ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣ
ಭಾರತ ದೇಶಕ್ಕಾಗಿ ನೂರಾರು ವ್ಯಕ್ತಿಗಳು ತಮ್ಮ ಇಡೀ ಜೀವನವನ್ನೇ ಅರ್ಪಿಸಿದ್ದಾರೆ, ತಮ್ಮ ಎಲ್ಲಾ ಆಸೆ, ಆಕಾಂಕ್ಷೆಗಳನ್ನು ಕಡೆಗಣಿಸಿ ದೇಶದ ಪರ ಚಿಂತಿಸಿ ಜೀವಿಸಿದ ಮಹಾನ್ ಸಾಧಕರು ಸಾಕಷ್ಟು ಜನ ಇದ್ದಾರೆ, ಅಂಥವರಲ್ಲಿ ಅತ್ಯಂತ ಪ್ರಮುಖ ವ್ಯಕ್ತಿ ಎಂದರೆ ಯುವಕರ ಆಶಾಕಿರಣ, ಯುವಕರಿಗೆ ಸ್ಪೂರ್ತಿಯಾಗಿರುವ ಸ್ವಾಮಿ ವಿವೇಕಾನಂದರು, ತಮ್ಮ ಜೀವನದ ಉದ್ದಕ್ಕೂ ಭಾರತವನ್ನು ಪ್ರೀತಿಸುತ್ತ, ಭಾರತ ದೇಶದ ಅಭಿವೃದ್ದಿಗಾಗಿ, ಹಿಂದೂ ಧರ್ಮದ ಬೆಳವಣಿಗೆಗಾಗಿ ಸದಾ ದುಡಿಯುವ ಮೂಲಕ ನಮ್ಮ ಭಾರತ ರಾಷ್ಟ್ರಕ್ಕೆ ಅಪಾರವಾದ ಸೇವೆ ಸಲ್ಲಿಸಿದ್ದಾರೆ, ಅವರ ಸಾಧನೆಗಳ ಪಟ್ಟಿ ಮಾಡುತ್ತ ಹೋದರೆ ಪುಟಗಳೇ ಸಾಕಾಗುವುದಿಲ್ಲ....ಅಷ್ಟೊಂದು ಸಾಧನೆಗಳನ್ನು ಮಾಡಿ ಸ್ವಾಮಿ ವಿವೇಕಾನಂದರು ಸಾರ್ಥಕ ಜೀವನವನ್ನು ಕಳೆದರು.ಸ್ವಾಮಿ ವಿವೇಕಾನಂದರ ಮಾತೇ ಹಾಗೆ.... ಅವರ ಬಾಯಿಂದ ಹೊರ ಬರುತ್ತಿದ್ದ ಪ್ರತಿ ಪದವು, ವಾಕ್ಯವು ಕೇಳುಗರ ಹೃದಯವನ್ನು ಸ್ಪರ್ಶಿಸುತ್ತಿತ್ತು, ಪ್ರತಿ ಮಾತಲ್ಲೂ ವಿಶೇಷವಾದ ಸಂದೇಶ, ಗಾಢವಾದ ಅರ್ಥ ಅಡಗಿರುತ್ತಿತ್ತು, ಸ್ವಾಮಿ ವಿವೇಕಾನಂದರು ಭಾಷಣ ಮಾಡಲು ಎದ್ದು ನಿಂತರೆ ಕಾರ್ಯಕ್ರಮದಲ್ಲಿನ ಸಭಿಕರು ನಿಶಬ್ದ, ಭಾಷಣ ಮುಗಿಯುವವರೆಗೂ ತುಟಿ ಬಿಚ್ಚಿ ಯಾರು ಮಾತನಾಡುತ್ತಿರಲಿಲ್ಲ, ಭಾರತ ದೇಶ ಕಂಡ ಯುವ ಚೈತನ್ಯ, ಯುವಕರ ಶಕ್ತಿ, ಯುವಕರ ಆರಾಧ್ಯ ಧೈವ ಸ್ವಾಮಿ ವಿವೇಕಾನಂದರು ನಿಜಕ್ಕು ಭಾರತ ರಾಷ್ಟ್ರ ಕಂಡ ಉತ್ತಮ ಯುವ ನಾಯಕ, ಹಲವು ಸಾಧನೆಗಳ ರೂವಾರಿ, ಸ್ವಾಮಿ ವಿವೇಕಾನಂದರ ಸಾಧನೆಗಳನ್ನು ತಿಳಿದಂತಹ ಬಹುತೇಕ ಪ್ರತಿಯೊಬ್ಬ ಯುವಕರು ಸ್ವಾಮಿ ವಿವೇಕಾನಂದರನ್ನು ಪ್ರೀತಿಸುತ್ತಾರೆ, ಅವರನ್ನು ಆರಾಧಿಸುತ್ತಾರೆ, ಅಷ್ಟರ ಮಟ್ಟಿಗೆ ಅವರು ಶ್ರೇಷ್ಠ ಎಂಬುವುದನ್ನು ಪ್ರತಿಯೊಬ್ಬರು ಒಪ್ಪುತ್ತಾರೆ.
