Sunday, November 14, 2021

 SDPHSS DHARMATHADHA

25/10/2021
ಶಾಲಾ ಪುನರಾರಂಭದ ಅಂಗವಾಗಿ, ರಕ್ಷಕ- ಶಿಕ್ಷಕ ಮಹಾಸಭೆಯನ್ನು ದಿನಾಂಕ 25/10/2021ರಂದು ಸೇರಲಾಯಿತು.
ರಕ್ಷಕ- ಶಿಕ್ಷಕ ಸಮಿತಿಯ ಮಹಸಭೆಯ ಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷ ಶ್ರೀ ಇಬ್ರಾಹಿಂ ಎನ್ ವಹಿಸಿದರು.
ಮುಖ್ಯೋಪಾಧ್ಯಾಯ ಶ್ರೀ ಇ ಎಚ್ ಗೋವಿಂದ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಶಾಲೆಯ ವ್ಯವಸ್ಥಾಪ ಶ್ರೀ ಎನ್ ಶಂಕರನಾರಾಯಣ ಭಟ್ ಹಾಗೂ ಹೈಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲ ಶ್ರೀ ಎನ್ ರಾಮಚಂದ್ರ ಭಟ್ ಕಾರ್ಯಕ್ರಮಕ್ಕೆ ಶುಭಾಶಂಸನೆಗೈದರು.
ಮಾತೃ ರಕ್ಷಕ ಮಂಡಳಿಯ ಅಧ್ಯಕ್ಷೆ ಶ್ರೀಮತಿ ಜಲಜಾಕ್ಷಿ ಉಪಸ್ಥಿತರಿದ್ದರು.
ಪುತ್ತಿಗೆ ಪಂಚಾಯತ್ ಆರೋಗ್ಯ ಇಲಾಖೆಯ JPHN ಆಗಿರುವ ಲೆಬಿತ ಆರೋಗ್ಯ ಸಂರಕ್ಷಣೆ ಬಗ್ಗೆ ಮಾಹಿತಿ ಒದಗಿಸಿದರು.
ಸಭೆಯಲ್ಲಿ ಹೊಸ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಶ್ರೀಮತಿ ಈಶ್ವರಿ ಡಿ, ಶ್ರೀಮತಿ ಶ್ವೇತ ಕುಮಾರಿ ಎಂ ಹಾಗೂ ಸೌಮ್ಯ ಎಂ ಪ್ರಾರ್ಥನೆ ಹಾಡಿದರು.
ಶ್ರೀ ರಾಮಕೃಷ್ಣ ಭಟ್ ಸ್ವಾಗತಿಸಿ, ಶ್ರೀ ಉಣ್ಣಿಕೃಷ್ಣ ಧನ್ಯವಾದ ಸಮರ್ಪಿಸಿದರು.
ಶ್ರೀ ಶಿವಪ್ರಸಾದ್ ಸಿ ಹಾಗೂ ಶ್ರೀ ಪ್ರಶಾಂತ ಹೊಳ್ಳ ಎನ್ ನಿರೂಪಣೆಯಲ್ಲಿ ಸಹಕರಿಸಿದರು.







No comments: