ಶ್ರೀ ದುರ್ಗಾ ಪರಮೇಶ್ವರಿ ಪ್ರೌಢ ಶಾಲೆ ಧರ್ಮತ್ತಡ್ಕ.
2020-21 ನೇ ಸಾಲಿನ ಶೈಕ್ಷಣಿಕ ವರ್ಷದ ಎಸ್ ಎಸ್ ಎಲ್ ಸಿ ಹಾಗೂ ಪ್ಲಸ್ ಟು ಪರೀಕ್ಷೆ ಯಲ್ಲಿ ಉನ್ನತ ಮಟ್ಟದಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಅಭಿನಂದಿಸುವ ಕಾರ್ಯಕ್ರಮ ಇಂದು ಶಾಲೆಯಲ್ಲಿ ಜರಗಿತು.
ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಎಲ್ಲಾ ವಿಷಯಗಳಲ್ಲಿ A+ ಪಡೆದ 31 ವಿದ್ಯಾರ್ಥಿಗಳನ್ನು ಹಾಗೂ ಒಂಭತ್ತು ವಿಷಯಗಳಲ್ಲಿ A+ ಪಡೆದ 18 ವಿದ್ಯಾರ್ಥಿಗಳನ್ನು ಮತ್ತು ಹೈಯರ್ ಸೆಕೆಂಡರಿ ಶಾಲೆಯ ವಾಣಿಜ್ಯ ವಿಭಾಗ , ಹ್ಯುಮಾನಿಟೀಸ್ ವಿಭಾಗದಲ್ಲಿ ಉನ್ನತ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಈ ಸುಸಂದರ್ಭದಲ್ಲಿ ನಿವೃತ್ತ ದೈಹಿಕ ಶಿಕ್ಷಕರಾದ ಶ್ರೀ ಅಶೋಕನ್ ಅವರ ಹೆತ್ತವರಾದ ಶ್ರೀಮತಿ ನಾರಾಯಣಿ ಅಮ್ಮ ಹಾಗೂ ಶ್ರೀ ಕಣ್ಣನ್ ಅವರ ಸ್ಮರಣಾರ್ಥ ನಗದು ಹಾಗೂ ಸ್ಮರಣಿಕೆಯನ್ನು ಉನ್ನತ ಸಾಧನೆಗೈದ ವಿದ್ಯಾರ್ಥಿಗಳಿಗೆ ನೀಡಲಾಯಿತು.
ಇದರೊಂದಿಗೆ ಮೇಪೋಡು ಶ್ರೀ ಸುಬ್ರಾಯ ದತ್ತಿನಿಧಿಯನ್ನು ಕನ್ನಡ ಮಾಧ್ಯಮದಲ್ಲಿ ಉನ್ನತ ಸಾಧನೆಗೈದ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆಯನ್ನು PTA ಅಧ್ಯಕ್ಷರಾದ ಶ್ರೀ ಇಬ್ರಾಹಿಂ ಎನ್ ವಹಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯರಾದ ಇ ಎಚ್ ಗೋವಿಂದ ಭಟ್ ಪ್ರಾಸ್ತಾವಿಕವಾಗಿ ಮಾತಾಡಿದರು.
ಇದರೊಂದಿಗೆ ಶಾಲಾ ವ್ಯವಸ್ಥಾಪಕ ಶ್ರೀ ಎನ್ ಶಂಕರನಾರಾಯಣ ಭಟ್, ಹೈಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲರಾದ ಎನ್ ರಾಮಚಂದ್ರ ಭಟ್, ಯುಪಿ ಶಾಲೆಯ ಮುಖ್ಯೋಪಾಧ್ಯಾಯ ಶ್ರೀ ಎನ್ ಮಹಾಲಿಂಗ ಭಟ್, ಯುಪಿ ಶಾಲೆಯ ವ್ಯವಸ್ಥಾಪಕರಾದ ಶ್ರೀಮತಿ ವಿಜಯ ಶ್ರೀ, ಹೈಯರ್ ಸೆಕೆಂಡರಿ ಶಿಕ್ಷಕರಾದ ಸತೀಶ್ ಶೆಟ್ಟಿ ಒಡ್ಡಂಬೆಟ್ಟು, ಪ್ರೌಢ ಶಾಲೆಯ ಶಿಕ್ಷಕರಾದ ಶಶಿಕುಮಾರ್ ಪಿ, PTA ಉಪಾಧ್ಯಕ್ಷ ಶ್ರೀ ಜೋನ್ ಡಿ ಸೋಜ, MPTA ಶ್ರೀಮತಿ ಜಲಜಾಕ್ಷಿ ಶುಭಾಶಂಸನೆಗೈದರು.
ಕಾರ್ಯಕ್ರಮದಲ್ಲಿ ಶ್ರೀಮತಿ ಈಶ್ವರಿ ಡಿ ಪ್ರಾರ್ಥಿಸಿ, ಶ್ರೀಮತಿ ಉಮಾದೇವಿ ಎಂ ಎಲ್ ಸ್ವಾಗತಿಸಿ, ಶ್ರೀಮತಿ ಶ್ವೇತ ಕುಮಾರಿ ಎಂ ವಂದಿಸಿದರು, ಶಿವಪ್ರಸಾದ್ ಸಿ ಹಾಗೂ ಪ್ರಶಾಂತ ಹೊಳ್ಳ ಎನ್ ನಿರೂಪಣೆಯಲ್ಲಿ ಸಹಕರಿಸಿದರು.
No comments:
Post a Comment