ಜನವರಿ 12, 1863 ರಂದು ಕಲ್ಕತ್ತೆಯಲ್ಲಿ ವಿಶ್ವನಾಥ ದತ್ತ, ಭುವನೇಶ್ವರಿ ದೇವಿಯ ದಂಪತಿಯ ಮಗನಾಗಿ ಜನ್ಮ ತಾಳಿದ ಸ್ವಾಮಿ ವಿವೇಕಾನಂದರು ಇಡೀ ಜಗತ್ತು ಕೊಂಡಾಡುವಂತಹ, ಮೆಚ್ಚುವಂತಹ ಕೆಲಸ ಮಾಡುವ ಮೂಲಕ ಜಗತ್ತೆ ನಿಬ್ಬೆರಗಾಗಿ ಇವರ ಕಡೆ ತಿರುಗಿ ನೋಡುವಂತೆ ಮಾಡಿಕೊಂಡರು, ತಮ್ಮದೇ ಆದ ಆಚಾರ, ವಿಚಾರ, ತತ್ವ, ಸಿದ್ದಾಂತಗಳಿಂದ ಭಾರತ ದೇಶದಲ್ಲಷ್ಟೆ ಅಲ್ಲದೆ ಇಡೀ ವಿಶ್ವದಲ್ಲಿ ದೊಡ್ಡ ಹೆಸರು ಮಾಡಿ ಪ್ರಪಂಚವನ್ನೇ ತಮ್ಮತ್ತ ಸೆಳೆದವರು ಸ್ವಾಮಿ ವಿವೇಕಾನಂದರು, ತಮ್ಮದೇ ಆದ ವಿಭಿನ್ನ ವೈಚಾರಿಕ ಸಿದ್ದಾಂತಗಳಿಂದ ಕೋಟ್ಯಾಂತರ ಜನರ ಮನಸ್ಸನ್ನು ಗೆದ್ದು, ಅಪಾರ ಅನುಯಾಯಿಗಳನ್ನು, ಶಿಷ್ಯರನ್ನು ಸಂಪಾದಿಸಿಕೊಂಡರು, ಸ್ವಾಮಿ ವಿವೇಕಾನಂದರು ಭಾಷಣ ಮಾಡಲು ಎದ್ದು ನಿಂತರೆ ಕಾರ್ಯಕ್ರಮದಲ್ಲಿನ ಸಭಿಕರು ನಿಶಬ್ದ, ಯಾರು ಕೂಡ ಕಾರ್ಯಕ್ರಮವನ್ನು ಬಿಟ್ಟು ಹೊರ ಹೋಗುತ್ತಿರಲಿಲ್ಲ, ತುಟಿಯಿಂದ ಒಂದು ಮಾತನ್ನು ಹೊರ ಹಾಕದೆ ಸುಮ್ಮನೆ ಕುಳಿತು ಕೊಳ್ಳುತ್ತಿದ್ದರು, ಏಕೆಂದರೆ ಅವರ ಭಾಷಣ ಶೈಲಿಯೇ ಹಾಗೆ.... ಕೇಳುತ್ತಿದ್ದರೆ ಎಲ್ಲರಿಗೂ ಏನೋ ಒಂದು ರೀತಿಯ ರೋಮಾಂಚನವಾಗುತ್ತಿತ್ತು, ಅವರ ಭಾಷಣ ಕೇಳುವುದಕ್ಕೆ ಅವಕಾಶ ಸಿಕ್ಕಿದ್ದೆ ಯಾವುದೋ ಜನ್ಮದಲ್ಲಿ ಮಾಡಿದ ಪುಣ್ಯದ ಫಲದಿಂದ ಎಂದು ಸಭಿಕರು ಭಾವಿಸುತ್ತಿದ್ದರು.
