Sunday, November 14, 2021

 SDPHSS DHARMATHADHA

25/10/2021
ಶಾಲಾ ಪುನರಾರಂಭದ ಅಂಗವಾಗಿ, ರಕ್ಷಕ- ಶಿಕ್ಷಕ ಮಹಾಸಭೆಯನ್ನು ದಿನಾಂಕ 25/10/2021ರಂದು ಸೇರಲಾಯಿತು.
ರಕ್ಷಕ- ಶಿಕ್ಷಕ ಸಮಿತಿಯ ಮಹಸಭೆಯ ಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷ ಶ್ರೀ ಇಬ್ರಾಹಿಂ ಎನ್ ವಹಿಸಿದರು.
ಮುಖ್ಯೋಪಾಧ್ಯಾಯ ಶ್ರೀ ಇ ಎಚ್ ಗೋವಿಂದ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಶಾಲೆಯ ವ್ಯವಸ್ಥಾಪ ಶ್ರೀ ಎನ್ ಶಂಕರನಾರಾಯಣ ಭಟ್ ಹಾಗೂ ಹೈಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲ ಶ್ರೀ ಎನ್ ರಾಮಚಂದ್ರ ಭಟ್ ಕಾರ್ಯಕ್ರಮಕ್ಕೆ ಶುಭಾಶಂಸನೆಗೈದರು.
ಮಾತೃ ರಕ್ಷಕ ಮಂಡಳಿಯ ಅಧ್ಯಕ್ಷೆ ಶ್ರೀಮತಿ ಜಲಜಾಕ್ಷಿ ಉಪಸ್ಥಿತರಿದ್ದರು.
ಪುತ್ತಿಗೆ ಪಂಚಾಯತ್ ಆರೋಗ್ಯ ಇಲಾಖೆಯ JPHN ಆಗಿರುವ ಲೆಬಿತ ಆರೋಗ್ಯ ಸಂರಕ್ಷಣೆ ಬಗ್ಗೆ ಮಾಹಿತಿ ಒದಗಿಸಿದರು.
ಸಭೆಯಲ್ಲಿ ಹೊಸ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಶ್ರೀಮತಿ ಈಶ್ವರಿ ಡಿ, ಶ್ರೀಮತಿ ಶ್ವೇತ ಕುಮಾರಿ ಎಂ ಹಾಗೂ ಸೌಮ್ಯ ಎಂ ಪ್ರಾರ್ಥನೆ ಹಾಡಿದರು.
ಶ್ರೀ ರಾಮಕೃಷ್ಣ ಭಟ್ ಸ್ವಾಗತಿಸಿ, ಶ್ರೀ ಉಣ್ಣಿಕೃಷ್ಣ ಧನ್ಯವಾದ ಸಮರ್ಪಿಸಿದರು.
ಶ್ರೀ ಶಿವಪ್ರಸಾದ್ ಸಿ ಹಾಗೂ ಶ್ರೀ ಪ್ರಶಾಂತ ಹೊಳ್ಳ ಎನ್ ನಿರೂಪಣೆಯಲ್ಲಿ ಸಹಕರಿಸಿದರು.







ಲೇಖಕಿ ಶ್ರೀಮತಿ ಪ್ರಸನ್ನ ವಿ ಚೆಕ್ಕೆಮನೆ ಇವರು  ತಮ್ಮ ನೀಲಾಂಬರಿ(ಕಥಾಸಂಕಲನ) 

ಹಾಗೂ ತುಳಸೀಹಾರ(ಕಾದಂಬರಿ) ಎಂಬೀ ಕೃತಿಗಳನ್ನು ನಮ್ಮ ಶಾಲೆಯ ಗ್ರಂಥಾಲಯಕ್ಕೆ ಗೌರವಪೂರ್ವಕವಾಗಿ ನೀಡಿದರು


..

