Saturday, December 08, 2018

ಒಂದು ರಂಗಯಾತ್ರೆ...
ಉಪಜಿಲ್ಲಾ ಮಟ್ಟದಿಂದ  ರಾಜ್ಯ ಮಟ್ಟದ ವರೆಗೂ ಮಕ್ಕಳ ಪ್ರತಿಭಾ ಪೋಷಣೆಗೆ ನ್ಯಾಯಯುತ ಬೇಡಿಕೆಗಾಗಿ ನಡೆಸಿದ ಹೋರಾಟದ ಹಾದಿ ನನಗೆ ಬಲವನ್ನು ನೀಡಿದೆ.
 ಶಾಲಾ ಕಲೋತ್ಸವದ ಜಿಲ್ಲಾ ಮಟ್ಟದಲ್ಲಿ ಹಲವು ವರ್ಷಗಳಿಂದ ನಡೆದು ಬಂದ ಕನ್ನಡ ಮಕ್ಕಳ ಅವಗಣನೆಗೆ ಸರಿಯಾದ ಉತ್ತರ ನೀಡಿದ್ದಾರೆ ಮಕ್ಕಳು....  ಕನ್ನಡ ಮಕ್ಕಳ ರಂಗಭೂಮಿ ಇನ್ನಷ್ಟು ವಿಕಾಸಗೂಳ್ಳಬೇಕಾಗಿದೆ. ನಾವು ಎಡವಿದ ಹಲವಾರು ರಂಗವಿಚಾರಗಳನ್ನು ಕಲಿತುಕೊಳ್ಳಲು, ಹೊಸ ರಂಗ ತಂತ್ರಗಳನ್ನು ಆವಿಷ್ಕರಿಸಲು ಸಹಾಯಕವಾಗಿತ್ತು ರಾಜ್ಯಮಟ್ಟದ ನಾಟಕ ಸ್ಪರ್ಧೆಯ ಅನುಭವ. ಕಾಸರಗೋಡಿನಲ್ಲಿ ಮಕ್ಕಳ ಕನ್ನಡ ರಂಗಭೂಮಿ ಬೆಳವಣಿಗೆಯಲ್ಲಿ  ಶ್ರೀ ದುರ್ಗಾಪರಮೇಶ್ವರಿ ಪ್ರೌಢ ಶಾಲೆ ಧರ್ಮತ್ತಡ್ಕದಂತಹ ಕನ್ನಡ ರಂಗಭೂಮಿ ಪರವಾಗಿರುವ ಅನೇಕ ಶಾಲೆಗಳು ಮುಂದೆ ಬರಬೇಕಾದ ಅಗತ್ಯವಿದೆ. ಸೋಲಿನಲ್ಲಿ ಕುಗ್ಗದೆ,ಮಕ್ಕಳ ಪ್ರತಿಭೆಗಾಗಿ ಪ್ರಯತ್ನಿಸಿ ಯಶಸ್ಸನ್ನು ಕಂಡ ಶಾಲೆಯ ಆಡಳಿತ ಮಂಡಳಿ ಅಧ್ಯಾಪಕ ವೃಂದದವರನ್ನು ಈ ಸಮಯದಲ್ಲಿ ಸ್ಮರಿಸಿಕೊಳ್ಳುತ್ತೇನೆ. 
ಈ ರಂಗಯಾತ್ರೆಯಲ್ಲಿ ಜೊತೆಯಾಗಿನಿಂತ ತಂಡದ ಸಂಚಾಲಕರು, ಶಾಲಾವ್ಯವಸ್ಥಾಪಕ ಎನ್ ಶಂಕರನಾರಾಯಣ ಭಟ್, ತಂಡದ ಮ್ಯಾನೇಜರ್ ಮತ್ತು ಸಹನಿರ್ದೇಶನ ಮಾಡಿದ ಶಿವಪ್ರಸಾದ್ ಚೆರುಗೋಳಿ, ಪ್ರಶಾಂತ ಹೊಳ್ಳ ಎನ್, ಮನೂಹರ ಸಂಗೀತವನ್ನು ನೀಡಿದ ಮೆಲ್ವಿನ್ ಪೆರ್ಮುದೆ,ರಂಗಪರಿಕರ,ಮುಖವರ್ಣಿಕೆಯಲ್ಲಿ ವಿಶೇಷ ಕಾಳಜಿ ವಹಿಸಿದ ವರದರಾಜ ಬಾಯರು ಹಾಗೂ ವಸಂತ ಮೂಡಂಬೈಲು,ಎಲ್ಲದಕ್ಕಿಂತಲು ಮಿಗಿಲಾಗಿ ಅತ್ಯದ್ಭುತ ಅಭಿನಯ ನೀಡಿದ ನನ್ನ ಪುಟಾಣಿ ಚಿನ್ನರಿಗೆ ಅಭಿನಂದನೆಗಳು.ತಂಡದಜೊತೆಗಿದ್ದು ಶಾಲಾ ಅಧ್ಯಾಪಕಾರಾದ ಪ್ರದೀಪ್ ಕರ್ವಾಜೆ, ಉಷಾಪದ್ಮ, ಉಷಾ ಕೆ ಆರ್,ಶಿವನಾರಾಯಣ ಭಟ್, ಇವರಿಗೆಲ್ಲ ಆಭಾರಿ.
ಏಳಿ ಎದ್ದೇಳಿ ಗುರಿಮುಟ್ಟುವ ತನಕ ನಿಲ್ಲದಿರಿ,ಸೋಲೇ ಗೆಲುವಿನ ಸೋಪಾನ, ಕನ್ನಡ ಮಕ್ಕಳ ರಂಗಭೂಮಿಗಾಗಿ ಈ ಮಂತ್ರ ಯಾವತ್ತೂ ಮನಸ್ಸಿನಲ್ಲಿದೆ.


















No comments: