Sunday, December 04, 2016

ಧರ್ಮತ್ತಡ್ಕ ಶಾಲೆಯಲ್ಲಿ ಜರಗಿದ ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವದ ಪತ್ರಿಕಾ ವರದಿಗಳು

Saturday, November 26, 2016

ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವಕ್ಕೆ ಚಾಲನೆ

ಧರ್ಮತಡ್ಕಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವಕ್ಕೆ ಧರ್ಮತಡ್ಕ ಶ್ರೀ ದುರ್ಗಾಪರಮೇಶ್ವರಿ ಹಯರ್ ಸಕೆಂಡರಿ ಶಾಲೆ ಮತ್ತು ಎ ಯು ಪಿ ಶಾಲೆಯಲ್ಲಿ ಶನಿವಾರ ಆರಂಭಗೊಂಡಿತು. ಎಲ್ ಪಿ, ಯುಪಿ, ಹೈಸ್ಕೂಲ್ ಮತ್ತು ಹಯರ್ ಸೆಕೆಂಡರಿ ವಿಭಾಗಗಳ ವೇದಿಕೆಯೇತರ ಸ್ಪರ್ಧೆಗಳಲ್ಲಿ ಮಂಜೇಶ್ವರ ಉಪಜಿಲ್ಲೆಯ ಎಲ್ಲಾ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ನವೆಂಬರ್ 29ರಂದು ಉದ್ಘಾಟನೆ ನಡೆಯಲಿದ್ದು ವೇದಿಕೆಯ ಕಲಾ ಸ್ಪರ್ಧೆಗಳು ನಡೆಯಲಿದೆ.

ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವ ಸ್ವಯಂ ಸೇವಕರಿಗೆ ಸಮವಸ್ತ್ರ ವಿತರಣೆ

ಧರ್ಮತಡ್ಕ : ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವಕ್ಕೆ ನವೆಂಬರ್ 26 ಶನಿವಾರದಂದು ಚಾಲನೆ ದೊರೆತಿದ್ದು ಕಲಾಮೇಳದಲ್ಲಿ ದುಡಿಯುತ್ತಿರುವ ಸ್ವಯಂ ಸೇವಕರಿಗೆ ಸಮವಸ್ತ್ರಗಳನ್ನು ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿಗಳಾದ ನಂದಿಕೇಶನ್ ಬಿಡುಗಡೆಗೊಳಿಸಿದರು. ಶರಣಂ ಕನ್ಸ್ಟ್ರಕ್ಷನ್ ಪುತ್ತೂರು, ಸ್ಪೋರ್ಟ್ಸ್ ಲೈನ್ ಪುತ್ತೂರು ಹಾಗೂ ಶ್ರೀವತ್ಸ ಮತ್ತು ಗೆಳೆಯರು ಬೆಂಗಳೂರು ಇವರ ಪ್ರಾಯೋಜಕತ್ವದಲ್ಲಿ ಶಿಸ್ತು ಪಾಲನಾ ಸಮಿತಿ ಆಶ್ರಯದಲ್ಲಿ ಕಾರ್ಯಕ್ರಮವು ಜರಗಿತು. ಸಂಘಟಕ ಸಮಿತಿ ಸಂಚಾಲಕರಾದ ಎನ್ ರಾಮಚಂದ್ರ ಭಟ್, ಟಿಡಿ ಸದಾಶಿವ ರಾವ್, ರಾಮಮೋಹನ ಸಿಎಚ್, ರಾಜ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

Wednesday, November 23, 2016

ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವ ಸ್ವಾಗತ ಸಮಿತಿ ಸಭೆ

ಧರ್ಮತಡ್ಕ: ಈ ತಿಂಗಳ 26ರಿಂದ 30ರ ತನಕ ಧರ್ಮತಡ್ಕ ದುರ್ಗಾ ಪರಮೇಶ್ವರೀ ಹಯರ್ ಸೆಕೆಂಡರಿ ಶಾಲೆ ಮತ್ತು ಎಯುಪಿ ಶಾಲೆಯಲ್ಲಿ ನಡೆಯಲಿರುವ ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಲಾ ಕಲೋತ್ಸವದ ಕಾರ್ಯಕ್ರಮ  ಸಮಿತಿ ಸಭೆ ಶಾಲಾ ಸಭಾಂಗಣದಲ್ಲಿ ನಡೆಯಿತು. ಹಯರ್ ಸೆಕೆಂಡರಿ ಶಾಲಾ ಮೇನೇಜರ್ ಶ್ರೀ ನೇರೋಳು ಶಂಕರನಾರಾಯಣ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಸಂಚಾಲಕರು ಹಾಗೂ ಪ್ರಾಂಶುಪಾಲರಾದ  ಶ್ರೀ ಎನ್ ರಾಮಚಂದ್ರ ಭಟ್ ಶುಭಹಾರೈಕೆ ಮಾಡಿದರು. ಕಾರ್ಯಕ್ರಮ ಸಮಿತಿ ಸಹಸಂಚಾಲಕರಾದ  ಶ್ರೀ ಶ್ರೀನಿವಾಸ್ ಕೆ.ಎಚ್ ಸ್ವಾಗತಿಸಿ, ಎಯುಪಿ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಎನ್ ಮಹಾಲಿಂಗ ಭಟ್ ವಂದಿಸಿದರು. ಕಾರ್ಯಕ್ರಮ ಸಮಿತಿ ಸಂಚಾಲಕರಾದ ಶ್ರೀ ಸತೀಶ್ ಕುಮಾರ್ ಒ ನಿರೂಪಿಸಿದರು. ಸಮಿತಿ ಸದಸ್ಯರು ಉಪಸ್ಥಿತರಿದ್ದರು.

Monday, November 21, 2016

MANJESHWAR SUB DISTRICT SCHOOL KALOLSAVAM    INVITATION

Sunday, November 20, 2016

ಉಪಜಿಲ್ಲಾ ಶಾಲಾ ಕಲೋತ್ಸವ ಉಪಸಮಿತಿ ಸಭೆ
ಧರ್ಮತಡ್ಕ: ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವ ನವೆಂಬರ್ 26ರಿಂದ 30ರ ತನಕ ಧರ್ಮತಡ್ಕ ದುರ್ಗಾ ಪರಮೇಶ್ವರೀ ಹಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯಲಿದೆ. ಇದರ ಅಂಗವಾಗಿ ಆಹಾರ ಸಮಿತಿ ಹಾಗೂ ಆರೋಗ್ಯ ಮತ್ತು ಶುಚೀಕರಣ ಸಮಿತಿ ಸಮಾಲೋಚನಾ ಸಬೆಯು ನಡೆಯಿತು. ಸಮಿತಿ ಚೆಯರ್ ಮೇನ್, ಸಂಚಾಲಕರು, ಸಹ ಸಂಚಾಲಕರು ಹಾಗೂ ಸದಸ್ಯರು ಭಾಗವಹಿಸಿದ್ದರು.

Thursday, November 17, 2016

ಉಪಜಿಲ್ಲಾ ಕಲೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

ಧರ್ಮತಡ್ಕ: ಈ ತಿಂಗಳ 26ರಿಂದ ಧರ್ಮತಡ್ಕ ಶಾಲೆಯಲ್ಲಿ ನಡೆಯಲಿರುವ ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವದ ಆಮಂತ್ರಣ ಪತ್ರಿಕೆಯನ್ನು ಮಂಜೇಶ್ವರ ಉಪಜಿಲ್ಲಾ ಸಹಾಯಕ ವಿದ್ಯಾಧಿಕಾರಿ ಶ್ರೀ ನಂದಿಕೇಶನ್ ಪ್ರಧಾನ ಸಂಚಾಲಕರಾದ ಧರ್ಮತಡ್ಕ ಹಯರ್ ಸೆಕೆಂಡರಿ ಶಾಲಾ ಪ್ರಾಂಶುಪಾಲರಾದ ಶ್ರೀ ಎನ್ ರಾಮಚಂದ್ರ ಭಟ್ ಅವರಿಗೆ ನೀಡಿ ಬಿಡುಗಡೆಗೊಳಿಸಿದರು. ಮಂಗಲ್ಪಾಡಿ ಸರಕಾರಿ ಹಯರ್ ಸೆಕೆಂಡರಿ ಶಾಲೆಯ ಅಸಾಪ್ ಲ್ಯಾಬಿನಲ್ಲಿ ನಡೆದ ಸಮಾರಂಭದಲ್ಲಿ ಸಹ ಸಂಚಾಲಕರಾದ ಶ್ರೀ ಎನ್ ಮಹಾಲಿಂಗ ಭಟ್, ಮಂಗಲ್ಪಾಡಿ ಸರಕಾರಿ ಹಯರ್ ಸೆಕೆಂಡರಿ ಶಾಲಾ ಪ್ರಭಾರ ಪ್ರಾಂಶುಪಾಲರಾದ ಶ್ರೀಮತಿ ದಿವ್ಯ ಉಪಸ್ಥಿತರಿದ್ದರು.

