Thursday, October 01, 2020

ಬೀಳ್ಕೊಡುಗೆ ಸಮಾರಂಭ

 ಧರ್ಮತಡ್ಕ: ಮಾರ್ಚ್ 31ರಂದು ನಿವೃತ್ತರಾಗಿರುವ ಧರ್ಮತಡ್ಕ ಶ್ರೀ ದುರ್ಗಾಪರಮೇಶ್ವರಿ ಪ್ರೌಢಶಾಲೆಯ ಅಧ್ಯಾಪಕರಾದ  ನರಸಿಂಹ ರಾಜ ಕೆ ಹಾಗೂ ಅಶೋಕ ಕುಮಾರ್ ಟಿ ಇವರಿಗೆ ಬೀಳ್ಕೊಡುಗೆ ಸಮಾರಂಭ ಸೆಪ್ಟೆಂಬರ್ 24ರಂದು ಪ್ರೌಢಶಾಲಾ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷಸ್ಥಾನವನ್ನು ಶಾಲೆಯ ವ್ಯವಸ್ಥಾಪಕ ಎನ್ ಶಂಕರನಾರಾಯಣ ಭಟ್ ವಹಿಸಿದ್ದರು. ಹೈಯರ್ ಸೆಕೆಂಡರಿ ಪ್ರಿನ್ಸಿಪಾಲ್  ರಾಮಚಂದ್ರ ಭಟ್ ಯನ್ ಹಾಗೂ ಮುಖ್ಯೋಪಾಧ್ಯಾಯ ಇ ಎಚ್ ಗೋವಿಂದ ಭಟ್ ಪ್ರಾಸ್ತಾವಿಕ ಮಾತನಾಡಿದರು.

ಸುದೀರ್ಘ 35 ವರ್ಷಗಳಿಂದ ಹೈಸ್ಕೂಲು ಅಧ್ಯಾಪಕರಾಗಿ ಸೇವೆ ಸಲ್ಲಿಸಿದ ನರಸಿಂಹ ರಾಜ ಕೆ ಹಾಗೂ 27 ವರ್ಷಗಳಿಂದ ಸೇವೆ ಸಲ್ಲಿಸಿದ ಅಶೋಕ ಕುಮಾರ್ ಟಿ ಇವರಿಗೆ ಶಾಲೆಯ ವತಿಯಿಂದ ಶಾಲು ಹೊದಿಸಿ ಫಲ ಪುಷ್ಪ ಸ್ಮರಣಿಕೆಗಳನ್ನಿತ್ತು ಸನ್ಮಾನಿಸಿ ಗೌರವಿಸಲಾಯಿತು.

ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಇಬ್ರಾಹಿಂ ಕೆ, ಮಾತೃ ಸಂಘದ ಅಧ್ಯಕ್ಷೆ ಶ್ರೀಮತಿ ಜಲಜಾಕ್ಷಿ, ಶ್ರೀ ದುರ್ಗಾಪರಮೇಶ್ವರಿ ಎ ಯು ಪಿ ಶಾಲೆಯ ವ್ಯವಸ್ಥಾಪಕಿ ಶ್ರೀಮತಿ ವಿಜಯಶ್ರೀ, ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಯು. ರಾಮಚಂದ್ರ ಭಟ್ ನಿವೃತ್ತರಿಗೆ ಶುಭಹಾರೈಸಿದರು.

ಈ ಸುಸಂದರ್ಭದಲ್ಲಿ 2019-20ನೇ ಸಾಲಿನ ಹತ್ತನೇ ತರಗತಿಯ ಪರೀಕ್ಷೆಯಲ್ಲಿ ಎಲ್ಲ ವಿಷಯಗಳಲ್ಲಿಯೂ A+ ಅಂಕ ಪಡೆದು ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಹಾಗೂ ಹೈಯರ್ ಸೆಕೆಂಡರಿ ವಿಭಾಗದಲ್ಲಿ ಉನ್ನತ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ನಾರಾಯಣಿ ಅಮ್ಮನವರ ಸ್ಮರಣಾರ್ಥ ಅವರ ಮಗ ನಿವೃತ್ತ ದೈಹಿಕ ಶಿಕ್ಷಕ ಅಶೋಕನ್ ಎನ್ ಮತ್ತು ಶಾಲೆಯ ವತಿಯಿಂದ ಗೌರವ ಕಾಣಿಕೆಯನ್ನು ನೀಡಲಾಯಿತು. ಇದರ ಜತೆಗೆ ಆರ್ಥಿಕವಾಗಿ ಹಿಂದುಳಿದ ಉತ್ತಮ ಸಾಧನೆ ಗೈದ ವಿದ್ಯಾರ್ಥಿಗಳಿಗೆ ಮೇಪೋಡು ಸುಬ್ರಾಯ ಮಯ್ಯ ಸ್ಮಾರಕ ದತ್ತಿ ನಿಧಿಯನ್ನು ವಿತರಿಸಲಾಯಿತು.


