ಶ್ರೀಯುತ ರಾಮ ನಾಯ್ಕನವರಿಗೆ ಬೀಳ್ಕೊಡುಗೆ
ಸುಧೀರ್ಘ ಕಾಲ 37 ವರ್ಷಗಳ ಗುಮಾಸ್ತ ಸೇವೆಯನ್ನು ಮಾಡಿ, ತಾ.31.10.2014 ರಂದು ಸೇವೆಯಿಂದ
ನಿವೃತ್ತಿಹೊಂದಲಿರುವ ಶ್ರೀಯುತ ರಾಮ ನಾಯ್ಕ.ಎನ್ ಇವರನ್ನು ಶಾಲಾ ಮೇನೇಜರ್ ಮತ್ತು ಸಿಬ್ಬಂಧಿ ವರ್ಗದವರಿಂದ ಬೀಳ್ಕೊಡಲಾಯಿತು. ಶಾಲಾ ಮೇನೇಜರ್ ಶ್ರೀಯುತ N.Subbanna
Bhat ಇವರು ರಾಮ ನಾಯ್ಕ ಅವರಿಗೆ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು. ಪ್ರೌಢ ಶಾಲಾ
ಮುಖ್ಯೋಪಾಧ್ಯಾಯರಾದ ಶ್ರೀಯುತ ಶ್ರೀ.ಎನ್.ರಾಮಚಂದ್ರ ಭಟ್ ಹಾಗೂ
ಅಧ್ಯಾಪಕ ವೃಂದದವರು ಶುಭಹಾರೈಸಿದರು.
ಶ್ರೀಯುತ ರಾಮ ನಾಯ್ಕ ಇವರ
ಕಿರುಪರಿಚಯ
ಶ್ರೀ N.RamaNaik ರವರು 12.10.1958 ರಂದು ಬಾಡೂರು ಗ್ರಾಮದ ಶನ್ನಿಕೋಟಿಯಲ್ಲಿ ಜನಿಸಿ, ತಮ್ಮ ವಿದ್ಯಾಭ್ಯಾಸವನ್ನು
SNHS Perla ದಲ್ಲಿ
SSLC ಯೊಂದಿಗೆ ಪೂರ್ತಿಗೊಳಿಸಿದರು. 29.7.1978 ರಂದು
SDPHS Dharmathadka ದಲ್ಲಿ
ಜವಾನ ಸೇವೆಗೆ ಸೇರ್ಪಡೆಗೊಂಡು ಸುಧೀರ್ಘ 37 ವರ್ಷಗಳ ಸೇವೆಯನ್ನು ಮಾಡಿ 31.10.2014 ರಂದನಿವೃತ್ತಿಯಾಗಿರುತ್ತಾರೆ. ಒಬ್ಬ ಪುತ್ರ ಮತ್ತು ಪುತ್ರಿಯನ್ನು ಪಡೆದಿರುವ
ಇವರು ಶ್ರೀಮತಿ ಸುಶೀಲಾ ಇವರೊಂದಿಗೆ ಪ್ರಸ್ತುತ ಶನ್ನಿಕೋಟಿಯಲ್ಲಿ ನೆಮ್ಮದಿಯ ಜೀವನ
ನಡೆಸುತ್ತಿದ್ದಾರೆ.
No comments:
Post a Comment