Friday, January 12, 2018

ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ನೇತೃತ್ವದಲ್ಲಿ ಕಾರ್ಯನಿರ್ವಹಿಸುವ ಮುಳ್ಳೇರಿಯಾ ಮಂಡಲ ವಿದ್ಯಾರ್ಥಿ ವಾಹಿನಿ ಸಹಕಾರದೊಂದಿಗೆ ಗುಂಪೆ ವಲಯ ವಿದ್ಯಾರ್ಥಿವಾಹಿನಿಯ ಪ್ರಾಯೋಜಕತ್ವದಲ್ಲಿ ಶ್ರೀ ದುರ್ಗಾಪರಮೇಶ್ವರಿ ಹೈಸ್ಕೂಲ್ ಧರ್ಮತ್ತಡ್ಕದಲ್ಲಿ ತಾ 12-1-2018 ರಂದು ಹತ್ತನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಪರೀಕ್ಷಾ ತರಬೇತಿ "ಪರೀಕ್ಷೆ-ನಿರೀಕ್ಷೆ" ಮತ್ತು ವಿವೇಕಾನಂದ ಜಯಂತಿ ಕಾರ್ಯಕ್ರಮ ನಡೆಯಿತು.

ಶಾಲಾ ವ್ಯವಸ್ಥಾಪಕರಾದ ಶ್ರೀಯುತ ಶಂಕರನಾರಾಯಣ ಭಟ್ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ವಲಯ ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಶುಭ ಹಾರೈಸಿದರು. "ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ" ಎಂಬ ದ್ಯೇಯ ವಾಕ್ಯವನ್ನು ಉದ್ದೇಶಿಸಿ ಶ್ರೀಯುತ ಉಂಡೆಮನೆ ವಿಶ್ವೇಶ್ವರ ಭಟ್ ವಿದ್ಯಾರ್ಥಿಗಳನ್ನು ಕಾರ್ಯಕ್ರಮದತ್ತ ಸೆಳೆಯುತ್ತಾ ವಿಶೇಷ ತರಗತಿ ಆರಂಭಿಸಿದರು. ಈಗಲೇ ಪರೀಕ್ಷಾ ತಯಾರಿ ನಡೆಸಿದರೆ ಸಾಮಾನ್ಯ ದಿನಕ್ಕೆ ನಾಲ್ಕು ಗಂಟೆ ತಯಾರಿ ಸಾಕಾಗುತ್ತದೆ. ದಿನ ಕಳೆದಂತೆ ತಯಾರಿ ಆರಂಭಿಸಿದರೆ ಕಲಿಕೆಯ ವೇಗ ಹೆಚ್ಚಾಗಿ ವಿಷಯಗಳನ್ನು ಸರಿಯಾಗಿ ಮನನ ಮಾಡದೆ ಎಡವುವ ಸಾಧ್ಯತೆ ಹೆಚ್ಚು. ಆದ್ದರಿಂದ ಸಾಕಷ್ಟು ಮೊದಲೇ ತಯಾರಿ ಅಗತ್ಯ ಎಂದರು. ಅಧ್ಯಯನ ಮಾಡುವಾಗ ಸರಿಯಾಗಿ ಅರ್ಥೈಸಿಕೊಂಡು ಮಾಡುವುದು ಬಹು ಮುಖ್ಯ ಅಂಶ ಎಂಬುದನ್ನು ನೆನಪಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ತರಗತಿ ನಡೆಸಿದ ಶ್ರೀಯುತ ವಿಶ್ವೇಶ್ವರ ಭಟ್ಟರಿಗೆ ಮತ್ತು ಸ್ಥಳಾವಕಾಶವಿತ್ತು ಸಹಕರಿಸಿದ ಶಾಲಾ ವ್ಯವಸ್ಥಾಪಕರಿಗೆ ವಲಯ ವತಿಯಿಂದ ಮುಳ್ಳೇರಿಯ ಮಂಡಲವಿದ್ಯಾರ್ಥಿವಾಹಿನಿ ಶ್ರೀಯುತ ಕೇಶವ ಪ್ರಸಾದ ಎಡಕ್ಕಾನ ಸ್ಮರಣಿಕೆ ಇತ್ತು ಗೌರವಿಸಿದರು.

 ಶ್ರೀಯುತ ರಾಮಚಂದ್ರ ಭಟ್ ನೇರೋಳು ಶ್ರೀ ದುರ್ಗಾಪರಮೇಶ್ವರಿ ಹೈಯರ್ ಸೆಕೆಂಡರಿ ಪ್ರಾಂಶುಪಾಲರು ಎಲ್ಲರನ್ನೂ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.ಮುಳ್ಳೆಯಮಂಡಲ ಗುಂಪೆ ವಲಯದ ಕಾರ್ಯಕ್ರಮ ವನ್ನು ಆಯೋಜಿಸಿದ ಗುಂಪೆ ವಲಯ ಕಾರ್ಯದರ್ಶಿ ಯಾದ ಶ್ರೀ ಯುತ ಬೆಜಪ್ಪೆ ಸುಬ್ರಹ್ಮಣ್ಯ ಭಟ್ ಇವರನ್ನು ಶಾಲಾಮುಖ್ಯೋಪಾದ್ಯಾಯ ಸ್ಮರಣಿಕೆಯನೀತು ಗೌರವಿಸಿದರು. ಶ್ರೀಯುತ ಇ.ಎಚ್. ಗೋವಿಂದ ಭಟ್ ಜೀವಿಕಾ ಪ್ರಧಾನ ಧನ್ಯವಾದವಿತ್ತರು.










 


No comments: