Friday, October 24, 2014






                               

             ಶ್ರೀದುರ್ಗಾಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆ ಧರ್ಮತ್ತಡ್ಕದಲ್ಲಿ ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕ , ಕಾಸರಗೋಡು ಇದರ ಆಶ್ರಯದಲ್ಲಿ ಜಾನಪದ ಸಂಚಾರ ಉದ್ಘಾಟನೆಗೊಂಡು ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮಗಳು ಸಂಪನ್ನಗೊಂಡುವು.

              ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇಶವ ಪ್ರಸಾದ ನಾಣಿಹಿತ್ತಿಲು ವಹಿಸಿದ್ದರು. ಕಾರ್ಯಕ್ರಮವನ್ನು  ಡಾ/ ಬಂಜಗೆರೆ ಜಯಪ್ರಕಾಶ್ ಅಧ್ಯಕ್ಷರು ಪುಸ್ತಕ ಪ್ರಾಧಿಕಾರ,  ಕರ್ನಾಟಕ ಸರಕಾರ ಇವರು ಉದ್ಘಾಟಿಸಿದರು.

               ಕಾರ್ಯಕ್ರಮದಲ್ಲಿ ಶಾಲಾ ಮೇನೇಜರ್ ಶ್ರೀ ಸುಬ್ಬಣ್ಣ ಭಟ್ , ಶಂಕರ್ ರೈ ಮಾಸ್ತರ್,ಭಂಡಾರಗುತ್ತು ಸೀತಾರಾಮ ಶೆಟ್ಟಿ , ಶ್ರೀMoidukutty ಮಾಸ್ತರ್, ರಾಮಚಂದ್ರ ಭಟ್ ಧರ್ಮತ್ತಡ್ಕ ಮೊದಲಾದವರು ಶುಭಹಾರೈಸಿದರು.

                ಉದ್ಘಾಟನಾ ಸಮಾರಂಭದ ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜಾನಪದ ನೃತ್ಯ  ಪ್ರಾತ್ಯಕ್ಷಿಕೆಗಳು ಸಂಪನ್ನಗೊಂಡಿತು.

                  ಬೊಳಿಕೆ ಕಲಾಸಂಘದ ಕಲಾವಿದರಿಂದ ಜಾನಪದ ಪ್ರಾತ್ಯಕ್ಷಿಕೆ ನಡೆದು ಪ್ರೊ. ಶ್ರೀನಾಥ್ , ಬಾಲಕೃಷ್ಣ ಅಗ್ಗಿತ್ತಾಯ ಇವರು ಪ್ರಾತ್ಯಕ್ಷಿಕೆಯ ನಿರ್ವಹಣೆ ನಡೆಸಿದರು.

                   ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಶ್ರೀ.ಎನ್.ರಾಮಚಂದ್ರ ಭಟ್ ಸ್ವಾಗತಿಸಿ ವಸಂತ ಕುಮಾರ್ ಸಿ.ಕೆ.ಪ್ರಾಸ್ತಾವಿಕ ಮಾತುಗಳನ್ನಾಡಿದರು. ರಾಧಾಕೃಷ್ಣ ಉಳಿಯತ್ತಡ್ಕ ಇವರು ಧನ್ಯವಾದ ಸಮರ್ಪಿಸಿದರು. ಶಿಕ್ಷಕ ಸತೀಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
        

No comments: