಿ ಅರ್ಹತಾ ತರಬೇತಿಪಡೆದು ಇದೀಗ ಸ್ಪರ್ಧೆಗಾಗಿ ಒಡಿಶಾ ತೆರಳಿರುತ್ತಾಳೆ.
ಕನಿಯಾಲ ಚಿಮಿಣಿತ್ತಡ್ಕದ ಸುಂದರ ಸಿ. ಯಚ್ ಹಾಗೂ ಕಮಲ ದಂಪತಿಗಳ ಪುತ್ರಿ.
No comments:
Post a Comment