ಸೆಪ್ಟೆಂಬರ್ 11, 1893ರಲ್ಲಿ ಅಮೆರಿಕಾದಚಿಕಾಗೋ ಪಟ್ಟಣದ ಆರ್ಟ್ ಇನ್ಸ್ ಟಿಟ್ಯೂಟ್ ನಲ್ಲಿ ನಡೆದ ಸರ್ವಧರ್ಮ ಸಮ್ಮೇಳನವು ವಿವೇಕಾನಂದರ ಸಾಮರ್ಥ್ಯವನ್ನು ಜಗತ್ತಿಗೆ ಪರಿಚಯಿಸಿತು, ವಿವೇಕಾನಂದರ ವೇಷ ಭೂಷಣ ನೋಡಿದ ವಿದೇಶಿಯರು ಅರೆ ಈತನಿಗೇ ಏನು ತಾನೇ ಗೊತ್ತು, ಈತನಿಗೆ ಭಾಷಣ ಮಾಡಲು ಬರುತ್ತ....? ಎಂಬಂತಹ ಗೊಂದಲಗಳು ಕಾರ್ಯಕ್ರಮದಲ್ಲಿನ ವಿದೇಶಿಯರಿಗೆ ಬಂತು, ಆದರೆ ವಿವೇಕಾನಂದರು ಭಾಷಣ ಆರಂಭಿಸುತ್ತಿದ್ದಂತೆ ಎಲ್ಲ ಗೊಂದಲಗಳಿಗು ತೆರೆ ಬಿದ್ದವು, ಅವರ ಭಾಷಣ ಶೈಲಿ ನೋಡಿ ವಿದೇಶಿಯರಿಗೆ ಶಾಕ್.... ಆ ಮಟ್ಟಿಗೆ ವಿವೇಕಾನಂದರು ತಮ್ಮ ವಿಶಿಷ್ಟ ಭಾಷಣ ಶೈಲಿ ಮೂಲಕ ವಿದೇಶಿ ಪ್ರಜೆಗಳನ್ನು ಕೂಡ ತಮ್ಮತ್ತ ಸೆಳೆದರು, ಕಾರ್ಯಕ್ರಮದಲ್ಲಿ ಹಾಜರಿದ್ದ ನೂರಾರು ವಿದೇಶಿಯರು ವಿವೇಕಾನಂದರ ಅದ್ಬುತ ಭಾಷಣ ಕೇಳಿ ಕ್ಷಣಾಮಾತ್ರದಲ್ಲಿ ಸ್ವಾಮಿ ವಿವೇಕಾನಂದರ ಅನುಯಾಯಿಗಳಾಗಿ ಬದಲಾಗಿ ಹೋದರು, ಆ ಮಟ್ಟಿಗೆ ಸ್ವಾಮಿ ವಿವೇಕಾನಂದರು ಯಾರು ಹೊಂದಿರದ ಅಪ್ರತಿಮ ಶಕ್ತಿಯನ್ನು ಹೊಂದಿದ್ದರು, ವಿಶೇಷವೆಂದರೆ ಸ್ವಾಮಿ ವಿವೇಕಾನಂದರು ಬಹುತೇಕ ತಮ್ಮ ಪ್ರತಿಯೊಂದು ಭಾಷಣದಲ್ಲೂ ಭಾರತ ದೇಶದ ಶ್ರೇಷ್ಠತೆ, ಭಾರತ ದೇಶದ ಶ್ರೀಮಂತ ಸಂಪ್ರದಾಯ, ಆಚಾರ, ವಿಚಾರದ ಬಗ್ಗೆ ವಿವರಿಸುತ್ತ ಭಾರತ ದೇಶದ ಗೌರವವನ್ನು ಮತ್ತಷ್ಟು ಹೆಚ್ಚಿಸುತ್ತಿದ್ದರು, ಸ್ವಾಮಿ ವಿವೇಕಾನಂದರು ರಾಮಕೃಷ್ಣ ಪರಮಹಂಸರ ಶಿಷ್ಯರಾಗಿ ಅತ್ಯದ್ಬುತ ಕೆಲಸ ಕಾರ್ಯಗಳನ್ನು ಮಾಡುವ ಮೂಲಕ ರಾಮಕೃಷ್ಣ ಪರಮಹಂಸರಿಗೆ ಅಪಾರವಾದ ಗೌರವನ್ನು ತಂದುಕೊಟ್ಟು ಕೀರ್ತಿಯನ್ನು ಸಂಪಾದಿಸಿದರು, 1902 ಜುಲೈ 4ರಂದು ಸ್ವಾಮಿ ವಿವೇಕಾನಂದರು ನಿಧನರಾದರು, ಆ ದಿನ ಭಾರತೀಯರಿಗೆ ಅತ್ಯಂತ ನೋವಿನ ದಿನ, ಸ್ವಾಮಿ ವಿವೇಕಾನಂದರು ಬದುಕಿದ್ದು ಕೇವಲ 39 ವರ್ಷವಾದರು ಕೂಡ ಲೆಕ್ಕವಿಲ್ಲದಷ್ಟು ಸಾಧನೆಗಳನ್ನು ಮಾಡಿ ಹೋಗಿದ್ದಾರೆ, ಈಗೆ ಹಲವು ಸಾಧನೆಗಳ ವೀರ ಸ್ವಾಮಿ ವಿವೇಕಾನಂದರು ನಮ್ಮಲ್ಲೆರನ್ನು ಅಗಲಿ ನೂರಾರು ವರುಷಗಳೆ ಕಳೆದು ಹೋಗಿವೆ, ಆದರು ಸಹ ಅವರು ಎಲ್ಲರ ಮನದಲ್ಲಿ ಇನ್ನು ಕೂಡ ನೆಲೆಯುರಿದ್ದಾರೆ, ಮುಂದೆಯು ಸದಾ ಕಾಲ ಎಲ್ಲರ ಮನಸ್ಸಿನಲ್ಲಿ ಉಳಿಯುತ್ತಾರೆ, ಸ್ವಾಮಿ ವಿವೇಕಾನಂದರು ನಮ್ಮೆಲ್ಲರನ್ನು ಬಿಟ್ಟು ಸುಮಾರು ವರ್ಷಗಳೇ ಗತಿಸಿ ಹೋದರು ಕೂಡ ಅವರ ಮಾಡಿದ ಸಾಧನೆಗಳು ಮಾತ್ರ ಎಂದೆಂದಿಗೂ ಶಾಶ್ವತ, ಅವುಗಳಿಗೆ ಎಂದು ಕೂಡ ಸಾವಿಲ್ಲ.