ಧನ್ಯವಾದಗಳು






ನವಾಗತ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ

 SDPHSS DHARMATHADKA

10/11/2021
ಎಂಟು ಮತ್ತು ಒಂಭತ್ತನೇ ತರಗತಿಯ ವಿದ್ಯಾರ್ಥಿಗಳ ರಕ್ಷಕ ಶಿಕ್ಷಕ ಸಭೆ ಇಂದು ಶಾಲಾ ಸಭಾಂಗಣದಲ್ಲಿ ಜರಗಿತು.
ಶಾಲೆಯ ವ್ಯವಸ್ಥಾಪಕರಾದ ಶ್ರೀ ಎನ್ ಶಂಕರನಾರಾಯಣ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.
ಮುಖ್ಯೋಪಾಧ್ಯಾಯ ಶ್ರೀ ಇ ಎಚ್ ಗೋವಿಂದ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಹೈಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲ ಶ್ರೀ ಎನ್ ರಾಮಚಂದ್ರ ಭಟ್ ಕಾರ್ಯಕ್ರಮಕ್ಕೆ ಶುಭಾಶಂಸನೆ ಹೇಳಿದರು.
ಶಿಕ್ಷಕರಾದ ಶ್ರೀ ಕೆ ರಾಮಕೃಷ್ಣ ಭಟ್, ಉಷಾ ಕೆ ಆರ್ ಉಪಸ್ಥಿತರಿದ್ದರು.
ಮಾತೃ ರಕ್ಷಕ ಮಂಡಳಿಯ ಕಾರ್ಯಕಾರಿ ಸಮಿತಿ ಸದಸ್ಯೆ ವಸಂತಿ ಎಂ ಉಪಸ್ಥಿತರಿದ್ದರು.
ಪ್ರಸ್ತುತ ಸಭೆಯಲ್ಲಿ ಹೊಸ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ವಿದ್ಯಾರ್ಥಿಗಳ ಕಲಿಕೆಯ ಕುರಿತಾಗಿ ಹಲವಾರು ವಿಚಾರಗಳ ಕುರಿತು ಚರ್ಚೆ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಶ್ರೀಮತಿ ಈಶ್ವರಿ ಡಿ, ಶ್ರೀಮತಿ ಶ್ವೇತ ಕುಮಾರಿ ಎಂ ಹಾಗೂ ಶ್ರೀಮತಿ ಸೌಮ್ಯ ಎಂ ಪ್ರಾರ್ಥಿಸಿ
ಶ್ರೀಮತಿ ವಿದ್ಯಾಸರಸ್ವತಿ ಸ್ವಾಗತಿಸಿ, ಶ್ರೀ ಶಶಿಧರ ಕೆ ಧನ್ಯವಾದ ಸಮರ್ಪಿಸಿದರು.
ಶ್ರೀ ಶಿವಪ್ರಸಾದ್ ಸಿ ಹಾಗೂ ಶ್ರೀ ಪ್ರಶಾಂತ ಹೊಳ್ಳ ಎನ್ ನಿರ್ವಹಿಸಿದರು.










 SDPHSS DHARMATHADKA

10/11/2021
ಎಂಟನೇ ತರಗತಿಯ ಇಂಗ್ಲಿಷ್ ಮಾಧ್ಯಮದ ನವಾಗತ ವಿದ್ಯಾರ್ಥಿಗಳ ಪ್ರವೇಶೋತ್ಸವ ಇಂದು ಶಾಲಾ ಸಭಾಂಗಣದಲ್ಲಿ ಜರಗಿತು.
ಶಾಲೆಯ ವ್ಯವಸ್ಥಾಪಕರಾದ ಶ್ರೀ ಶಂಕರನಾರಾಯಣ ಭಟ್ ವಿದ್ಯಾರ್ಥಿಗಳನ್ನು ಔಪಚಾರಿಕವಾಗಿ ಸ್ವಾಗತಿಸಿ ಮಾತನಾಡಿದರು.
ಮುಖ್ಯೋಪಾಧ್ಯಾಯ ಶ್ರೀ ಇ ಎಚ್ ಗೋವಿಂದ ಭಟ್ ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ವಿವರಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಶಿಕ್ಷಕರಾದ ಶ್ರೀ ಕೆ ರಾಮಕೃಷ್ಣ ಭಟ್, ಸುನಿತಾ ಕೆ ಹಾಗೂ ಈಶ್ವರಿ ಡಿ ಉಪಸ್ಥಿತರಿದ್ದರು.







SDPHSS DHARMATHADKA

08/11/2021


ಎಂಟನೇ ತರಗತಿಯ ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಪ್ರವೇಶೋತ್ಸವ ಇಂದು ಶಾಲಾ ಸಭಾಂಗಣದಲ್ಲಿ ಜರಗಿತು.


ಶಾಲೆಯ ವ್ಯವಸ್ಥಾಪಕರಾದ ಶ್ರೀ ಶಂಕರನಾರಾಯಣ ಭಟ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.


ಮುಖ್ಯೋಪಾಧ್ಯಾಯ ಶ್ರೀ ಇ ಎಚ್ ಗೋವಿಂದ ಭಟ್ ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ವಿವರಿಸಿದರು.


ಧರ್ಮತ್ತಡ್ಕ ಆಯುರ್ವೇದ ವೈದ್ಯೆ ಶ್ರೀಮತಿ ಸೀತಾ ಲಕ್ಷ್ಮಿ ಆರೋಗ್ಯ ಸಂರಕ್ಷಣೆ, ಹಾಗೂ ಆಯುರ್ವೇದದ ಔಷಧಿಯ ಮಹತ್ವ ವಿವರಿಸಿದರು








 School Fumigated by Aparajithadoopa Churna provided by Govt Ayurvedic Dispensary Dhharmathadka after first days class