Tuesday, October 22, 2019

ಕೇರಳ ಸ್ಕೌಟ್ ಅಂಡ್ ಗೈಡ್ ಧರ್ಮತ್ತಡ್ಕ ಯೂನಿಟ್ ನ ಆಶ್ರಯದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಜಾಗೃತಿ ಶಿಬಿರ .
ವಿದ್ಯಾರ್ಥಿಗಳ ಸಹಾಯವಾಣಿ child line ವತಿಯಿಂದ ಶ್ರೀ ದುರ್ಗಾಪರಮೇಶ್ವರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಮಕ್ಕಳ ಸಮಸ್ಯೆಗಳ ಬಗೆಗಿನ ಜಾಗೃತಿ ತರಗತಿಯನ್ನು ನಡೆಸಲಾಯಿತು. ಚೈಲ್ಡ್ ಲೈನ್ ಕಾಸರಗೋಡು ತಂಡದ ಸದಸ್ಯರಾದ ಶ್ರೀ ಆನಂದ ಮತ್ತು ಶ್ರೀಮತಿ ರಮ್ಯಾ ತರಗತಿ ನಡೆಸಿಕೊಟ್ಟರು.ಸಂಸ್ಥೆಯ ವ್ಯವಸ್ಥಾಪಕ ಎನ್ ಶಂಕರನಾರಾಯಣ ಭಟ್ , ಅಧ್ಯಾಪಕರಾದ ರಾಮಕೃಷ್ಣ ಭಟ್ ಶುಭಾಶಂಸನೆಗೈದರು.
ಶಾಲಾ ಮುಖ್ಯೋಪಾಧ್ಯಾಯರಾದ ಇ. ಎಚ್ ಗೋವಿಂದ ಭಟ್ ಸ್ವಾಗತಿಸಿ, ಗೈಡ್ ಅಧ್ಯಾಪಕಿ ಶ್ರೀಮತಿ ವಿಚೇತ ಲೋಕೇಶ್ ನಿರೂಪಿಸಿ, ಸ್ಕೌಟ್ ಅಧ್ಯಾಪಕ ಶಿವಪ್ರಸಾದ್ ಚೆರುಗೋಳಿ ವಂದಿಸಿದರು.
ಅಧ್ಯಾಪಕರಾದ ಪ್ರದೀಪ್ ಕರ್ವಾಜೆ,ಶಶಿಕುಮಾರ್ ಪಿ,ಪ್ರಶಾಂತ ಹೊಳ್ಳ ಎನ್,ರಾಜಕುಮಾರ ಕೆ, ಕೇಶವಪ್ರಸಾದ ಎಡಕ್ಕನ ಸಹಕರಿಸಿದರು






No comments: