Tuesday, June 21, 2016


INTERNATIONAL YOGA DAY

"ಮನಸ್ಸು ಮತ್ತು ಶರೀರ ಒಂದೇ. ಇದು ಎಂದೆಂದಿಗೂ ಒಂದಾಗಿರಲು ಯೋಗವೇ ಯೋಗ್ಯ " ಎಂದು ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ರಾಮಚಂದ್ರ ಉಳುವಾನ ಇವರು ತಿಳಿಸಿದರು. ಅವರು ಶ್ರೀ  ದುರ್ಗಾಪರಮೇಶ್ವರಿ ಪ್ರೌಢ ಶಾಲೆ ಧರ್ಮತಡ್ಕದಲ್ಲಿ  ಶಾಲಾ ಕ್ರೀಡಾ ಸಂಘದ ಆಶ್ರಯದಲ್ಲಿ ನಡೆದ ಯೋಗ ದಿನಾಚರಣೆಯನ್ನು ಉದ್ಘಾಟಿಸಿ ಮಾತಾನಾಡಿದರು.ಶಾಲಾ ಮುಖ್ಯೋಪಾಧ್ಯಾಯರಾದ  ಶ್ರೀ ಯುತ ಎನ್. ರಾಮಚಂದ್ರ  ಭಟ್ ರವರು ಗಣ್ಯರನ್ನು ಸ್ವಾಗತಿಸಿದರು. ಶ್ರೀಯುತ ಸತೀಶ ಕುಮಾರ್ ವಂದಿಸಿದರು. ಶಾಲಾ ದೈಹಿಕ ಅಧ್ಯಾಪಕರಾದ ಶ್ರೀ ಅಶೋಕನ್ ರವರ ನೇತೃತ್ವದಲ್ಲಿ ಶಾಲಾ ಸಿಬಂಧಿ ಮತ್ತು ಸಂಘದ  ಸದಸ್ಯರಿಗೆ ಯೋಗದ ಕುರಿತು ಮಾಹಿತಿ ಕಾರ್ಯಾಗಾರ ನಡೆಯಿತು.





No comments: