ಮಂಜೇಶ್ವರ ಉಪಜಿಲ್ಲಾ ಕಲೋತ್ಸವದ ಉಪಸಮಿತಿಗಳ ಸಮಾಲೋಚನಾ ಸಭೆ
ಧರ್ಮತಡ್ಕ: ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಲಾ ಕಲೋತ್ಸವ ಈ ತಿಂಗಳಲ್ಲಿ ಧರ್ಮತಡ್ಕ ಶಾಲೆಯಲ್ಲಿ ನಡೆಯಲಿದ್ದು ಇದರ ಅಂಗವಾಗಿ ವಿವಿಧ ಉಪಸಮಿತಿಗಳ ಸಮಾಲೋಚನಾ ಸಭೆಯು ಶ್ರೀ ದುರ್ಗಾ ಪರಮೇಶ್ವರಿ ಹಯರ್ ಸೆಕಂಡರಿ ಶಾಲೆಯ ಸಭಾಂಗಣದಲ್ಲಿ ಜರಗಿತು. ಮಂಜೇಶ್ವರ ಉಪಜಿಲ್ಲಾ ಸಹಾಯಕ ವಿದ್ಯಾಧಿಕಾರಿ ಶ್ರೀ ನಂದಿಕೇಶನ್ ಅಧ್ಯಕ್ಷತೆ ವಹಿಸಿದ್ದರು. ಟಿಡಿ ಸದಾಶಿವ ರಾವ್, ಶಾಲಾ ವ್ಯವಸ್ಥಾಪಕರಾದ ಶ್ರೀ ಶಂಕರ ನಾರಾಯಣ ಭಟ್, ಉಪಸ್ಥಿತರಿದ್ದರು. ವಿವಿಧ ಉಪಸಮಿತಿಗಳ ಕಾರ್ಯ ಚಟುವಟಿಕೆಗಳ ಬಗ್ಗೆ ಚರ್ಚಿಸಲಾಯಿತು. ಉಪಸಮಿತಿಗಳ ಸಂಚಾಲಕರು, ಅಧ್ಯಕ್ಷರು ಚರ್ಚೆಯಲ್ಲಿ ಭಾಗವಹಿಸಿದ್ದರು. ಶಾಲಾ ಕಲೋತ್ಸವದ ಯಶಸ್ವಿಗಾಗಿ ಶ್ರಮಿಸಲು ನಿರ್ಧರಿಸಲಾಯಿತು. ಧರ್ಮತಡ್ಕ ಶಾಲಾ ಪ್ರಾಂಶುಪಾಲರಾದ ಶ್ರೀ ಎನ್. ರಾಮಚಂದ್ರ ಭಟ್ ಸ್ವಾಗತಿಸಿ ಸಹ ಸಂಚಾಲಕರಾದ ಶ್ರೀ ಎನ್ ಮಹಾಲಿಂಗ ಭಟ್ ವಂದಿಸಿದರು.
No comments:
Post a Comment