ವಾಚನ ಸಪ್ತಾಹ ಆಚರಣೆಯ ಅಂಗವಾಗಿ ಸಂಸ್ಕೃತ ಸಂಘದ ವತಿಯಿಂದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ವಿದ್ಯಾಲಯದ ಮುಖ್ಯ ಶಿಕ್ಷಕರಾದ ಶ್ರೀ ರಾಮಚಂದ್ರ ಭಟ್ ಅಧ್ಯಕ್ಷ ಸ್ಥಾನವನ್ನು ವಹಿಸಿ ಕಾರ್ಯಕ್ರಮ ಉದ್ಘಾಟಿಸಿ ಹಿತವಚನಗಳನ್ನಿತ್ತರು. ಮುಖ್ಯ ಅಥಿತಿಗಳಾಗಿ ಪರಿಸರ ಸಂಘದ ಅಧ್ಯಾಪಕರಾದ ಶ್ರೀ ನರಸಿಂಹ ರಾಜ ಮಾಸ್ಟರ್ ಆಗಮಿಸಿ ಶುಭಕೋರಿದರು. ಸಂಸ್ಕೃತ ಅಧ್ಯಾಪಕರಾದ ಶ್ರೀ ಶಿವನಾರಾಯಣ ಭಟ್ ಪ್ರಾಸ್ತಾವಿಕ ಭಾಷಣ ಮಾಡಿದರು. ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಸಂಘದ ಸದಸ್ಯ ಆದರ್ಶ್ ಇ ಎಚ್ ಸ್ವಾಗತಿಸಿ, ಜತೆಕಾರ್ಯದರ್ಶಿ ಅಪೂರ್ವ ಎಡಕ್ಕಾನ ವಂದಿಸಿದರು. ಸಂಘದ ಕಾರ್ಯದರ್ಶಿ ನವನೀತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದನು. ಮಕ್ಕಳಿಂದ ವಿವಿಧ ಕಾರ್ಯಕ್ರಮಗಳು ಜರಗಿದವು.
No comments:
Post a Comment