ಶಾಲಾ ಕ್ರೀಡಾಮೇಳ 2017 - 2018
2017- 2018ರ ಶಾಲಾ ಕ್ರೀಡೋತ್ಸವವು ತಾ 25-09-2017ರ ಸೋಮವಾರದಂದು ವಿವಿಧ ಸ್ಪರ್ಧೆಗಳೊಂದಿಗೆ ಯಶಸ್ವಿಯಾಗಿ ನೆರವೇರಿತು. ಶಾಲಾ PTA ಅಧ್ಯಕ್ಷರಾದ ಶ್ರೀಯುತ ಶಂಕರ ಕಾಮತ್ ಇವರು ಕ್ರೀಡಾಮೇಳವನ್ನು ಔಪಚಾರಿಕವಾಗಿ ಉದ್ಘಾಟಿಸಿದರು. ಶಾಲಾ ಮೆನೇಜರ್ ಶ್ರೀ ಯನ್ ಶಂಕರ ನಾರಾಯಣ ಭಟ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಶಾಲಾ ಪ್ರಾಂಶುಪಾಲರಾದ ಶ್ರೀ ಯನ್ ರಾಮಚಂದ್ರ ಭಟ್ ಶುಭ ಹಾರೈಸಿದರು. ಹಿರಿಯ ಅಧ್ಯಾಪಕರಾದ ಶ್ರೀಯುತ ನರಸಿಂಹ ರಾಜ್ ಸರ್ ಧನ್ಯವಾಧ ಸಮರ್ಪಿಸಿದರು.
ವಿವಿಧ ಸ್ಪರ್ಧೆಗಳು ಬೆಳಗ್ಗೆ 10.30ಯಿಂದ ಮಧ್ಯಾಹ್ನ 3.30ರವರೇಗೆ ನಡೆದವು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಮೆನೇಜರ್ ಶ್ರೀ ಶಂಕರ ನಾರಾಯಣ ಭಟ್ ಸರ್ ಅವರು ನಿರ್ವಹಿಸಿದರು. ಶ್ರೀ ಯನ್ ಮಹಾಲಿಂಗ ಭಟ್ ಮುಖ್ಯ ಅತಿಥಿಗಳಾಗಿ ಶುಭ ಹಾರೈಸಿದರು. ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ಶ್ರೀ ಗೋವಿಂದ ಭಟ್ ಧನ್ಯವಾದ ಸಮರ್ಪಿಸುದರೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು. ಶ್ರೀಯುತ ಸತೀಶ್ ಕುಮಾರ್ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು.
No comments:
Post a Comment