ಕೇರಳ ಸರಕಾರದ ಯೋಜನೆಯಂತೆ 8ನೇ ತರಗತಿಯ ಕೆಲವು ಆಯ್ದ ಮಕ್ಕಳಿಗೆ ಶ್ರದ್ಧಾ ಶಿಬಿರವು ದಿನಾಂಕ 9-12-2017ರಂದು ಶ್ರೀ ದುರ್ಗಾ ಪರಮೇಶ್ವರೀ ಹೈಯರ್ ಸೆಕೆಂಡರಿ ಶಾಲೆ ಧರ್ಮತ್ತಡ್ಕದಲ್ಲಿ ಪ್ರಾಂಶುಪಾಲರಾದ ಶ್ರೀ ಯನ್ ರಾಮಚಂದ್ರ ಭಟ್ ಉದ್ಘಾಟಿಸಿದರು. ಹಿರಿಯ ಅಧ್ಯಾಪಕರಾದ ನರಸಿಂಹ ರಾಜ್ ಕೆ ಅವರು ಶುಭ ಹಾರೈಸಿದರು. ಶಿಕ್ಷಕರಾದ ಶ್ರೀ ಶಶಿಕುಮಾರ್ ಸ್ವಾಗತಿಸಿ, ಶ್ರೀ ಶಿವಪ್ರಸಾದ್ ವಂದಿಸಿದರು.
Tuesday, December 12, 2017
Wednesday, November 29, 2017
RAKSHA CH bagged first place in HS sanskrit prahasanam in distrcit kalolsavam @ chemnad.
ಸಿ ಜೆ ಹೆಚ್ ಯಸ್ ಯಸ್ ಚೆಮ್ನಾಡ್ ನಲ್ಲಿ ನಡೆದ ಕಾಸರಗೋಡು ಕಂದಾಯ ಜಿಲ್ಲಾ ಮಟ್ಟದ ಶಾಲಾ ಕಲೋತ್ಸವದಲ್ಲಿ ಶ್ರೀ ದುರ್ಗಾ ಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆ ಧರ್ಮತ್ತಡ್ಕದ ವಿದ್ಯಾರ್ಥಿನಿ ಕುಮಾರಿ ರಕ್ಷಾ ಸಿ ಎಚ್ ಸಂಸ್ಕೃತ ಪ್ರಭಾಷಣಂ ಸ್ಪರ್ಧೆಯಲ್ಲಿ ಎ ಗ್ರೇಡ್ ನೊಂದಿಗೆ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
Sunday, November 26, 2017
ಧರ್ಮತ್ತಡ್ಕ: ರಂಗಚಿನ್ನಾರಿ ಕಾಸರಗೋಡು (ರಿ) ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಇದರ ಸಹಕಾರದೊಂದಿಗೆ ನಾಡಗೀತೆ ಮತ್ತು ಭಾವಗೀತೆ ಗಾಯನ ತರಬೇತಿ ಕಮ್ಮಟ ” ಕನ್ನಡ ಸ್ವರ” ಕಾರ್ಯಕ್ರಮವು ಗಡಿ ಪ್ರದೇಶದ ಕಾಸರಗೋಡಿನ ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆ,ಮತ್ತು ಎ.ಯು.ಪಿ.ಶಾಲೆಯಲ್ಲಿ ಜರುಗಿತು.ಖ್ಯಾತ ಗಾಯಕರೂ ಸಂಗೀತ ನಿರ್ದೇಶಕರೂ ಆದ ಪ್ರಮೋದ್ ಸಪ್ರೆ ಹಾಗೂ ಗಡಿನಾಡಿನ ಉದಯೋನ್ಮುಖ ಗಾಯಕ ಕಿಶೋರ್ ಪೆರ್ಲ ಅವರು ಕಮ್ಮಟದಲ್ಲಿ ಗಾಯನ ತರಬೇತಿ ನೀಡಿದರು.
Subscribe to:
Posts (Atom)