Thursday, August 30, 2018

ಧರ್ಮತ್ತಡ್ಕ ಶಾಲೆಯಲ್ಲಿ 72ನೇ ಸ್ವಾತಂತ್ರ  ದಿನಾಚರಣೆ:
ಶ್ರೀ ದುರ್ಗಾ ಪರಮೇಶ್ವರೀ  ಹೈಯರ್ ಸೆಕೆಂಡರಿ ಶಾಲೆ ಧರ್ಮತ್ತಡ್ಕದಲ್ಲಿ 72ನೇ ಸ್ವಾತಂತ್ರ  ದಿನಾಚರಣೆ  ಪಿ ಟಿ ಎ ಅಧ್ಯಕ್ಷರಾದ ಶ್ರೀ ಗಿರೀಶ್ ಕುಮಾರ್ ಕಯ್ಯಾರ್ ಇವರ ಅಧ್ಯಕ್ಷತೆಯಲ್ಲಿ ಜರಗಿತು . ಶಾಲಾ ಪ್ರಾಂಶುಪಾಲರಾದ ಶ್ರೀ ರಾಮಚಂದ್ರ ಭಟ್ ಧ್ವಜಾರೋಹಣ ಗೈಯುವುದರೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ನಿವೃತ್ತ  ಸಿ ಆರ್ ಪಿಫ್ ಯೋಧ ಶ್ರೀ ಅಯ್ಯಪ್ಪ ಮಣಿಯಾಣಿ ಮತ್ತು ಪ್ಯಾರಾ ಮಿಲಿಟರಿ ಕಮಾಂಡೋ ಆಗಿರುವ ಶ್ರೀ ಸನೇಶ್  ಕುಮಾರ್ ಉಪ್ಪಳ ಇವರು ಮುಖ್ಯ ಅಥಿತಿಗಳಾಗಿ ಪಾಲ್ಗೊಂಡರು. ಮುಖ್ಯ ಅಥಿತಿಗಳಿಂದ ಮಿಲಿಟರಿ ಸೇನೆ ಮತ್ತು ದೇಶಕ್ಕೆ ಅದರ ಮಹತ್ವದ  ಕುರಿತು ಸಂವಾದ ಕಾರ್ಯಕ್ರಮವು ನಡೆಯಿತು. ರಾಜ್ಯ ಪ್ರಶಸ್ತ ವಿಜೇತ ಶ್ರೀ ಶಂಕರ ಕಾಮತ್ ಚೇವಾರ್ ಮತ್ತು ಶಾಲಾ ಮ್ಯಾನೇಜರ್ ಶ್ರೀ ಯನ್ ಶಂಕರನಾರಾಯಣ ಭಟ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ವಿದ್ಯಾರ್ಥಿಗಳಿಂದ ವಿವಿಧ ಕಾರ್ಯಕ್ರಮವು ಜರಗಿದವು. ಶಾಲಾ ಪ್ರಾಂಶುಪಾಲರಾದ ಶ್ರೀ ರಾಮಚಂದ್ರ ಭಟ್ ಗಣ್ಯರನ್ನು ಸ್ವಾಗತಿಸಿ, ಶ್ರೀ ಶಿವಪ್ರಸಾದ್ ವಂದಿಸಿದರು. ಶಿಕ್ಷಕರಾದ ಶ್ರೀ ಈ ಯಚ್ ಗೋವಿಂಧ ಭಟ್ ಕಾರ್ಯಕ್ರವನ್ನು ನಿರೂಪಿಸಿದರು. ಸಿಹಿತಿಂಡಿ ವಿತರಣೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.  


No comments: