Tuesday, October 22, 2019

ನಾಡೋಜ ಕವಿ ಕಯ್ಯಾರ ಕಿಂಞಣ್ಣ ರೈ ಅವರ ಸಂಸ್ಮರಣ ಕಾರ್ಯಕ್ರಮವು ತಾ 9.8.2019ನೇ ಶುಕ್ರವಾರ ಅಪರಾಹ್ನ 3.00ಕ್ಕೆ ಸರಿಯಾಗಿ ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆ ಯಲ್ಲಿ ಜರಗಿತು. ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಕನ್ನಡಾಭಿಮಾನಿಗಳು ಆಗಮಿಸಿ ಕಾರ್ಯಕ್ರಮವನ್ನ ಯಶಸ್ಸು ಗೊಳಿಸಿದರು.

ನಮ್ಮ ವಿದ್ಯಾಸಂಸ್ಥೆಗಳ ಸಂಸ್ಥಾಪಕರಾದ ದಿ. ನೇರೋಳು ನಿಡುವಜೆ ರಾಮಚಂದ್ರ ಭಟ್ ಮತ್ತು ದಿ.ನೇರೋಳು ನಿಡುವಜೆ ಸುಬ್ಬಣ್ಣ ಭಟ್ಟರ ಸಂಸ್ಮರಣಾ ಕಾರ್ಯಕ್ರಮ ಪ್ರೌಢಶಾಲಾ ಸಭಾಂಗಣದಲ್ಲಿ ನಡೆಯಿತು.ಧರ್ಮತ್ತಡ್ಕ ವಿದ್ಯಾಸಂಸ್ಥೆಗಳ ಹಳೆ ವಿದ್ಯಾರ್ಥಿ ಸಂಘದ ನೇತೃತ್ವದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.




ನಮ್ಮ ಶಾಲೆಯ ಹೈಯರ್ ಸೆಕೆಂಡರಿ ವಿಭಾಗದ ಅಧ್ಯಾಪಕರಾದ ನಾಗರಾಜ ಮಾಷ್ಟ್ರ ನೇತೃತ್ವದಲ್ಲಿ ಶಾಲಾ ಕಟ್ಟಡದ sunshade ನಲ್ಲಿ ಬೆಳೆಸಿದ ಅಲಸಂಡೆ ನಮ್ಮ ಮಕ್ಕಳ ಮಧ್ಯಾಹ್ನದ ಬಿಸಿಯೂಟಕ್ಕೆ ನೀಡಿರುತ್ತಾರೆ.ಹೈಯರ್ ಸೆಕೆಂಡರಿ ವಿಭಾಗಕ್ಕೆ ಕೃತಜ್ಞತೆಗಳು.

#ಅಜ್ಞಾನದ_ಅಂಧತೆಯಿಂದ_ಸುಜ್ಞಾನ_ಜ್ಯೋತಿಯ_ನನ್ನೊಳು_ಬೆಳಗಿಸಿ_ನನ್ನ_ಗುರುವೃಂದಕ್ಕೆ_ಗುರು_ಪೂರ್ಣಿಮೆ"
ಗುರುವಿನ ಅರಿವಿನ ಜ್ಯೋತಿ ಶಿಷ್ಯನ ಅರಿವಿನೆಲೆಯ ತುಂಬಲಿ ಶ್ರೀ ದುರ್ಗಾಪರಮೇಶ್ವರಿ ಹೈಸ್ಕೂಲ್ ಧರ್ಮತ್ತಡ್ಕ ದಲ್ಲಿ ಸಂಸ್ಕೃತ ಸಂಘ ದ ವತಿಯಿಂದ #ಶ್ರೀರಾಮಯಣಮಾಸಚರಣೆ ನಡೆಯಿತು.


ತಾ 27/6/2019ನೇ ಗುರುವಾರ ಧರ್ಮತ್ತಡ್ಕ ಶ್ರೀ ದುರ್ಗಾ ಪರಮೇಶ್ವರೀ ಹೈಯರ್ ಸೆಕೆಂಡರಿ ಶಾಲೆಯ NSS ಘಟಕದ ನೇತೃತ್ವದಲ್ಲಿ ರಕ್ತ ದಾನ ಶಿಬಿರ ವು ಜರಗಿತು.



ಮುಖ್ಯಮಂತ್ರಿ ಅಪೇಕ್ಷಿತ ಕೇರಳ ನೆರೆ ಸಂತ್ರಸ್ತರ ಪರಿಹಾರ ನಿಧಿಗೆ ಶ್ರೀ ದುರ್ಗಾಪರಮೇಶ್ವರಿ ಹೈಸ್ಕೂಲ್ ಧರ್ಮತ್ತಡ್ಕ ದ ಅಧ್ಯಪಾಕ ವೃಂದ, ವಿದ್ಯಾರ್ಥಿ ಗಳಿಂದ ದೇಣಿಗೆ ಸಂಗ್ರಹ.