ಹಳೆ ವಿದ್ಯಾರ್ಥಿನಿ ಶಾರದಾ,ಸುರಭಿ ಮತ್ತು ಸಿಂಜಿತ ಪ್ರಾರ್ಥನೆ ಹಾಡಿದರು. ಶ್ರೀಮತಿ ಶ್ವೇತ ಕುಮಾರಿ ಯಂ ಸ್ವಾಗತಿಸಿ,ಶ್ರೀಮತಿ ಈಶ್ವರಿ ಡಿ ವಂದಿಸಿದರು. ಶಿವನರಾಯಣ ಭಟ್ ಕಾರ್ಯಕ್ರಮವನ್ನು ನಿರೂಪಿಸಿದರು.

 







 

Friday, September 04, 2020

ಪೂಕಳಂ ಸ್ಪರ್ಧೆ

 

ಶಾಲಾ ‌ಮಟ್ಟದ ಪೂಕಳಂ ಸ್ಪರ್ಧೆ ಯಲ್ಲಿ ವಿಜಯಗಳಿಸಿದ ಹಾಗೂ ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಅಭಿನಂದನೆಗಳು..
🙏💐💐💐🙏
ಪ್ರಥಮ -
*ANSON MACHADO -XE*
ದ್ವಿತೀಯ -
*KISHAN A.N -VIII D*
ತೃತೀಯ-
*HRITHIKA X D* *AKSHATHA R UCHIL IX D*
*VIBHA IX D*

@BEST WISHES:-

PTA, MPTA, Manager Headmaster and Teacher's.






 

  ಶ್ರೀ ದುರ್ಗಾ ಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ 74ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಯಿತು. ಹೈಯರ್ ಸೆಕೆಂಡರಿ ಪ್ರಾಂಶುಪಾಲ ಶ್ರೀ ರಾಮಚಂದ್ರ ಭಟ್ ಧ್ವಜಾರೋಹಣ ಗೈದರು. ಮುಖ್ಯೋಪಾಧ್ಯಾಯರಾದ ಶ್ರೀ ಇ ಎಚ್ ಗೋವಿಂದ ಭಟ್, ಶಾಲಾ ವ್ಯವಸ್ಥಾಪಕ ಶ್ರೀ ಶಂಕರನಾರಾಯಣ ಭಟ್ ಮಾತಾಡಿದರು. ಶಾಲಾ ಅಧ್ಯಾಪಕರು ಉಪಸ್ಥಿತರಿದ್ದರು.



 

Thursday, August 13, 2020

 74ನೇ  ಸ್ವಾತಂತ್ರ್ಯ ದಿನಾಚರಣೆ ಯ ಅಂಗವಾಗಿ  ಸಮಾಜ ವಿಜ್ಞಾನ ಸಂಘದ ವತಿಯಿಂದ ಮಂಜೇಶ್ವರ  ಉಪಜಿಲ್ಲಾ  ಮಟ್ಟದಲ್ಲಿ  ನಡೆದ " ONLINE  ಭಾಷಣದ ಸ್ಪರ್ಧೆಯಲ್ಲಿ   ಹೈಸ್ಕೂಲ್ ವಿಭಾಗ ದಲ್ಲಿ  ಶ್ರೀ ದುರ್ಗಾ ಪರಮೇಶ್ವರಿ ಹೈಯರ್ ಸೆಕಂಡರಿ ಶಾಲೆಯ    ಕುಮಾರಿ . ಪೂರ್ಣಿಮಾ  ಕೆ.ಯಂ  ಪ್ರಥಮ ಸ್ಥಾನ  ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆ ಯಾಗಿದ್ದಾಳೆ.


 





Sunday, August 09, 2020

 *ಶ್ರೀ ದುರ್ಗಾ ಪರಮೇಶ್ವರಿ ಹೈಯರ್ ಸೆಕಂಡರಿ ಶಾಲೆ ಧರ್ಮತ್ತಡ್ಕ* 


 74ನೇ  ಸ್ವಾತಂತ್ರ್ಯ ದಿನಾಚರಣೆ ಯ ಅಂಗವಾಗಿ  ಸಮಾಜ ವಿಜ್ಞಾನ ಸಂಘದ ವತಿಯಿಂದ ಶಾಲಾ ಮಟ್ಟದಲ್ಲಿ  ನಡೆದ " ONLINE  ಭಾಷಣದ ಸ್ಪರ್ಧೆಯ ವಿಜಯಿಗಳು..