ಸ್ವಾಮಿ ವಿವೇಕಾನಂದರು ಹಿಂದೂ ಧರ್ಮ, ಸಮುದಾಯದ ಬೆಳವಣಿಗೆಗಾಗಿ ಹಗಲಿರುಳು ದುಡಿದು ಶ್ರಮಿಸಿದರು, ಯುರೋಪ್, ಲಂಡನ್, ಅಮೆರಿಕಾ ಸೇರಿದಂತೆ ಇಡೀ ಜಗತ್ತನ್ನು ಸುತ್ತಿ ಭಾರತ ದೇಶದ ಸಂಪ್ರದಾಯಗಳನ್ನು ವಿದೇಶಿಯರಿಗೆ ತಿಳಿಸಿಕೊಟ್ಟರು, ಹಿಂದೂ ಸಮುದಾಯಕ್ಕೆ ಒಂದು ಸ್ಥಾನ ಮಾನ, ನೆಲೆಗಟ್ಟನ್ನು ಒದಗಿಸಿಕೊಟ್ಟಿದ್ದು ಸ್ವಾಮಿ ವಿವೇಕಾನಂದರು ಎಂಬುವುದನ್ನು ಯಾರು ಮರೆಯುವಂತಿಲ್ಲ ಹಾಗೂ ಅಲ್ಲಗೆಳೆಯುವಂತಿಲ್ಲ, ಆಧ್ಯಾತ್ಮಿಕ ವಿಚಾರಗಳನ್ನು ಬೆಳೆಸಿಕೊಂಡು ಮಾನವರು ಜೀವನ ಸಾಗಿಸುವುದು ಒಳಿತು, ಆಧ್ಯಾತ್ಮಿಕ ಚಿಂತನೆಗಳು ಮಾನವನ ಅಭಿವೃದ್ದಿಗೆ ಸಹಕಾರಿಯಾಗುತ್ತವೆ, ಆಧ್ಯಾತ್ಮಿಕ ಲೋಕದಲ್ಲಿ ತಲ್ಲಿನರಾದರೆ ಯಾವುದೇ ಸಮಸ್ಯೆಗಳಿರುವುದಿಲ್ಲ, ಮನಸ್ಸು ಸದಾ ಶಾಂತವಾಗಿರುತ್ತದೆ ಎಂಬುವುದು ಸ್ವಾಮಿ ವಿವೇಕಾನಂದರ ಮಾತಾಗಿತ್ತು, ಆಧ್ಯಾತ್ಮಿಕ ವಿಚಾರಗಳನ್ನು ಬೆಳೆಸಿಕೊಳ್ಳುವಂತೆ ತಮ್ಮ ಅನುಯಾಯಿಗಳಿಗೆ, ಜನರಿಗೆ ಸಲಹೆ ನೀಡುತ್ತಿದ್ದರು, ಸ್ವಾಮಿ ವಿವೇಕಾನಂದರು ಕೂಡ ಭಾರತದ ಆಧ್ಯಾತ್ಮಿಕ ವಿಚಾರಗಳಿಗೆ, ಚಿಂತನೆಗಳಿಗೆ ಮಾರು ಹೋಗಿದ್ದರು, ಸದಾ ಕಾಲ ಅವರು ಅವುಗಳನ್ನು ಪಾಲಿಸುತ್ತಿದ್ದರು.
ಸ್ವಾಮಿ ವಿವೇಕಾನಂದರು ಹೇಳಿದ ಒಂದು ಮಾತು ಪ್ರತಿಯೊಬ್ಬರು ಯೋಚಿಸುವಂತೆ ಮಾಡುತ್ತದೆ, ಭಾರತ ದೇಶದಲ್ಲಿ ಹಲವು ಸಮಸ್ಯೆಗಳು ಇವೆ, ಇದೆಂತ ದೇಶ ನಮಗಿಂತ ಇತರೆ ದೇಶಗಳು ಎಷ್ಟೋ ವಾಸಿ ಎಂದು ಒಬ್ಬ ವ್ಯಕ್ತಿ ಸ್ವಾಮಿ ವಿವೇಕಾನಂದರ ಬಳಿ ಹೇಳಿದಾಗ ಸ್ವಾಮಿ ವಿವೇಕಾನಂದರು ಪ್ರತಿಕ್ರಿಯಿಸಿ ಸಮಸ್ಯೆಗಳು ಇರುವುದು ನಿನಗೂ ಗೊತ್ತು, ನನಗೂ ಗೊತ್ತು ಸಮಸ್ಯೆಗಳ ನಿವಾರಣೆಗೆ ನಾವೇನು ಮಾಡಿದೆವು ಎಂಬುವುದೆ ಮುಖ್ಯ, ನಮ್ಮ ಭಾರತ ದೇಶದಲ್ಲಿ ಸಮಸ್ಯೆಗಳು ಇವೆ, ನಮ್ಮ ದೇಶ ಸರಿಯಿಲ್ಲ, ಇತರೆ ದೇಶಗಳೆ ಎಷ್ಟೋ ವಾಸಿಯೆಂದು ಎನ್ನುವ ಮುಂಚೆ ದೇಶಕ್ಕಾಗಿ ನೀನೇನು ಮಾಡಿದೆ ಅನ್ನೋದನ್ನ ಮೊದಲ ಅರಿ, ದೇಶವನ್ನು ಕೀಳು ಭಾವನೆಯಿಂದ ನೋಡುವುದನ್ನು ನಿಲ್ಲಿಸಿ, ದೇಶಕ್ಕಾಗಿ ಏನಾದರೂ ಕೊಡುಗೆಯನ್ನು ನೀಡು ಎಂದು ಸ್ವಾಮಿ ವಿವೇಕಾನಂದರು ಆ ವ್ಯಕ್ತಿಗೆ ಹೇಳುತ್ತಾರೆ.