Wednesday, November 16, 2016

ಮಂಜೇಶ್ವರ ಉಪಜಿಲ್ಲಾ ಶಾಲಾಕಲೋತ್ಸವದ ಲಾಂಛನಬಿಡುಗಡೆ

ಧರ್ಮತಡ್ಕ: ಧರ್ಮತಡ್ಕ ಶಾಲೆಯಲ್ಲಿ ತಿಂಗಳ26ರಿಂದ 30ತನಕ ನಡೆಯಲಿರುವಮಂಜೇಶ್ವರ ಉಪಜಿಲ್ಲಾಶಾಲಾ ಕಲೋತ್ಸವದಲಾಂಛನವನ್ನು ಮಂಗಲ್ಪಾಡಿ ಸರಕಾರಿ ಹಯರ್ ಸೆಕೆಂಡರಿಶಾಲೆಯ ಅಸಾಪ್ಲ್ಯಾಬಿನಲ್ಲಿ ಮಂಜೇಶ್ವರ ಉಪಜಿಲ್ಲಾ ಸಹಾಯಕ ವಿದ್ಯಾಧಿಕಾರಿಶ್ರೀ ನಂದಿಕೇಶನ್ಬಿಡುಗಡೆಗೊಳಿಸಿದರು. ಕಲೋತ್ಸವ ಸ್ವಾಗತಸಮಿತಿ ಪ್ರಧಾನಸಂಚಾಲಕರಾದ ಶ್ರೀಎನ್ ರಾಮಚಂದ್ರಭಟ್, ಸಹಸಂಚಾಲಕರಾದಶ್ರೀ ಎನ್ಮಹಾಲಿಂಗ ಭಟ್, ಮಂಗಲ್ಪಾಡಿ ಸರಕಾರಿಹಯರ್ ಸೆಕೆಂಡರಿಶಾಲೆಯ ಪ್ರಭಾರಪ್ರಾಂಶುಪಾಲರಾದ ಶ್ರೀಮತಿ ದಿವ್ಯ ಹಾಗೂ ಇತರಗಣ್ಯರು ಸಮಾರಂಭದಲ್ಲಿಉಪಸ್ಥಿತರಿದ್ದರು.

Monday, November 14, 2016

ಉಪಜಿಲ್ಲಾ ಕಲೋತ್ಸವದ ಪ್ರಚಾರ ಸಮಿತಿ ಸಮಾಲೋಚನಾ ಸಭೆ(14-11-2016)

ಧರ್ಮತಡ್ಕ: ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಲಾ ಕಲೋತ್ಸವವು ಈ ತಿಂಗಳ 26,28,29 ಮತ್ತು 30ರಂದು ಧರ್ಮತಡ್ಕ ಎಯುಪಿ ಶಾಲೆ ಹಾಗೂ ಧರ್ಮತಡ್ಕದ ಶ್ರೀದುರ್ಗಾಪರಮೇಶ್ವರೀ ಹಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯಲಿದೆ. ಇದರ ಪೂರ್ವಭಾವಿಯಾಗಿ ಕಲೋತ್ಸವ ಪ್ರಚಾರಸಮಿತಿಯ ಸಮಾಲೋಚನಾ ಸಬೆಯು ಶಾಲಾ ಸಭಾಂಗಣದಲ್ಲಿ ನಡೆಯಿತು. ಪ್ರಚಾರ ಸಮಿತಿಯ ಸಂಚಾಲಕರು, ಸಹ ಸಂಚಾಲಕರು, ಸದಸ್ಯರು ಉಪಸ್ಥಿತರಿದ್ದರು. ಕಲೋತ್ಸವದ ಯಶಸ್ವಿಗಾಗಿ ಕಾರ್ಯನಿರ್ವಹಿಸುವ ಬಗ್ಗೆ ಚರ್ಚಿಸಲಾಯಿತು.
ಕಾಸರಗೋಡು ಜಿಲ್ಲಾಮಟ್ಟದ ಹೈಸ್ಕೂಲ್ ವಿಭಾಗದ ಐ. ಟಿ. ಮೇಳದ ಕನ್ನಡ ಟೈಪಿಂಗ್ ಸ್ಪರ್ಧೆಯಲ್ಲಿ A ಗ್ರೇಡಿನೊಂದಿಗೆ ಪ್ರಥಮ ಸ್ಥಾನವನ್ನು ಪಡೆದ  ಶ್ರೀ ದುರ್ಗಾಪರಮೇಶ್ವರಿ ಪ್ರೌಢಶಾಲೆ ಧರ್ಮತ್ತಡ್ಕದ ವಿಧ್ಯಾರ್ಥಿ ಸಾತ್ವಿಕ್ ಕೃಷ್ಣ .ಯನ್.