💐 ಪ್ರಥಮ ಸ್ಥಾನ: 

ಕು. ಪೂರ್ಣಿಮಾ KM 10 C


💐 ದ್ವಿತೀಯ  ಸ್ಥಾನ: ಕು.ರಾಮ್  ಸ್ವರೂಪ್  ಆಳ್ವ 8E 


💐ತೃತೀಯ  ಸ್ಥಾನ: 

ಕು.  ಪ್ರಬೋಧ  10D 

ಕು.  ಅರುಣ  8D

ವಿಜೇತರಿಗೆ ಅಭಿನಂದನೆಗಳು.

Wednesday, July 01, 2020

💥SDPHSS DHARMATHADKA
SSLC Result Highlights.
176 out of 181 students got Eligiblity for Higher studies.
💥10 students got full A+
💥6 students got A+ in 9 subjects.Just missed in one subject.

💥7 Students got A+ in 8 subjects.Just missed in 2 subjects.
Congrates to all achievers & winners👏👏👏










Sunday, May 31, 2020

ಸುದೀರ್ಘ ಕಾಲ ಅಧ್ಯಾಪನ ಸೇವೆ ಸಲ್ಲಿಸಿ ವಿಶ್ರಾಂತ ಜೀವನ ಕ್ಕೆ ಅಡಿಯಿಡುತ್ತಿರುವ ಶ್ರೀ ದುರ್ಗಾಪರಮೇಶ್ವರಿ ಹೈಸ್ಕೂಲ್ ಧರ್ಮತ್ತಡ್ಕ ದ ಅಧ್ಯಪಾಕರದ  *ಶ್ರೀಯುತ ಕೆ ನರಸಿಂಹ ರಾಜ*  ಸರ್ ಮತ್ತು *ಶ್ರೀಯುತಅಶೋಕ್ ಕುಮಾರ್ ಟಿ *  ಸರ್ ಇವರಿಗೆ 
ಮನತುಂಬಿದ ಹಾರೈಕೆ ಗಳು💐🌹💐   


Monday, May 25, 2020

Fire and Rescue

ಮೇ 26 ಪುನರಾರಂಭಗೊಳ್ಳಲಿರುವ SSLC ಪರೀಕ್ಷೆಗೆ ಬೇಕಾಗಿ ಶಾಲಾ ತರಗತಿ ಕೋಣೆಗಳು ಹಾಗೂ ಪರಿಸರವನ್ನು ಅಣು ಮುಕ್ತ ಗೊಳಿಸುತ್ತಿರುವ Fire and Rescue ವಿಭಾಗದ ನೌಕರರು.







Friday, May 22, 2020

https://docs.google.com/forms/d/e/1FAIpQLSckfS6Q3NEEknJpVVUXH_4STJNWr8gRcMTWKiOYvUJsDIte8w/viewform


Admission Started

ಶಾಲಾ ಪ್ರವೇಶಾತಿ ಆರಂಭ

 ಧರ್ಮತ್ತಡ್ಕ ಪ್ರೌಢ  ಶಾಲೆಗೆ ಆನ್ಲೖೆನ್ ಮೂಲಕ ಶಾಲಾ ಪ್ರವೇಶ(school Admission) ಪಡೆಯಬಹುದು. ಇದರೊಂದಿಗೆ ಇರುವ ಲಿಂಕ್ ಬಳಸಿ ಇಂದೇ ಪ್ರವೇಶದಾಖಲಾತಿ ಮಾಡಿಕೊಳ್ಳಬಹುದು.🏃‍♂️🏃🏻‍♀️

ಸೂಚನೆ👉 ಆನ್ಲೈನ್ ಅರ್ಜಿಯನ್ನು ಪೂರ್ತಿಗೊಳಿಸಿದ ಬಳಿಕ, ಹೆತ್ತವರು ಮಗುವಿನ TC/ಜನನ ಪ್ರಮಾಣಪತ್ರ ದಾಖಲೆಗಳೊಂದಿಗೆ ಶಾಲೆಗೆ ಬಂದು, ದಾಖಾಲಾತಿಯ ಪ್ರಕ್ರಿಯೆಯನ್ನು ಪೂರ್ತಿಗೊಳಿಸಬೇಕು






OR SCAN THE QR CODE







"ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವ ಹಾಗೂ ಬದುಕಿನ ಗುರಿ ಸಾಧನೆ" ಎಂಬ ವಿಷಯದ ಕುರಿತು ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಶ್ರೀಯುತ ನವೀನ್ ಎಲ್ಲಂಗಳ Naveen Ellangala ತರಗತಿಯನ್ನು ನಡೆಸಿಕೊಟ್ಟರು










Fire & Safety class




SSLC SEND OFF FUNCTION







"BREAK THE CHAIN" Campaign against Corona Virus........