ಇನ್ನು ಸ್ವಾಮಿ ವಿವೇಕಾನಂದರು ಪ್ರಪಂಚಕ್ಕೆ ಸಾರಿ ಹೇಳಿದ ಹಲವು ಸಂದೇಶಗಳು ಎಂದೆಂದಿಗೂ ಕೂಡ ಪ್ರಸ್ತುತವಾಗಿರುತ್ತದೆ, ಅದರಲ್ಲೂ ಎದ್ದು ನಿಲ್ಲಿ, ಧೀರರಾಗಿ, ಬಲಾಢ್ಯರಾಗಿ ಜವಾಬ್ದಾರಿಯನ್ನೆಲ್ಲ ನೀವು ವಹಿಸಿ, ನಿಮ್ಮ ಅದೃಷ್ಟಕ್ಕೆ ನೀವೆ ಹೊಣೆ ಎಂದು ತಿಳಿಯಿರಿ, ನಿಮಗೆ ಬೇಕಾದ ಶಕ್ತಿ ಸಹಾಯವೆಲ್ಲ ನಿಮಗೆ ಇದೆ ! ಆದ ಕಾರಣ ನಿಮ್ಮ ಭವಿಷ್ಯವನ್ನು ನೀವೆ ನಿರ್ಮಿಸಿಕೊಳ್ಳಿ, ಮತ್ತೊಂದು ವಿವೇಕಾನಂದರ ಸಂದೇಶವೆಂದರೆ ನಿಷ್ಠೆ, ಉದ್ದೇಶದ ಪಾವಿತ್ರ್ಯ ಇವು ಕಾಲ ಕ್ರಮೇಣ ಗೆಲ್ಲುವುದರಲ್ಲಿ ಯಾವುದೇ ಸಂದೇಹವಿಲ್ಲ, ಈ ಗುಣಗಳಿಂದ ಕೂಡಿರುವವರು ಒಂದಲ್ಲಾ ಒಂದು ದಿನ ಗೆಲ್ಲುವುದು ನೂರಕ್ಕೆ ನೂರು ಸತ್ಯ, ಮಗದೊಂದು ಸಂದೇಶವೆಂದರೆ ಈ ಮಾನವ ಜನ್ಮ ಕೆಲವೇ ದಿನದ ಬಾಳುವೆ, ಜಗತ್ತಿನಲ್ಲಿನ ಸುಖಭೋಗಗಳೆಲ್ಲವು ಕ್ಷಣಿಕ, ಯಾರು ಪರರ ಹಿತಕ್ಕಾಗಿ ಬದುಕುವರೋ ಅವರೇ ಎಂದೆಂದಿಗೂ ಜೀವಂತ, ಮತ್ತೊಂದು ಅದ್ಬುತ ವಾಕ್ಯವೆಂದರೆ ಏನನ್ನೂ ಕೇಳಬೇಡಿ, ಪ್ರತಿಯಾಗಿ ಏನನ್ನೂ ಆಶಿಸಬೇಡಿ, ನೀವು ಏನನ್ನು ಕೊಡಬೇಕೋ ಅದನ್ನು ಕೊಡಿ, ಅದು ನಿಮಗೆ ಹಿಂತಿರುಗಿ ಬರುವುದು, ಆದರೆ ಅದನ್ನು ನೀವು ಈಗ ಆಲೋಚಿಸಬೇಡಿ, ನೀವು ಮಾಡಿದ ಪುಣ್ಯದ ಕಾರ್ಯಗಳ ಫಲ ನಿಮಗೆ ಹಿಂತಿರುಗಿ ಬಂದೆ ಬರುತ್ತದೆ, ಮತ್ತೊಂದು ವಿವೇಕಾನಂದರ ವಾಕ್ಯವೆಂದರೆ ಏಳಿ ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ, ನಿಮ್ಮ ಏಳಿಗೆಗೆ ನೀವೆ ಶಿಲ್ಪಿ, ನಿಮ್ಮ ಭವಿಷ್ಯವನ್ನು ನೀವೆ ರೂಪಿಸಿಕೊಳ್ಳಿ, ಇನ್ನೊಂದು ಸಂದೇಶ ನಿಮ್ಮ ಕೈಯಲ್ಲಿ ಸಾಧ್ಯವಿದ್ದರೆ ಸಹಾಯ ಹಸ್ತಚಾಚಿ, ಇಲ್ಲವಾದರೆ ಎರಡೂ ಕೈ ಜೋಡಿಸಿ ಮುಗಿದು ಹರಿಸಿಬಿಡಿ, ಅವರು ತಮ್ಮ ಗುರಿ ಮುಟ್ಟಲು ಸಫಲವಾಗಲಿ ಎಂದು, ಇಂತಹ ಅದ್ಬುತವಾದ ಹತ್ತಾರು ವಾಕ್ಯ, ಸಂದೇಶಗಳನ್ನು ನೀಡುವ ಮೂಲಕ ಸ್ವಾಮಿ ವಿವೇಕಾನಂದರು ಭಾರತೀಯರಿಗೆ ನೈತಿಕ ಮೌಲ್ಯಗಳ ಬಗ್ಗೆ ತಿಳಿಸಿಕೊಟ್ಟಿದ್ದಾರೆ.
ಇಂದು ಭಾರತದಲ್ಲಿ ಸಾವಿರಾರು ಸಮಸ್ಯೆಗಳು ಸೃಷ್ಟಿಯಾಗಿವೆ, ಬಡತನ, ನಿರುದ್ಯೋಗ, ಭ್ರಷ್ಟಚಾರ, ಭಯೋತ್ಪಾದನೆ, ಜಾತೀಯತೆ ಸೇರಿದಂತೆ ಅನೇಕ ಸಮಸ್ಯೆಗಳು ಹುಟ್ಟಿಕೊಂಡಿವೆ, ಇಂತಹ ಸಮಸ್ಯೆಗಳು ಶಾಶ್ವತವಾಗಿ ಬಗೆ ಹರಿಯಬೇಕಾದರೆ ಭಾರತದ ಪ್ರತಿಯೊಬ್ಬ ಭಾರತೀಯರು ಎಚ್ಚರಗೊಳ್ಳಬೇಕು, ಸ್ವಾರ್ಥವನ್ನು ಪಕ್ಕಕ್ಕಿಟ್ಟು ದೇಶದ ಹಿತಕ್ಕಾಗಿ ಶ್ರಮ ಹಾಕಿ ದುಡಿಯಬೇಕು, ದೇಶದಲ್ಲಿನ ಸಮಸ್ಯೆಗಳಿಗೆ ಕಾರಣರಾದವರನ್ನು ದೂಷಿಸುತ್ತಾ ಕಾಲಹರಣ ಮಾಡುವ ಬದಲು ಸಮಸ್ಯೆಗಳ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನವನ್ನು ಎಲ್ಲರು ಮಾಡಬೇಕಿದೆ, ಅದು ಬಿಟ್ಟು ನಮ್ಮ ದೇಶದಲ್ಲಿ ಉದ್ಬವಿಸಿರುವ ನೂರಾರು ಸಮಸ್ಯೆಗಳಿಗೆ ಅವರು ಕಾರಣ, ಇವರು ಕಾರಣ ಎಂದು ಕಾಲ ಕಳೆಯುವ ಬದಲು ಸಮಸ್ಯೆಗಳನ್ನು ಬಗೆಹರಿಸಲು ತಮ್ಮ ಕೈಯಲ್ಲಾಗುವ ಕೆಲಸವನ್ನು ತುರ್ತಾಗಿ ಪ್ರತಿಯೊಬ್ಬರು ಮಾಡಬೇಕು, ಆಗ ನಮ್ಮಲ್ಲಿರುವ ಸಮಸ್ಯೆಗಳು ಸ್ವಲ್ಪ ಮಟ್ಟಿಗೆಯಾದರು ಕಡಿಮೆಯಾಗುತ್ತದೆ.
