ಧರ್ಮತ್ತಡ್ಕ: ರಂಗಚಿನ್ನಾರಿ ಕಾಸರಗೋಡು (ರಿ) ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಇದರ ಸಹಕಾರದೊಂದಿಗೆ ನಾಡಗೀತೆ ಮತ್ತು ಭಾವಗೀತೆ ಗಾಯನ ತರಬೇತಿ ಕಮ್ಮಟ ” ಕನ್ನಡ ಸ್ವರ” ಕಾರ್ಯಕ್ರಮವು ಗಡಿ ಪ್ರದೇಶದ ಕಾಸರಗೋಡಿನ ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆ,ಮತ್ತು ಎ.ಯು.ಪಿ.ಶಾಲೆಯಲ್ಲಿ ಜರುಗಿತು.ಖ್ಯಾತ ಗಾಯಕರೂ ಸಂಗೀತ ನಿರ್ದೇಶಕರೂ ಆದ ಪ್ರಮೋದ್ ಸಪ್ರೆ ಹಾಗೂ ಗಡಿನಾಡಿನ ಉದಯೋನ್ಮುಖ ಗಾಯಕ ಕಿಶೋರ್ ಪೆರ್ಲ ಅವರು ಕಮ್ಮಟದಲ್ಲಿ ಗಾಯನ ತರಬೇತಿ ನೀಡಿದರು.
No comments:
Post a Comment