ಒಂಭತ್ತನೇ ತರಗತಿಯ ನವಾಗತ ವಿದ್ಯಾರ್ಥಿಗಳ ಪ್ರವೇಶೋತ್ಸವ ಇಂದು ಶಾಲಾ ಸಭಾಂಗಣದಲ್ಲಿ ಜರಗಿತು.
ಶಾಲೆಯ ವ್ಯವಸ್ಥಾಪಕರಾದ ಶ್ರೀ ಶಂಕರನಾರಾಯಣ ಭಟ್ ವಿದ್ಯಾರ್ಥಿಗಳನ್ನು ಔಪಚಾರಿಕವಾಗಿ ಸ್ವಾಗತಿಸಿ ಮಾತನಾಡಿದರು.
ಮುಖ್ಯೋಪಾಧ್ಯಾಯ ಶ್ರೀ ಇ ಎಚ್ ಗೋವಿಂದ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಶ್ರೀ ಶಶಿಕುಮಾರ್ ಪಿ ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ವಿವರಿಸಿದರು.
ತರಗತಿ ಅಧ್ಯಾಪಿಕೆಯರಾದ ಶ್ರೀಮತಿ ಈಶ್ವರಿ ಡಿ, ಶ್ರೀಮತಿ ಶ್ವೇತ ಕುಮಾರಿ ಎಂ, ಶ್ರೀಮತಿ ಉಷಾಪದ್ಮ ಜಿ, ಶ್ರೀಮತಿ ತುಳಸಿ ಕೆ ಉಪಸ್ಥಿತರಿದ್ದರು.
ಶ್ರೀ ಪ್ರಶಾಂತ ಹೊಳ್ಳ ಎಂ ಕಾರ್ಯಕ್ರಮ ನಿರೂಪಿಸಿದರು.
No comments:
Post a Comment