Thursday, September 28, 2017


ವಿದ್ಯಾರ್ಥಿಗಳ ಪಠ್ಯೇತರ ಚಟುವಟಿಕೆಗಳಿಗೆ ಪ್ರೋತ್ಸಾಹದ ಅತ್ಯಗತ್ಯ: ಎಚ್.ಸಿ ರುದ್ರಪ್ಪ




ವಿದ್ಯಾಕೇಂದ್ರಗಳಲ್ಲಿ ಮಕ್ಕಳ ಸಾಂಸ್ಕೃತಿಕ, ಸಂಸ್ಕೃತಿ, ಕಲೆಯ ಬೆಳವಣಿಗೆಗೆ ಪೂರಕವಾದ ಪರಿಶ್ರಮ ನಡೆಯಬೇಕು. ಬೆಳೆಯುವ ಮಕ್ಕಳಿಗೆ ಪ್ರಥಮ ಗುರು ತಾಯಿಯಾದರೆ ನಂತರ ಸ್ಥಾನವನ್ನು ತುಂಬುವುದು ಶಾಲೆ ಮತ್ತು ಶಿಕ್ಷಕರು. ಆದ್ದರಿಂದ ಮಕ್ಕಳ ಭವಿಷ್ಯವನ್ನು ಕಟ್ಟಿಕೊಡುವಲ್ಲಿ ವಿದ್ಯಾಲಯಗಳ ಪಾತ್ರ ಮಹತ್ತರವಾದುದು. ಕಾಸರಗೋಡಿನ ಕನ್ನಡದ ಮಕ್ಕಳು ಕೇರಳ ಹಾಗೂ ಕರ್ನಾಟಕ ರಾಜ್ಯದ ಕೀರ್ತಿ ಪತಾಕೆಯನ್ನು ಹಾರಿಸುವಂತಾಗಲಿ ಎಂದು ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಎಚ್.ಸಿ ರುದ್ರಪ್ಪ ಹೇಳಿದರು.
ಸಿರಿಗನ್ನಡ ಪುಸ್ತಕ ಮಳಿಗೆ ಮತ್ತು ಗಡಿನಾಡ ಸಾಹಿತ್ಯ- ಸಾಂಸ್ಕೃತಿಕ ಅಕಾಡೆಮಿ ಸಂಯುಕ್ತಾಶ್ರಯದಲ್ಲಿ ಕಾಸರಗೋಡು ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಪಯಣ-3 ಹಾಗೂ ದಸರಾ ನಾಡಹಬ್ಬ ಕಾರ್ಯಕ್ರಮವನ್ನು ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.
ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತೊಡಗಿಸಿಕೊಳ್ಳಬೇಕು. ಎಳೆಯ ಪ್ರಾಯದಲ್ಲಿ ಬದುಕು ಕಳೆದುಕೊಳ್ಳುವಂತೆ ಮಾಡುವ ಮಾದಕ ವಸ್ತುಗಳ ಬಗ್ಗೆ ವಿದ್ಯಾರ್ಥಿಗಳು ಜಾಗೃತೆ ವಹಿಸಬೇಕು. ಕಾನೂನು ಬಾಹಿರ ಚಟುವಟಿಕೆಗಳಿಂದ ದೂರವಿದ್ದು ಬದುಕನ್ನು ಹಸನಾಗಿಸಲು ಕಠಿಣ ಪರಿಶ್ರಮ ಪಡಬೇಕು ಎಂದು ಕಿವಿಮಾತು ಹೇಳಿದರು.