ಇಂದಿನ ಯುವ ಸಮೂಹ ಸ್ವಾಮಿ ವಿವೇಕಾನಂದರ ಚಿಂತನೆಗಳು, ಸಿದ್ದಾಂತಗಳನ್ನು ತಿಳಿದುಕೊಂಡು ಅವುಗಳನ್ನು ಅನುಸರಿಸುವುದು ಅತ್ಯಂತ ಸೂಕ್ತ, ಸ್ವಾಮಿ ವಿವೇಕಾನಂದರ ಹಾದಿಯಲ್ಲಿ ನಡೆದವರು ಎಂದು ಕೂಡ ಜೀವನದಲ್ಲಿ ಸೋತ ಒಂದು ಉದಾಹರಣೆ ಕೂಡ ಇಲ್ಲ, ಸೋಲುವುದಕ್ಕೆ ಸಾಧ್ಯವಿಲ್ಲ, ಗೆಲುವು ಸದಾ ಕಾಲ ಅವರದ್ದಾಗಿರುತ್ತದೆ, ಭಾರತೀಯರಾದ ನಾವೆಲ್ಲರು ಸ್ವಾಮಿ ವಿವೇಕಾನಂದರ ಸಿದ್ದಾಂತ, ಅವರ ಚಿಂತನೆಗಳನ್ನು ಅನುಸರಿಸಿ ಭವ್ಯ ಭಾರತ ಕಟ್ಟಲು ಶ್ರಮಿಸಬೇಕಾಗಿದೆ, ಜೊತೆಗೆ ವಿವೇಕಾನಂದರ ಚಿಂತನೆ, ಆದರ್ಶ, ವಿಚಾರಗಳನ್ನು ಎಲ್ಲರಿಗೂ ತಲುಪಿಸುವಂತಹ ಕೆಲಸವನ್ನು ಪ್ರತಿಯೊಬ್ಬ ಭಾರತೀಯರು, ಆಡಳಿತ ನಡೆಸುವ ಸರ್ಕಾರಗಳು ಮಾಡಬೇಕಾಗಿದೆ, ಸ್ವಾಮಿ ವಿವೇಕಾನಂದರ ಜನ್ಮ ದಿನದ ಪ್ರಯುಕ್ತ ಜನವರಿ 12 ರಂದು ಆಚರಿಸುವ ರಾಷ್ಟ್ರೀಯ ಯುವದಿನವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮತ್ತಷ್ಟು ಆಸಕ್ತಿಯಿಂದ ಅರ್ಥಗರ್ಭಿತವಾಗಿ ಆಚರಿಸುವ ಮೂಲಕ ವಿವೇಕಾನಂದರ ವಿಚಾರಗಳು ವಿಶ್ವಕ್ಕೆ ಹರಡುವಂತೆ ಮಾಡಬೇಕು, ವಿವೇಕಾನಂದರ ಅಪಾರ ಸಾಧನೆಗಳ ಬಗ್ಗೆ ಯುವ ಸಮೂಹಕ್ಕೆ ಮಾಹಿತಿ ಕೊಡುವಂತಹ ಕೆಲಸ ಕಾರ್ಯವನ್ನು ಸರ್ಕಾರಗಳ ಜೊತೆಗೆ ನಾಗರಿಕರು ಮಾಡಬೇಕಾಗಿದೆ.
No comments:
Post a Comment