Monday, November 07, 2016

ಮಂಜೇಶ್ವರ ಉಪಜಿಲ್ಲಾ ಕಲೋತ್ಸವದ  ಉಪಸಮಿತಿಗಳ ಸಮಾಲೋಚನಾ ಸಭೆ

ಧರ್ಮತಡ್ಕ: ಮಂಜೇಶ್ವರ ಉಪಜಿಲ್ಲಾ ಮಟ್ಟದ  ಶಾಲಾ ಕಲೋತ್ಸವ ಈ ತಿಂಗಳಲ್ಲಿ ಧರ್ಮತಡ್ಕ ಶಾಲೆಯಲ್ಲಿ ನಡೆಯಲಿದ್ದು ಇದರ ಅಂಗವಾಗಿ ವಿವಿಧ ಉಪಸಮಿತಿಗಳ ಸಮಾಲೋಚನಾ ಸಭೆಯು ಶ್ರೀ ದುರ್ಗಾ ಪರಮೇಶ್ವರಿ ಹಯರ್ ಸೆಕಂಡರಿ ಶಾಲೆಯ ಸಭಾಂಗಣದಲ್ಲಿ ಜರಗಿತು. ಮಂಜೇಶ್ವರ ಉಪಜಿಲ್ಲಾ ಸಹಾಯಕ ವಿದ್ಯಾಧಿಕಾರಿ ಶ್ರೀ ನಂದಿಕೇಶನ್ ಅಧ್ಯಕ್ಷತೆ ವಹಿಸಿದ್ದರು. ಟಿಡಿ ಸದಾಶಿವ ರಾವ್, ಶಾಲಾ ವ್ಯವಸ್ಥಾಪಕರಾದ ಶ್ರೀ ಶಂಕರ ನಾರಾಯಣ ಭಟ್, ಉಪಸ್ಥಿತರಿದ್ದರು.  ವಿವಿಧ ಉಪಸಮಿತಿಗಳ ಕಾರ್ಯ ಚಟುವಟಿಕೆಗಳ ಬಗ್ಗೆ ಚರ್ಚಿಸಲಾಯಿತು. ಉಪಸಮಿತಿಗಳ ಸಂಚಾಲಕರು, ಅಧ್ಯಕ್ಷರು ಚರ್ಚೆಯಲ್ಲಿ ಭಾಗವಹಿಸಿದ್ದರು. ಶಾಲಾ ಕಲೋತ್ಸವದ ಯಶಸ್ವಿಗಾಗಿ ಶ್ರಮಿಸಲು ನಿರ್ಧರಿಸಲಾಯಿತು. ಧರ್ಮತಡ್ಕ ಶಾಲಾ ಪ್ರಾಂಶುಪಾಲರಾದ ಶ್ರೀ ಎನ್. ರಾಮಚಂದ್ರ ಭಟ್ ಸ್ವಾಗತಿಸಿ ಸಹ ಸಂಚಾಲಕರಾದ ಶ್ರೀ ಎನ್ ಮಹಾಲಿಂಗ ಭಟ್ ವಂದಿಸಿದರು.

MANJESHWAR SUB DISTRICT SPORTS - OUR SCHOOL OVERALL RESULT

NAME ITEM POINTS
JABIR ALI A A 200M 3
SUNEESHA KUMARI 800M 1
RAMYA T BHANDARY 3000M 5
JAYASHREE POOJAARY HAMMER THROW 5
SHRUTHAN KUMAR JAVELIN 3
SHRUTHAN KUMAR HIGH JUMP 5
NOWMYA HAMMER THROW(4KG) 5

MANJESHWAR SUB DISTRICT - SCHOOL KALOSTAVAM 2016-17

A get together of local clubs  & school well wishes was held in the school on 3-11-2016 to conduct kalostavam in a smooth and grand manner. The club organisers and locals promised to help for the smooth conduct of the kalostava.  