ಶ್ರೀ ದುರ್ಗಾ ಪರಮೇಶ್ವರಿ ಪ್ರೌಢ ಶಾಲೆ ಧರ್ಮತ್ತಡ್ಕ.
29_10_2021
ನಮ್ಮ ಪ್ರೌಢ ಶಾಲೆಯಲ್ಲಿ ಗಣಿತ ಶಿಕ್ಷಕಿಯಾಗಿದ್ದ ಶ್ರೀಮತಿ ಪ್ರಮೀಳಾ ಟೀಚರ್ ಅವರ ಬೀಳ್ಕೊಡುಗೆ ಕಾರ್ಯಕ್ರಮ ಶಾಲಾ ಸಭಾಂಗಣದಲ್ಲಿ ಜರಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ವ್ಯವಸ್ಥಾಪಕ ಶ್ರೀ ಎನ್ ಶಂಕರನಾರಾಯಣ ಭಟ್ ವಹಿಸಿದರು.
ಪ್ರಸ್ತುತ ಕಾರ್ಯಕ್ರಮದಲ್ಲಿ ಉನ್ನತ ಪ್ರೌಢಶಾಲೆಯ ಪ್ರಾಂಶುಪಾಲರಾದ ಶ್ರೀ ಎನ್ ರಾಮಚಂದ್ರ ಭಟ್, ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಶ್ರೀ ಇ ಎಚ್ ಗೋವಿಂದ ಭಟ್
ಧರ್ಮತ್ತಡ್ಕ ಎಯುಪಿ ಶಾಲೆಯ ಮುಖ್ಯೋಪಾಧ್ಯಾಯ ಶ್ರೀ ಎನ್ ಮಹಾಲಿಂಗ ಭಟ್, ಧರ್ಮತ್ತಡ್ಕ ಎಯುಪಿ ಶಾಲೆಯ ವ್ಯವಸ್ಥಾಪಕಿ ಶ್ರೀಮತಿ ವಿಜಯಶ್ರೀ, ಅಧ್ಯಾಪಕ ಶ್ರೀ ರಾಮಕೃಷ್ಣ ಭಟ್ ಹಾಗೂ ಶ್ರೀಮತಿ ಉಷಾ ಕೆ ಆರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ನಿವೃತ್ತ ಅಧ್ಯಾಪಿಕೆಯಾದ ಶ್ರೀಮತಿ ಪ್ರಮೀಳಾ ಟೀಚರ್ ಅವರಿಗೆ ಸ್ಮರಣಿಕೆ ಫಲ ಪುಷ್ಪಗಳನ್ನು ನೀಡಿ ಗೌರವಿಸಲಾಯಿತು.
ಸುಸಂದರ್ಭದಲ್ಲಿ ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ವಿದ್ಯಾ ಸಂಸ್ಥೆಯ ಅಧ್ಯಾಪಕ ವೃಂದ ಸೇರಿದ್ದರು.
ಕಾರ್ಯಕ್ರಮದ ಪ್ರಾರ್ಥನೆಯಲ್ಲಿ ಅಧ್ಯಾಪಕರಾದ ರಾಜಕುಮಾರ್ ಕೆ, ಪ್ರದೀಪ ಕೆ ಶಿವಪ್ರಸಾದ ಸಿ, ಪ್ರಶಾಂತ ಹೊಳ್ಳ ಎನ್, ಶಶಿಧರ ಕೆ, ಸೂರ್ಯನಾರಾಯಣ ಭಟ್ ಪಿ ಸಹಕರಿಸಿದರು.
No comments:
Post a Comment