ಗಡಿನಾಡ ಸಾಹಿತ್ಯ- ಸಾಂಸ್ಕØತಿಕ ಅಕಾಡೆಮಿ ಕಾಸರಗೋಡು ಅಧ್ಯಕ್ಷ ಕೇಳು ಮಾಸ್ತರ್ ಅಗಲ್ಪಾಡಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಸಮಾಜ ಸೇವಕ ಕಕ್ವೆ ಶಂಕರ ಭಟ್, ನಾಟಿ ವೈದ್ಯ ಮಹಮ್ಮದ್ ಅವರನ್ನು ಗೌರವಿಸಲಾಯಿತು. ಮುಖ್ಯ ಅತಿಥಿಯಾಗಿ ಪುತ್ತಿಗೆ ಗ್ರಾ.ಪಂ ಸದಸ್ಯ ಚನಿಯ ಪಾಡಿ, ಕಾಸರಗೋಡು ಕೇಂದ್ರೀಯ ವಿ.ವಿ ಪೆರಿಯಾದ ಸಮಾಜಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಲಕ್ಷ್ಮೀ, ಶ್ರೀ ದುರ್ಗಾಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆಯ ಪ್ರಬಂಧಕ ಎನ್. ಶಂಕರನಾರಾಯಣ ಭಟ್, ರಕ್ಷಕ-ಶಿಕ್ಷಕ ಸಮಿತಿ ಅಧ್ಯಕ್ಷ ಚೇವಾರು ಶಂಕರ ಕಾಮತ್, ಕೇರಳ ಗಡಿನಾಡ ಜಾನಪದ ಪರಿಷತ್ತು ಇದರ ಅಧ್ಯಕ್ಷ ಎ.ಆರ್ ಸುಬ್ಬಯ್ಯಕಟ್ಟೆ, ಜಯಲಕ್ಷ್ಮೀ, ಸಂಧ್ಯಾಗೀತಾ ಗುಂಪೆ, ಮನು ಪಣಿಕ್ಕರ್ ಉಪಸ್ಥಿತರಿದ್ದು ಶುಭಹಾರೈಸಿದರು.
ಶಾಲಾ ವಿದ್ಯಾರ್ಥಿಗಳು ಪ್ರಾರ್ಥನಾ ಗೀತೆ ಹಾಡಿದರು.ಗಡಿನಾಡು ಸಾಹಿತ್ಯ- ಸಾಂಸ್ಕೃತಿಕ ಅಕಾಡೆಮಿ ಇದರ ಕಾರ್ಯದರ್ಶಿ ಅಖಿಲೇಶ್ ನಗುಮುಗಂ ಸ್ವಾಗತಿಸಿ, ನಿವೃತ್ತ ಪ್ರಾಂಶುಪಾಲ ಪ್ರೊ.. ಶ್ರೀನಾಥ್ ಕಾರ್ಯಕ್ರಮ ನಿರೂಪಿಸಿದರು.ಶಾಲಾ ಪ್ರಾಂಶುಪಾಲ ರಾಮಚಂದ್ರ ಭಟ್ ವಂದಿಸಿದರು.
ಬಳಿಕ ನಡೆದ ವ್ಯಂಗ್ಯಚಿತ್ರ ರಚನಾ ಕಮ್ಮಟದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ವ್ಯಂಗ್ಯಚಿತ್ರಕಾರ ವಿರಾಜ್ ಅಡೂರ್ ಭಾಗವಹಿಸಿ ವಿದ್ಯಾರ್ಥಿಗಳಿಗೆ ವ್ಯಂಗ್ಯಚಿತ್ರ ರಚನೆಯ ಬಗ್ಗೆ ಮಾಹಿತಿ ನೀಡಿದರು.









ಸಭಾ ಕಾರ್ಯಕ್ರಮದ ನಂತರ ಮಕ್ಕಳಿಂದ ಕಾರ್ಯಕ್ರಮ ವೈವಿಧ್ಯ ನಡೆಯಿತು. 
ಕಾರ್ಯಕ್ರಮದ ಭಾಗವಾಗಿ ಮಕ್ಕಳಿಗೆ ವ್ಯoಗ್ಯ ವಹಿತ್ರ ಕಾರ್ಯಾಗಾರ ವನ್ನು ಶ್ರೀ ವಿರಾಜ್ ಅಡೂರು ನಡೆಸಿ ಕೊಟ್ಟರು. 






No comments: