*ಪರೀಕ್ಷೆ-ನಿರೀಕ್ಷೆ*
ಶ್ರೀ ದುರ್ಗಾಪರಮೇಶ್ವರಿ ಹೈಸ್ಕೂಲ್ ಧರ್ಮತ್ತಡ್ಕದಲ್ಲಿ ದಿನಾಂಕ 7-2-2019 ರಂದು ಹತ್ತನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಪರೀಕ್ಷಾ ಸಿದ್ಧತಾ ಕಾರ್ಯಾಗಾರ *ಪರೀಕ್ಷೆ-ನಿರೀಕ್ಷೆ* ಕಾರ್ಯಕ್ರಮ ನಡೆಯಿತು.
ಶಾಲಾ ವ್ಯವಸ್ಥಾಪಕರಾದ ಶ್ರೀಯುತ ಶಂಕರನಾರಾಯಣ ಭಟ್ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಅನಂತನಾರಾಯಣ ಪದಕಣ್ಣಾಯ, ಶ್ರೀ ಭಾರತೀ ಕಾಲೇಜು ನಂತೂರು ಶುಭ ಹಾರೈಸಿದರು.
" ಪರೀಕ್ಷೆ ಯಲ್ಲಿ ವಿದ್ಯಾರ್ಥಿಯೊಬ್ಬ ಚೆನ್ನಾಗಿ ಉತ್ತರದಲ್ಲಿ ಅಧ್ಯಾಪಕರ ಮನಸ್ಸು ಅರಳುತ್ತದೆ. ಚೆನ್ನಾಗಿ ತಯಾರಿನಡೆಸಿದ್ದಲಿ ಉತ್ತರ ತಿಳಿದಲ್ಲಿ ವಿದ್ಯಾರ್ಥಿಯ ಮುಖದಲ್ಲಿ ಮಂದಹಾಸ ಮೂಡುತ್ತದೆ '' ಎಂದು ಶ್ರೀಯುತ ಉಂಡೆಮನೆ ವಿಶ್ವೇಶ್ವರ ಭಟ್ ವಿದ್ಯಾರ್ಥಿಗಳನ್ನು ಕಾರ್ಯಕ್ರಮದತ್ತ ಸೆಳೆಯುತ್ತಾ ವಿಶೇಷ ತರಗತಿ ಆರಂಭಿಸಿದರು. ಈಗಲೇ ಪರೀಕ್ಷಾ ತಯಾರಿ ನಡೆಸಿದರೆ ಸಾಮಾನ್ಯ ದಿನಕ್ಕೆ ನಾಲ್ಕು ಗಂಟೆ ತಯಾರಿ ಸಾಕಾಗುತ್ತದೆ. ದಿನ ಕಳೆದಂತೆ ತಯಾರಿ ಆರಂಭಿಸಿದರೆ ಕಲಿಕೆಯ ವೇಗ ಹೆಚ್ಚಾಗಿ ವಿಷಯಗಳನ್ನು ಸರಿಯಾಗಿ ಮನನ ಮಾಡದೆ ಎಡವುವ ಸಾಧ್ಯತೆ ಹೆಚ್ಚು. ಆದ್ದರಿಂದ ಸಾಕಷ್ಟು ಮೊದಲೇ ತಯಾರಿ ಅಗತ್ಯ ಎಂದರು. ಅಧ್ಯಯನ ಮಾಡುವಾಗ ಸರಿಯಾಗಿ ಅರ್ಥೈಸಿಕೊಂಡು ಮಾಡುವುದು ಬಹು ಮುಖ್ಯ ಅಂಶ ಎಂಬುದನ್ನು ನೆನಪಿಸಿದರು. ಓದುವ ವೇಳಾಪಟ್ಟಿ, ಅಗತ್ಯದ ವಿಶ್ರಾಂತಿ, ಮನೋದೈಹಿಕ ಚಟುವಟಿಕೆಗಳು, ಪೂರಕವಾಗಿ ಯುಕ್ತ ಆಹಾರದ ಅಗತ್ಯ ಇವುಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು. 180 ವಿದ್ಯಾರ್ಥಿಗಳು ಈ ಕಾರ್ಯಾಗಾರದಲ್ಲಿ ಭಾಗವಹಿಸಿ ಸದುಪಯೋಗ ಪಡೆದುಕೊಂಡರು.
ಸ್ಥಳಾವಕಾಶವಿತ್ತು
ಶ್ರೀ ದುರ್ಗಾಪರಮೇಶ್ವರಿ ಹೈಯರ್ ಸೆಕೆಂಡರಿ ಪ್ರಾಂಶುಪಾಲರಾದ ಶ್ರೀಯುತ ರಾಮಚಂದ್ರ ಭಟ್ ನೇರೋಳು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಶ್ರೀಯುತ ಇ.ಎಚ್. ಗೋವಿಂದ ಭಟ್ ಅವರು ಧನ್ಯವಾದವಿತ್ತರು. ಕೇಶವಪ್ರಸಾದ ಎಡಕ್ಕಾನ ಪರೀಕ್ಷೆ - ನಿರೀಕ್ಷೆ ಕಾರ್ಯಕ್ರಮ ಸಂಯೋಜನೆ ಮಾಡಿದರು.

No comments:
Post a Comment